ಬಾಗಲಕೋಟೆ: ಕೇಂದ್ರ ಸರಕಾರ ಘೋಷಿಸಿರುವ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಪ್ರತಿ ಕ್ವಿಂಟಲ್‍ಗೆ 6 ಸಾವಿರದಂತೆ ಖರೀದಿಸಲು ಜಿಲ್ಲೆಯಲ್ಲಿ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ಟಾಸ್ಕಪೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತೊಗರಿ ಉತ್ಪನ್ನವನ್ನು ಪ್ರತಿ ಎಕರೆಗೆ 7.5 ಕ್ವಿಂಟಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತ(Farmer)ರಿಂದ 20 ಕ್ವಿಂಟಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ. ತೊಗರಿ ಖರೀದಿಸಲು ನಾಫೆಡ್ ಸಂಸ್ಥೆಯನ್ನು ಕೇಂದ್ರದ ಖರೀದಿ ಎಜೆನ್ಸಿಯಾಗಿ ಹಾಗೂ ರಾಜ್ಯ ಸರಕಾರದಿಂದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ, ಬೆಂಗಳೂರು ಹಾಗೂ ರಾಜ್ಯ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ, ಕಲಬುರ್ಗಿ ಸಂಸ್ಥೆಗಳನ್ನು ರಾಜ್ಯ ಮಟ್ಟದ ಖರೀದಿ ಎಜೇನ್ಸಿಯಾಗಿ ನೇಮಿಸಿದೆ ಎಂದು ತಿಳಿಸಿದರು.


'ಶಾಸಕ ಶರತ್ ಬಚ್ಚೇಗೌಡ ಭೇಟಿಯಾದ ಡಿ.ಕೆ. ಶಿವಕುಮಾರ್'


ಬಾಗಲಕೋಟೆ ತಾಲೂಕಿನ ಟಿ.ಎ.ಪಿಎಂಎಸ್, ಪಿಕೆಪಿಎಸ್ ಹಳ್ಳೂರ, ಹುನಗುಂದ ತಾಲೂಕಿನ ಟಿ.ಎಪಿಎಮೆಸ್ ಹುನಗುಂದ, ಪಿಕೆಪಿಎಸ್ ನಂದವಾಡಗಿ, ಕೂಡಲಸಂಗಮ, ಹಿರೇ ಆದಾಪೂರ, ಕಂದಗಲ್ಲ, ಚಿಕ್ಕಸಿಂಗನಗುತ್ತಿ, ಹುನಗುಂದ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಸುಳೇಬಾವಿ,ಅಮರತ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಅಮರಾವತಿ, ಚಾಲುಕ್ಯ ರೈತ ಉತ್ಪಾದಕ ಸಂಸ್ಥೆ ಮೂಗನೂರು, ಪಿ.ಕೆ.ಪಿ.ಎಸ್ ಬಾದಾಮಿ, ಕೆರೂರ, ಟಿ.ಎ.ಪಿ.ಸಿ.ಎಂ.ಎಸ್ ಬೀಳಗಿ, ಮುಧೋಳ, ಜಮಖಂಡಿ, ಪಿಕೆಪಿಎಸ್ ಸಾವಳಗಿ, ಗೋಠೆ, ಜಮಖಂಡಿ ಹಾರ್ಟಿಕಲ್ಚರ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ತೊದಲಬಾಗಿ ಸೇರಿ ಒಟ್ಟು 17 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.


'ಕಾಂಗ್ರೆಸ್ ಕಾರ್ಯಕರ್ತರ' ಮೇಲೆ ಅಪರಿಚಿತರಿಂದ ಗುಂಡಿನ ದಾಳಿ!


ಖರೀದಿ ಕೇಂದ್ರಗಳಲ್ಲಿ ಬೇಕಾದ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಂಡು ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ನೊಂದಣಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ಕೋವಿಡ್-19 ನಿಯಮ ಪಾಲನೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದರು.


ಬೆಳಗಾವಿ ಸಾಹುಕಾರ ಮತ್ತು ಸಿಎಂ ಬಿಎಸ್ ವೈ ನಡುವೆ ಶುರುವಾಗಿದೆ ಕೋಲ್ಡ್ ವಾರ್..!


ತೊಗರಿ ಉತ್ಪನ್ನವನ್ನು ಪರೀಕ್ಷಿಸಲು ಸಲುವಾಗಿ ಪ್ರತಿ ಖರೀದಿ ಕೇಂದ್ರಕ್ಕೆ ಒಬ್ಬ ಅನುಭವಿ ಗ್ರೇಡರ್‍ರನ್ನು ನೇಮಿಸಲು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಖರೀದಿ ಕೇಂದ್ರಕ್ಕೆ ನಿಯೋಜಿಸಿದ ವ್ಯವಸ್ಥಾಪಕರು ಹಾಗೂ ಖರೀದಿ ಕೇಂದ್ರ ಸಿಬ್ಬಂದಿಯಿಂದ ಪಾರದರ್ಶಕವಾಗಿ ರೈತರಿಗೆ ಅನ್ಯಾಯವಾಗದಂತೆ ನೋಂದಣಿ ಕಾರ್ಯ ಅಚ್ಚುಕಟ್ಟಾಗಿ ನಡೆಯಬೇಕು. ಲೋಪದೋಷವಾಗದಂತೆ ಎಚ್ಚರ ವಹಿಸಬೇಕು. ಖರೀದಿಗೆ ಅವಶ್ಯಕತೆ ಇರುವ ಖಾಲಿ ಗೋಣಿ ಚೀಲಗಳ ಬೇಡಿಗೆಯನ್ನು ಸಹಕಾರಿ ಮಹಾಮಂಡಳಿಗೆ ಸಲ್ಲಿಸತಕ್ಕದ್ದು ಎಂದು ತಿಳಿಸಿದರು.


ಕನ್ನಡ ಗ್ರಂಥಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ


ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಲ್ಲಿ ವರ್ತಕರು ತರುವ ತೊಗರಿ ಉತ್ಪನ್ನವನ್ನು ಖರೀದಿಸದಂತೆ ಹಾಗೂ ಖರೀದಿ ಕೇಂದ್ರದಲ್ಲಿ ಯಾವುದೇ ರೀತಿಯ ದುರುಪಯೋಗ ಆಗದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಆಯಾ ತಾಲೂಕಿನ ತಹಶೀಲ್ದಾರರು ಮೇಲುಸ್ತುವಾರಿಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲು ಸೂಚಿಸಿದರು. ಖರೀದಿ ಪ್ರಕ್ರಿಯೆ ಸುಗಮವಾಗಿ ಜರುಗಲು ಪೊಲೀಸ್ ಇಲಾಖೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸೂಚಿಸಿದರು.


ಕನ್ನಡದಲ್ಲಿ ಮಾಹಿತಿ ನೀಡದ ಏರ್ ಲೈನ್ಸ್ ವಿರುದ್ಧ ಐಎಎಸ್ ಅಧಿಕಾರಿ ಆಕ್ರೋಶ