ಪಾರ್ಟಿ ಮಾಡಿ ಸ್ನೇಹಿತೆಯರ ಮೇಲೆ ಅತ್ಯಾಚಾರಕ್ಕೆ ಯತ್ನ: ಇಬ್ಬರು ಯುವಕರ ಬಂಧನ

ಆದಿತ್ಯ ಮತ್ತು‌ ಅಜಯ್ ಬಂಧಿತ ಆರೋಪಿಗಳು. ನೊಂದ ಯುವತಿಯರು ಹಾಗೂ ಆರೋಪಿ ಯುವಕರು ಉತ್ತರ ಭಾರತದ ಖಾಸಗಿ ಯೂನಿವರ್ಸಿಟಿಯಲ್ಲಿ ಸಹಪಾಠಿಗಳಾಗಿದ್ದರು. ಸದ್ಯ  ಬೆಂಗಳೂರಿನ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು.

Written by - VISHWANATH HARIHARA | Edited by - Manjunath N | Last Updated : Feb 7, 2023, 04:58 PM IST
  • ಮತ್ತೋರ್ವ ಯುವತಿಯ ಖಾಸಗಿ ಭಾಗಗಳನ್ನ ಮುಟ್ಟಿ ಕಿರುಕುಳ ನೀಡಿದ್ದಾನೆ
  • ಸ್ನೇಹಿತರಿಬ್ಬರ ವರ್ತನೆಯಿಂದ ನೊಂದು ಯುವತಿಯರು ಬಾತ್ ರೂಮ್ ನಲ್ಲಿ ಲಾಕ್ ಮಾಡಿಕೊಂಡಿದ್ದರು
  • ನಂತರ ನಿನ್ನೆ ಬೆಳಗ್ಗೆ ವಿವೇಕನಗರ ಠಾಣೆಗೆ ಬಂದು ದೂರು ನೀಡಿದ್ದರು.
ಪಾರ್ಟಿ ಮಾಡಿ ಸ್ನೇಹಿತೆಯರ ಮೇಲೆ ಅತ್ಯಾಚಾರಕ್ಕೆ ಯತ್ನ: ಇಬ್ಬರು ಯುವಕರ ಬಂಧನ title=

ಬೆಂಗಳೂರು : ಪಾರ್ಟಿ ಮಾಡೋಕೆ ಕರೆದು ಸ್ನೇಹಿತೆಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನ ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಅಧಿಕಾರದಿಂದ ಕಿತ್ತು ಕೆಳಗಿಳಿಸಿದರೂ ಕಾಂಗ್ರೆಸ್ ನಾಯಕರ ಮದ ಇಳಿಯುತ್ತಿಲ್ಲ: ಬಿಜೆಪಿ ಟೀಕೆ

ಆದಿತ್ಯ ಮತ್ತು‌ ಅಜಯ್ ಬಂಧಿತ ಆರೋಪಿಗಳು. ನೊಂದ ಯುವತಿಯರು ಹಾಗೂ ಆರೋಪಿ ಯುವಕರು ಉತ್ತರ ಭಾರತದ ಖಾಸಗಿ ಯೂನಿವರ್ಸಿಟಿಯಲ್ಲಿ ಸಹಪಾಠಿಗಳಾಗಿದ್ದರು. ಸದ್ಯ  ಬೆಂಗಳೂರಿನ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಫೆಬ್ರವರಿ 5ರ ಭಾನುವಾರ ರಾತ್ರಿ ಪಾರ್ಟಿ ಮಾಡುವ ನೆಪದಲ್ಲಿ ಸ್ನೇಹಿತೆಯರನ್ನ ಆರೋಪಿಗಳು ತಾವಿದ್ದ ವಿವೇಕನಗರದ ಎಸ್.ಟಿ.ಬೆಡ್ ಏರಿಯಾಗೆ ಕರೆಸಿಕೊಂಡಿದ್ದರು. ನಂತರ ಎಲ್ಲರು ಸೇರಿ ರಾತ್ರಿ 2 ಗಂಟೆಯವರೆಗೂ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ‌.

ಇದನ್ನೂ ಓದಿ : ಟಿ 20 ಕ್ರಿಕೆಟ್ ಗೆ ವಿದಾಯ ಘೋಷಿಸಿದ ಆಸ್ಟ್ರೇಲಿಯಾದ ಈ ಸ್ಟಾರ್ ಆಟಗಾರ..! 

ಮದ್ಯದ ಅಮಲಿನಲ್ಲಿ 20 ವರ್ಷದ ಯುವತಿಯ ಮೇಲೆ ಆರೋಪಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದು ಮತ್ತೋರ್ವ ಯುವತಿಯ ಖಾಸಗಿ ಭಾಗಗಳನ್ನ ಮುಟ್ಟಿ ಕಿರುಕುಳ ನೀಡಿದ್ದಾನೆ. ಸ್ನೇಹಿತರಿಬ್ಬರ ವರ್ತನೆಯಿಂದ ನೊಂದು ಯುವತಿಯರು ಬಾತ್ ರೂಮ್ ನಲ್ಲಿ ಲಾಕ್ ಮಾಡಿಕೊಂಡಿದ್ದರು. ನಂತರ ನಿನ್ನೆ ಬೆಳಗ್ಗೆ ವಿವೇಕನಗರ ಠಾಣೆಗೆ ಬಂದು ದೂರು ನೀಡಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡ ವಿವೇಕನಗರ ಪೊಲೀಸರು ಇಬ್ಬರೂ ಆರೋಪಿಗಳನ್ನ ಬಂಧಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News