ಪೋಲಿಸ್ ಠಾಣೆಯಲ್ಲೇ ಪೇದೆಗೆ ಸೀಮಂತ ಮಾಡಿ ಸಂಭ್ರಮಿಸಿದ ಸಿಬ್ಬಂದಿ

ಪೇದೆ ರಕ್ಷಿತಾಗೆ ಮೊಡಲಕ್ಕಿ ತುಂಬಿ, ಅರಿಶಿನ-ಕುಂಕುಮ ಇಟ್ಟು, ಹಣ್ಣು ನೀಡಿ ಸೀಮಂತ ಮಾಡಲಾಯಿತು.

Updated: Jul 10, 2018 , 12:24 PM IST
ಪೋಲಿಸ್ ಠಾಣೆಯಲ್ಲೇ ಪೇದೆಗೆ ಸೀಮಂತ ಮಾಡಿ ಸಂಭ್ರಮಿಸಿದ ಸಿಬ್ಬಂದಿ

ಮೈಸೂರು: ಸದಾ ಜನರ ರಕ್ಷಣೆ, ಸಮಾಜ ಸೇವೆಯಲ್ಲೇ ತೊಡಗುವ, ಕೊಲೆ, ಸುಲಿಗೆ ಪ್ರಕರಣಗಳನ್ನು ಇತ್ಯರ್ಥಮಾಡುವುದರಲ್ಲೇ ನಿರತರಾಗಿರುವ ಪೊಲೀಸರು ಇಂದು ಠಾಣೆಯಲ್ಲೇ ಪೇದೆಗೆ ಸೀಮಂತ ಮಾಡಿ ಸಂಭ್ರಮಿಸಿದರು.

ನಗರದ ಸರಸ್ವತಿಪುರಂ ಪೋಲಿಸ್ ಠಾಣೆಯ ಪೇದೆ ರಕ್ಷಿತಾ ಅವರ ಸೀಮಂತ ಕಾರ್ಯವನ್ನು ಪೋಲಿಸ್ ಸಿಬ್ಬಂದಿಗಳೆಲ್ಲಾ ಸೇರಿ ಠಾಣೆಯಲ್ಲೇ ಸಂಪ್ರದಯಬದ್ಧವಾಗಿ ನೆರವೇರಿಸಿದ್ದು ವಿಶೇಷವಾಗಿತ್ತು. 

ಪೇದೆ ರಕ್ಷಿತಾಗೆ ಮೊಡಲಕ್ಕಿ ತುಂಬಿ, ಅರಿಶಿನ-ಕುಂಕುಮ ಇಟ್ಟು, ಹಣ್ಣು ನೀಡಿ ಸೀಮಂತ ಮಾಡಿದ ಮಹಿಳಾ ಸಿಬ್ಬಂದಿಗಳು ಮನೆಮಂದಿಯಂತೆ ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.