)
Ballari Banner Riot: ಬಳ್ಳಾರಿ ಗುಂಡಿನ ದಾಳಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಘಟನಾ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ಸ್ಥಳದಲ್ಲಿ ಬುಲೆಟ್ ಪತ್ತೆ ಮಾಡಿದೆ. ಬುಲೆಟ್ ಸಿಕ್ಕಿರುವ ಜಾಗದಲ್ಲಿ ಭರತ್ ರೆಡ್ಡಿ ಮೊದಲು ಅಲ್ಲಿಯೇ ನಿಂತಿದ್ರು. ಭರತ್ ರೆಡ್ಡಿ ಕಡೆಗೂ ಹಾರಿತ್ತಾ ಗುಂಡು? ಅನ್ನೋ ಪ್ರಶ್ನೆ ಕಾಡ್ತಿದೆ. ಜನಾರ್ದನ ರೆಡ್ಡಿ ಮನೆ ಕಡೆಯಿಂದಲೂ ಹಾರಿತ್ತಾ ಬುಲ್ಲೆಟ್? ಕಾಂಗ್ರೆಸ್ ಹಾರಿಸಿದ್ದ ಗುಂಡಾಗಿದ್ರೇ ಅದು ಜನಾರ್ದನ ರೆಡ್ಡಿ ಮನೆ ಕಡೆಗೆ ಬಳಿ ಸಿಗಬೇಕಿತ್ತು. ಆದ್ರೇ ಬುಲೆಟ್ ಸಿಕ್ಕಿರೋದು ಕಾಂಗ್ರೆಸ್ ನವರು ನಿಂತ ರಸ್ತೆ ಬಳಿ ಈಗ ಬುಲೆಟ್ ಪತ್ತೆಯಾಗಿರೋದು ಸಾಕಷ್ಟು ಅನುಮಾನಕ್ಕೆ ಕಾಣವಾಗಿದೆ.
ಹೌದು ಬಳ್ಳಾರಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಫೈರಿಂಗ್ ಪ್ರಕರಣದ ಗಂಭೀರತೆಯನ್ನು ಗಮನಿಸಿ, ಹುಬ್ಬಳ್ಳಿಯಿಂದ ಬಾಂಬ್ ನಿಷ್ಕ್ರಿಯ ದಳ, ಬ್ಯಾಲಿಸ್ಟಿಕ್ ತಜ್ಞರು ಹಾಗೂ ಫಾರೆನ್ಸಿಕ್ (SUCO/FSL) ತಂಡಗಳನ್ನು ಕರೆಸಲಾಗಿತ್ತು. ಘಟನಾ ಸ್ಥಳದಲ್ಲಿ ಒಟ್ಟು ಏಳು ರೌಂಡ್ ಫೈರಿಂಗ್ ನಡೆದಿದೆ ಎನ್ನಲಾಗಿದ್ದು, NLJD ಮತ್ತು DSMD ಯಂತ್ರಗಳ ಮೂಲಕ ಸ್ಥಳದ ಇಂಚಿಂಚು ಪರಿಶೀಲನೆ ನಡೆಸಲಾಗಿದೆ. ಪೊಲೀಸರು ಸೀನ್ ರಿಕ್ರಿಯೇಟ್ ಮಾಡಿ, ಘಟನೆ ನಡೆದ ದಿನ ಏನೆಲ್ಲ ಸಂಭವಿಸಿತು ಎಂಬುದನ್ನು ಪುನರ್ ನಿರ್ಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಐಜಿ ವರ್ತಿಕಾ ಅವರಿಂದ ಮಾಹಿತಿ ಪಡೆದು ತನಿಖಾ ತಂಡ ಕಾರ್ಯಾಚರಣೆ ನಡೆಸಿದೆ. ಜನಾರ್ದನ ರೆಡ್ಡಿ ಮನೆಗೆ ಹೋಗುವ ದಾರಿಯನ್ನು ಸಂಪೂರ್ಣ ಬಂದ್ ಮಾಡಿ, ಯಾರನ್ನೂ ಒಳಗೆ ಬಿಡದೇ ಪರಿಶೀಲನೆ ನಡೆಸಲಾಗಿದೆ. ಮನೆ ಎದುರು ನೆಲಕ್ಕೆ ಬಿದ್ದಿದ್ದ ಕಾರ್ಟ್ರಿಜ್ ಹಾಗೂ ಗುಂಡಿನ ತುಣುಕುಗಳನ್ನು ವಶಕ್ಕೆ ಪಡೆದು ಪರಿಶೀಲನೆಗೆ ಕಳುಹಿಸಲಾಗಿದೆ. 9MM ಬುಲೆಟ್ ಸ್ಥಳದಲ್ಲೆ ಪತ್ತೆಯಾಗಿದ್ದು, ಈ ಸಾಕ್ಷ್ಯಗಳು ಪೊಲೀಸರ ತನಿಖೆಗೆ ಮಹತ್ವದ ದಾಖಲೆಗಳಾಗಿವೆ.
ವಿಶ್ಯೂವಲ್ಸ್
ಇನ್ನೂ ರಾಜಶೇಖರ ಪೋಸ್ಟ್ ಮಾರ್ಟಂ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಬಿ. ಶ್ರೀರಾಮುಲು, ರಾಜಶೇಖರ ಎದೆಗೆ ಹೊಕ್ಕ ಗುಂಡು ಸತೀಶ್ ರೆಡ್ಡಿ ಅವರ ಗನ್ನದ್ದೇ ಎಂದು ಸಾಬೀತಾಗಿದೆ. ಈಗಾಗಲೇ ಹಲವು ತಂಡಗಳು ತನಿಖೆ ನಡೆಸುತ್ತಿವೆ. ಪ್ರಕರಣದಲ್ಲಿ ಎಲ್ಲ ಅಂಶಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ. ರಾಜಶೇಖರನ ದೇಹವನ್ನು ಎರಡು ಬಾರಿ ಪೋಸ್ಟ್ ಮಾರ್ಟಂ ಮಾಡಿದ್ದೇಕೆ? ಈ ಸಂಬಂಧ ಭರತ್ ರೆಡ್ಡಿ, ಸತೀಶ್ ರೆಡ್ಡಿನ ಬಂಧನ ಮಾಡಬೇಕು.. ಇಲ್ಲವಾದಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡ್ತೀನಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ..
ಬಳ್ಳಾರಿ ಗಲಾಟೆ ವೇಳೆ ಸಾವನ್ನಪ್ಪಿದ ರಾಜಶೇಖರ ಅವರ ಸಾವಿನ ಕುರಿತು ಕೂಡ ಮತ್ತೊಂದು ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಜನವರಿ 1ರ ರಾತ್ರಿ ನಡೆದ ಘಟನೆಯಲ್ಲಿ ರಾಜಶೇಖರ ಮೃತಪಟ್ಟಿದ್ದು, ಜನವರಿ 2ರ ಬೆಳಗ್ಗೆ 6ಗಂಟೆಗೆ ಮೊದಲ ಪೋಸ್ಟ್ ಮಾರ್ಟಮ್ ನಡೆಸಲಾಗಿದೆ. ಆದರೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಮತ್ತೆ ಪೋಸ್ಟ್ ಮಾರ್ಟಮ್ ಮಾಡಲಾಗಿದೆ. ಈ ವೇಳೆ ಎದೆ ಭಾಗದಿಂದ ತೆಗೆದ ಬುಲೆಟ್ ತುಂಡುಗಳನ್ನು ಫಾರೆನ್ಸಿಕ್ ಲ್ಯಾಬ್ಗೆ ಕಳುಹಿಸಲಾಗಿದೆ. ಪೋಸ್ಟ್ ಮಾರ್ಟಮ್ ಅನ್ನು ಡಾ. ಯೋಗೇಶ್ ಅವರು ನಡೆಸಿದ್ದು, ವರದಿಯನ್ನು ಫೊರೆನ್ಸಿಕ್ ವಿಭಾಗದ ಮುಖ್ಯಸ್ಥ ಡಾ. ಚೈತನ್ಯ ಅವರು ನೀಡಿದ್ದಾರೆ. ತನಿಖೆಯನ್ನು ನಿಷ್ಠಪಕ್ಷಪಾತವಾಗಿ ನಡೆಸಬೇಕು..ಇದರಿಂದ ಯಾರಿದ್ದಾರೆ ಎಂದು ತಿಳಿಯಬೇಕು ಎಂದು ರೆಡ್ಡಿ ಒತ್ತಾಯಿಸಿದ್ರು..
ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ವಿಡಿಯೋ ಭರತ್ ರೆಡ್ಡಿ ಕೂಡ ಬಹಿರಂಗವಾಗ ಪಡಿಸಿದ್ದಾರೆ ಪ್ರಚೋದನೆ ನೀಡಿದ್ದು ಜನಾರ್ದನ ರೆಡ್ಡಿ ಬೆಂಬಲಿಗರೇ ಎಂಬ ಆರೋಪ ಕೇಳಿಬಂದಿದೆ. ಜನಾರ್ದನ ರೆಡ್ಡಿ ಮನೆಯ ಮುಂದೆ ಬ್ಯಾನರ್ ತೆರವು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡರ ಮೇಲೆ ಮೊದಲು ದಾಳಿ ನಡೆಸಿದ್ದು ಜನಾರ್ದನ ರೆಡ್ಡಿ ಕಡೆಯವರೇ ಎನ್ನಲಾಗಿದೆ. ಈ ವೇಳೆ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹಾಗೂ ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಒಟ್ಟಾರೆ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.