ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿದ್ದರೂ BIEC ಕೋವಿಡ್ ಕೇರ್ ಸೆಂಟರ್ ಸ್ಥಗಿತಗೊಳಿಸಲು ನಿರ್ಧಾರ

ಇತ್ತೀಚಿನ ವಾರಗಳಲ್ಲಿ BIEC ಯಲ್ಲಿ ದಾಖಲಾತಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ ಎಂದು ಕೋವಿಡ್ ಕೇರ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ರಾಜೇಂದರ್ ಕುಮಾರ್ ಕಟಾರಿಯಾ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Last Updated : Sep 7, 2020, 12:06 PM IST
  • ರಾಜ್ಯದಲ್ಲಿ‌ ಈಗ ಪ್ರತಿದಿನ ಸುಮಾರು ಹತ್ತು ಸಾವಿರ COVID-19 ಸೋಂಕಿತರು ಪತ್ತೆಯಾಗುತ್ತಿದ್ದಾರೆ‌.
  • ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿಲ್ಲ ಎಂದು ರಾಜ್ಯ ಸರ್ಕಾರ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (Benglore International Exhibition Center) ನಲ್ಲಿ ಸ್ಥಾಪಿಸಿದ್ದ ಕೋವಿಡ್ ಕೇರ್ ಸೆಂಟರ್ (COVID Care Center) ಅನ್ನು ಸೆಪ್ಟೆಂಬರ್ 15ರಿಂದ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ
  • ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ನಲ್ಲಿ ಕೋವಿಡ್ ಕೇರ್ ಸೆಂಟರ್ (COVID Care Center) ಸ್ಥಾಪಿಸಿದ್ದಾಗ ಹಾಸಿಗೆಗಳು ಮತ್ತು ಪೀಠೋಪಕರಣಗಳನ್ನು ಹೆಚ್ಚಿನ ವೆಚ್ಚದಲ್ಲಿ ಬಾಡಿಗೆಗೆ ತರಲಾಗಿದೆ ಎಂದು ಚರ್ಚೆಯಾಗಿತ್ತು.‌
ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿದ್ದರೂ BIEC ಕೋವಿಡ್ ಕೇರ್ ಸೆಂಟರ್ ಸ್ಥಗಿತಗೊಳಿಸಲು ನಿರ್ಧಾರ title=

ಬೆಂಗಳೂರು: ರಾಜ್ಯದಲ್ಲಿ‌ ಈಗ ಪ್ರತಿದಿನ ಸುಮಾರು ಹತ್ತು ಸಾವಿರ COVID-19 ಸೋಂಕಿತರು ಪತ್ತೆಯಾಗುತ್ತಿದ್ದಾರೆ‌. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿಲ್ಲ ಎಂದು ರಾಜ್ಯ ಸರ್ಕಾರ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (Benglore International Exhibition Center) ನಲ್ಲಿ ಸ್ಥಾಪಿಸಿದ್ದ ಕೋವಿಡ್ ಕೇರ್ ಸೆಂಟರ್ (COVID Care Center) ಅನ್ನು ಸೆಪ್ಟೆಂಬರ್ 15ರಿಂದ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ನಲ್ಲಿ ಕೋವಿಡ್ ಕೇರ್ ಸೆಂಟರ್ (COVID Care Center) ಸ್ಥಾಪಿಸಿದ್ದಾಗ ಹಾಸಿಗೆಗಳು ಮತ್ತು ಪೀಠೋಪಕರಣಗಳನ್ನು ಹೆಚ್ಚಿನ ವೆಚ್ಚದಲ್ಲಿ ಬಾಡಿಗೆಗೆ ತರಲಾಗಿದೆ ಎಂದು ಚರ್ಚೆಯಾಗಿತ್ತು.‌ ರಾಜ್ಯ ಬಿಜೆಪಿ ಸರ್ಕಾರ ಕೊರೊನಾ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದೆ ಎಂದು‌ ಹೇಳಲಾಗಿತ್ತು. 10,100 ಹಾಸಿಗೆಗಳ ಸೌಲಭ್ಯವನ್ನುಳ್ಳ ಕೋವಿಡ್ ಕೇರ್ ಸೆಂಟರ್ ಮಾಡುವ ಮೂಲಕ ದೇಶದ ಗಮನ ಸೆಳೆದಿತ್ತು. ವ್ಯಾಪಕವಾದ ಚರ್ಚೆಯಾದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಬಾಡಿಗೆ ತರುವ ಪ್ರಸ್ತಾಪ ಬಿಟ್ಟು ವಸ್ತುಗಳನ್ನು ಖರೀದಿಸಿತ್ತು. ಈಗ ಇಡೀ‌ ಕೋವಿಡ್ ಕೇರ್ ಅನ್ನೇ ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಸೌಮ್ಯ ರೋಗಲಕ್ಷಣದ ಕೋವಿಡ್ -19 (Covid 19) ರೋಗಿಗಳಿಗೆ ಸೇವೆ ಸಲ್ಲಿಸಲು ಈ ಸೌಲಭ್ಯವನ್ನು ಮುಖ್ಯವಾಗಿ ಸ್ಥಾಪಿಸಲಾಯಿತು. ಆದರೆ ಇತ್ತೀಚಿನ ವಾರಗಳಲ್ಲಿ BIEC ಯಲ್ಲಿ ದಾಖಲಾತಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ ಎಂದು ಕೋವಿಡ್ ಕೇರ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ರಾಜೇಂದರ್ ಕುಮಾರ್ ಕಟಾರಿಯಾ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದು, ಈ ಸಲಹೆ ಆಧಾರದ ಮೇಲೆ ಇತ್ತೀಚಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದ ಸಭೆಯಲ್ಲಿ ಕೋವಿಡ್ ಕೇರ್ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ (BBMP) ಆದೇಶದಲ್ಲಿ ತಿಳಿಸಿದೆ.

BIEC ಸೌಲಭ್ಯಕ್ಕಾಗಿ ಖರೀದಿಸಿದ ಹಾಸಿಗೆಗಳು ಮತ್ತು ಪೀಠೋಪಕರಣಗಳನ್ನು ಈಗ ಸರ್ಕಾರಿ ಮತ್ತು ವಿಶ್ವವಿದ್ಯಾಲಯದ ವಸತಿ ನಿಲಯಗಳಿಗೆ ನೀಡಲಾಗುವುದು. ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ 2,500, ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಹಾಸ್ಟೆಲ್ ಗೆ 1,000, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಸ್ಟೆಲ್ ಗೆ1,000 ಮತ್ತು ಬೆಂಗಳೂರಿನ ಜಿಕೆವಿಕೆ ವಿಶ್ವವಿದ್ಯಾನಿಲಯದ ಹಾಸ್ಟೆಲ್ ಗೆ 1,000 ಹಾಸಿಗೆ ಮತ್ತು ಪೀಠೋಪಕರಣಗಳನ್ನು ನೀಡಲಾಗುವುದು. ಉಳಿದ ಪೀಠೋಪಕರಣಗಳನ್ನು ಸರ್ಕಾರಿ ಆಸ್ಪತ್ರೆಗಳು ಮತ್ತು ಹಾಸ್ಟೆಲ್‌ಗಳಿಗೆ ವಿತರಿಸಲಾಗುವುದು ಎಂದು ತಿಳಿದುಬಂದಿದೆ.

Trending News