ವಂಶವೃಕ್ಷ, ದಾಟು, ತಂತು, ಪರ್ವ, ಗೃಹಭಂಗ, ಸಾರ್ಥ, ಮಂದ್ರ ಸೇರಿದಂತೆ ಹಲವಾರ ಕಾದಂಬರಿಗಳನ್ನು ರಚಿಸಿದ್ದಾರೆ. ಹಿಂದಿ, ಮರಾಠಿ, ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಭೈರಪ್ಪನವರ ಕಾದಂಬರಿಗಳು ಅನುವಾದಗೊಂಡಿವೆ.

Renowned Kannada Novelist SL Bhyrappa
: ಕರ್ನಾಟಕದ ಸಾಕ್ಷಿಪ್ರಜ್ಞೆ, ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟೋತ್ತಾನ ಆಸ್ಪತ್ರೆಯಲ್ಲಿ ಕನ್ನಡ ಖ್ಯಾತ ಸಾಹಿತಿ ನಿಧರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ವಂಶವೃಕ್ಷ, ದಾಟು, ತಂತು, ಪರ್ವ, ಗೃಹಭಂಗ, ಸಾರ್ಥ, ಮಂದ್ರ ಸೇರಿದಂತೆ ಹಲವಾರ ಕಾದಂಬರಿಗಳನ್ನು ರಚಿಸಿದ್ದಾರೆ. ಹಿಂದಿ, ಮರಾಠಿ, ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಭೈರಪ್ಪನವರ ಕಾದಂಬರಿಗಳು ಅನುವಾದಗೊಂಡಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸರಸ್ವತಿ ಸಮ್ಮಾನ್, ಪದ್ಮಭೂಷಣ, ಪದ್ಮಶ್ರೀ ಹಾಗೂ ನಾಡೋಜ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಭೈರಪ್ಪನವರ ಕೃತಿಗಳು ಹಾಗೂ ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳ ಸಂಪೂರ್ಣ ಮಾಹಿತಿ ಇಲ್ಲಿದೆ...
ಕಾದಂಬರಿಗಳು
* ಭೀಮಕಾಯ
* ಬೆಳಕು ಮೂಡಿತು
* ಧರ್ಮಶ್ರೀ - (1961)
* ದೂರ ಸರಿದರು- (1962)
* ಮತದಾನ - (1965)
* ವಂಶವೃಕ್ಷ- (1965)
* ಜಲಪಾತ (ಕಾದಂಬರಿ)- (1967)
* ನಾಯಿ ನೆರಳು- (1968)
* ತಬ್ಬಲಿಯು ನೀನಾದೆ ಮಗನೆ-(1968)
* ಗೃಹಭಂಗ-(1970)
* ನಿರಾಕರಣ-(1971)
* ಗ್ರಹಣ-(1972)
* ದಾಟು -(1973)
* ಅನ್ವೇಷಣ-(1976)
* ಪರ್ವ-(1979)
* ನೆಲೆ -(1983)
* ಸಾಕ್ಷಿ -(1986)
* ಅಂಚು-(1990)
* ತಂತು -(1993)
* ಸಾರ್ಥ-(1998)
* ಮಂದ್ರ-(2001)
* ಆವರಣ-(2007)
* ಕವಲು - (2010)
* ಯಾನ - (2014)
* ಉತ್ತರಕಾಂಡ-(2017)
ಆತ್ಮ ಚರಿತ್ರೆ
* ಭಿತ್ತಿ
ತತ್ತ್ವಶಾಸ್ತ್ರ
* ಸತ್ಯ ಮತ್ತು ಸೌಂದರ್ಯ (1966) - ಪಿ.ಎಚ್.ಡಿ ಪ್ರಬಂಧ
* ಸಾಹಿತ್ಯ ಮತ್ತು ಪ್ರತೀಕ (1967)
* ಕಥೆ ಮತ್ತು ಕಥಾವಸ್ತು (1969)
* ಸಂದರ್ಭ: ಸಂವಾದ (2011)
ಇತರೆ ಬರಹಗಳು
* ನಾನೇಕೆ ಬರೆಯುತ್ತೇನೆ? (1980)
ಇತರ ಭಾಷೆಗಳಿಗೆ ಅನುವಾದವಾಗಿರುವ ಕಾದಂಬರಿಗಳು
* ಧರ್ಮಶ್ರೀ - ಸಂಸ್ಕೃತ, ಮರಾಠಿ
* ವಂಶವೃಕ್ಷ - ತೆಲುಗು, ಮರಾಠಿ, ಹಿಂದಿ, ಉರ್ದು, ಇಂಗ್ಲಿಷ್
* ನಾಯಿ ನೆರಳು - ಗುಜರಾತಿ, ಹಿಂದಿ
* ತಬ್ಬಲಿಯು ನೀನಾದೆ ಮಗನೆ - ಹಿಂದಿ
* ಗೃಹಭಂಗ - ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದವಾಗಿದೆ
* ನಿರಾಕರಣ -ಹಿಂದಿ
* ದಾಟು - ಇಂಗ್ಲಿಷ್, ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದವಾಗಿದೆ
* ಅನ್ವೇಷಣ -ಹಿಂದಿ, ಮರಾಠಿ
* ಪರ್ವ -ಹಿಂದಿ, ಮರಾಠಿ, ಇಂಗ್ಲಿಷ್, ತೆಲುಗು, ಬೆಂಗಾಲಿ, ತಮಿಳು
* ನೆಲೆ -ಹಿಂದಿ
* ಸಾಕ್ಷಿ - ಹಿಂದಿ, ಇಂಗ್ಲಿಷ್
* ಅಂಚು -ಹಿಂದಿ, ಮರಾಠಿ
* ತಂತು -ಹಿಂದಿ, ಮರಾಠಿ
* ಸಾರ್ಥ -ಹಿಂದಿ, ಮರಾಠಿ, ಇಂಗ್ಲಿಷ್, ಸಂಸ್ಕೃತ
* ನಾನೇಕೆ ಬರೆಯುತ್ತೇನೆ -ಮರಾಠಿ
* ಸತ್ಯ ಮತ್ತು ಸೌಂದರ್ಯ -ಇಂಗ್ಲಿಷ್
* ಭಿತ್ತಿ -ಹಿಂದಿ, ಮರಾಠಿ
ಚಲನಚಿತ್ರವಾಗಿರುವ ಕಾದಂಬರಿಗಳು
* ವಂಶವೃಕ್ಷ - 1972
* ತಬ್ಬಲಿಯು ನೀನಾದೆ ಮಗನೆ - 1977
* ಮತದಾನ - 2001
* ನಾಯಿ ನೆರಳು - 2006
* ಟಿ.ವಿ. ಧಾರಾವಾಹಿಯಾಗಿರುವ ಕಾದಂಬರಿಗಳು
* ಗೃಹಭಂಗ
* ದಾಟು (ಹಿಂದಿ)
ಪ್ರಶಸ್ತಿ/ಗೌರವಗಳು
* ೨೦೨೩ರಲ್ಲಿ ಪದ್ಮಭೂಷಣ ಪ್ರಶಸ್ತಿ.
* ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ - 2014
* ನಾಡೋಜ ಪ್ರಶಸ್ತಿ - 2011
* ಸರಸ್ವತಿ ಸಮ್ಮಾನ್ ಪ್ರಶಸ್ತಿ (ಮಂದ್ರ ಕಾದಂಬರಿಗೆ)- 2010
* ಪಂಪ ಪ್ರಶಸ್ತಿ - 2005
*ಎನ್ಟಿಆರ್ ರಾಷ್ಟ್ರೀಯ ಪ್ರಶಸ್ತಿ- 2007
* ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟು- 2007
* ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ದಾಟು ಕಾದಂಬರಿಗೆ)- 1975
* ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ವಂಶವೃಕ್ಷ ಕಾದಂಬರಿಗೆ) -1966
* ವಾಗ್ವಿಲಾಸಿನಿ ಪುರಸ್ಕಾರ್ (ದೀನನಾಥ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ)- 2012 (ಗಾನಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ ಅವರು ತಮ್ಮ ತಂದೆ ದೀನನಾಥ ಮಂಗೇಶ್ಕರ್ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಸ್ಮೃತಿ ಪ್ರತಿಷ್ಠಾನ ಈ ಪುರಸ್ಕಾರ ನೀಡುತ್ತಿತ್ತು. ಇದುವರೆಗೂ 20 ಲೇಖಕರಿಗೆ ಈ ಪುರಸ್ಕಾರ ನೀಡಲಾಗಿದ್ದು, ಈ ಪೈಕಿ 18 ಮರಾಠಿ ಲೇಖಕರು ಹಾಗೂ ಇಬ್ಬರು ಸಿನಿಮಾ ಸಾಹಿತ್ಯ ಕ್ಷೇತ್ರದ ಜಾವೆದ್ ಅಖ್ತರ್ ಮತ್ತು ಮಜರೂರ ಸುಲ್ತಾನಪುರಿ ಸೇರಿದ್ದಾರೆ. ಮಹಾರಾಷ್ಟ್ರದಾಚೆಗಿನ ಲೇಖಕರ ಪೈಕಿ ಎಸ್.ಎಲ್.ಭೈರಪ್ಪನವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ)
* ರಾಷ್ಟ್ರೀಯ ಪ್ರಾಧ್ಯಾಪಕ (ನ್ಯಾಷನಲ್ ಪ್ರೊಫೆಸರ್)
* ಭೈರಪ್ಪಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ,
* ಗೌರವ ಡಾಕ್ಟರೇಟ್ ಪ್ರದಾನ
* ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ
* ಭೈರಪ್ಪನವರಿಗೆ ಸಹೃದಯ ಓದುಗರ ಸನ್ಮಾನಗಳು