ಹಂಪಿನಗರದಲ್ಲಿ ಬೆನಕ ಬಿಸ್ಪೋಕ್ ಉಡುಪು ಮಳಿಗೆ ಆರಂಭ: ಗ್ರಾಹಕರ ಇಚ್ಛೆಗೆ ತಕ್ಕಂತೆ ಉಡುಪು ಸಿದ್ಧಪಡಿಸಿಕೊಡುವ ವಿನೂತನ ಮಳಿಗೆ

ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಸೋಮವಾರ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಸ್ವಾಮೀಜಿಯವರು, "ವಸ್ತ್ರೋದ್ಯಮವು ಇಂದು ಅಗಾಧವಾಗಿ ಬೆಳೆದಿದ್ದು, ಅದರ ಜೊತೆ ಜೊತೆಗೆ ಸ್ಪರ್ಧೆಯೂ ತೀವ್ರಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ  ಗುಣಮಟ್ಟದ ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಉಡುಪುಗಳನ್ನು ಗ್ರಾಹಕರಿಗೆ ಒದಗಿಸಲು ಬೆನಕ ಬಿಸ್ಪೋಕ್ ಮಳಿಗೆ ಸ್ಥಾಪಿಸಿರುವುದು ಸ್ವಾಗತಾರ್ಹ", ಎಂದರು.

Last Updated : Mar 11, 2025, 07:47 PM IST
    • ಅತ್ಯುತ್ಕೃಷ್ಟ ಉಡುಪುಗಳನ್ನು ಸಿದ್ಧಪಡಿಸಿಕೊಡುವ "ಬೆನಕ ಬಿಸ್ಪೋಕ್- ಕಸ್ಟಮ್ ಮೇಡ್" ಮಳಿಗೆ
    • ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಉದ್ಘಾಟನೆ
    • ಅನುಬಂಧ ಅವಾರ್ಡ್ ಸೇರಿ ವಿವಿಧ ಕಾರ್ಯಕ್ರಮಗಳಿಗೆ ಕಾಸ್ಟ್ಯೂಮ್ ಸಿದ್ಧಪಡಿಸಿಕೊಟ್ಟ ಸಂಸ್ಥೆ
ಹಂಪಿನಗರದಲ್ಲಿ ಬೆನಕ ಬಿಸ್ಪೋಕ್ ಉಡುಪು ಮಳಿಗೆ ಆರಂಭ: ಗ್ರಾಹಕರ ಇಚ್ಛೆಗೆ ತಕ್ಕಂತೆ ಉಡುಪು ಸಿದ್ಧಪಡಿಸಿಕೊಡುವ ವಿನೂತನ ಮಳಿಗೆ
File Photo

ಬೆಂಗಳೂರು: ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಅತ್ಯುತ್ಕೃಷ್ಟ  ಉಡುಪುಗಳನ್ನು ಸಿದ್ಧಪಡಿಸಿಕೊಡುವ "ಬೆನಕ ಬಿಸ್ಪೋಕ್- ಕಸ್ಟಮ್ ಮೇಡ್" ಮಳಿಗೆ ವಿಜಯನಗದ ಹಂಪಿನಗರದಲ್ಲಿ ಆರಂಭಗೊಂಡಿದೆ.

Add Zee News as a Preferred Source

ಇದನ್ನೂ ಓದಿ:  ಹೇರ್ ಡೈ ನಿಲ್ಲಿಸಿ..! ಈ ಶಾಂಪೂ ಹೇರ್ ಮಿಕ್ಸ್ ಬಳಸಿದರೆ ಸುಲಭವಾಗಿ ಕಪ್ಪಾಗುತ್ತೆ ಬಿಳಿ ಕೂದಲು..!

ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಸೋಮವಾರ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಸ್ವಾಮೀಜಿಯವರು, "ವಸ್ತ್ರೋದ್ಯಮವು ಇಂದು ಅಗಾಧವಾಗಿ ಬೆಳೆದಿದ್ದು, ಅದರ ಜೊತೆ ಜೊತೆಗೆ ಸ್ಪರ್ಧೆಯೂ ತೀವ್ರಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ  ಗುಣಮಟ್ಟದ ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಉಡುಪುಗಳನ್ನು ಗ್ರಾಹಕರಿಗೆ ಒದಗಿಸಲು ಬೆನಕ ಬಿಸ್ಪೋಕ್ ಮಳಿಗೆ ಸ್ಥಾಪಿಸಿರುವುದು ಸ್ವಾಗತಾರ್ಹ", ಎಂದರು.

"ಈ ಮಳಿಗೆಯಲ್ಲಿ ಶುಭ ಸಮಾರಂಭಗಳಿಗೆ, ಅದರಲ್ಲೂ ಮುಖ್ಯವಾಗಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉಡುಪುಗಳನ್ನು ಸಿದ್ಧಪಡಿಸಿ ನೀಡಲಾಗುತ್ತಿದೆ. ನಮ್ಮ ಪರಂಪರೆಯನ್ನು ಉಳಿಸುವ ಕೆಲಸವನ್ನು ಇಂತಹ ಮಳಿಗೆಗಳು ಮಾಡುತ್ತಿವೆ. ಹೀಗಾಗಿ ಈ ರೀತಿಯ ಗ್ರಾಹಕರ ಸದಭಿರುಚಿಗೆ ತಕ್ಕಂತೆ ಕಾರ್ಯ ನಿರ್ವಹಿಸುವ ಬೆನಕ ಬಿಸ್ಪೋಕ್ ನ ಉದ್ಯಮ ಬೆಳೆಯಬೇಕು", ಎಂದು ಶುಭ ಹಾರೈಸಿದರು.

ಬೆನಕ ಬಿಸ್ಪೋಕ್ ಕಸ್ಟಮ್ ಮೇಡ್ ಮಳಿಗೆಯ ಮಾಲೀಕ ಬೆನಕ ರಾಜು ಜಿ. ಅವರು ಮಾತನಾಡಿ, "ಗ್ರಾಹಕರನ್ನು ದೇವರೆಂದು ಪರಿಗಣಿಸಿ ಅವರ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ. ಶುಭ ಸಮಾರಂಭಗಳಿಗೆ ಗ್ರಾಹಕರ ದೇಹಭಾಷೆಯನ್ನು ಆಧರಿಸಿ ಇಲ್ಲಿ ಉಡುಪುಗಳನ್ನು ಸಿದ್ಧಪಡಿಸಿಕೊಡಲಾಗುತ್ತದೆ. ಕಾರ್ಯಕ್ರಮಗಳಿಗೆ ಅನುಗುಣವಾಗಿ ಉಡುಪುಗಳನ್ನು ತಯಾರಿಸಿಕೊಡುತ್ತೇವೆ. ನಾವು ಈಗಾಗಲೇ ಅನುಬಂಧ ಅವಾರ್ಡ್ ಸೇರಿ ವಿವಿಧ ಕಾರ್ಯಕ್ರಮಗಳಿಗೆ ಕಾಸ್ಟ್ಯೂಮ್ ಗಳನ್ನು ಸಿದ್ಧಪಡಿಸಿಕೊಟ್ಟಿದ್ದೇವೆ", ಎಂದು ಹೇಳಿದರು.

ಇದನ್ನೂ ಓದಿ:  ಇಂದು ರಾತ್ರಿಯಿಂದ ಈ ರಾಶಿಯವರಿಗೆ ರಾಜಯೋಗ !ಚಂದ್ರನಿಂದಲೇ ಬದಲಾಗುವುದು ಅದೃಷ್ಟ !ಮುಟ್ಟಿದ್ದೆಲ್ಲಾ ಆಗುವುದು ಚಿನ್ನ !ಸಂಪತ್ತು ಉಕ್ಕುವ ಕಾಲ

ಶಾಸಕರಾದ ಎಂ.ಕೃಷ್ಣಪ್ಪ, ಪ್ರಿಯಾ ಕೃಷ್ಣ,  ಚಿತ್ರನಿರ್ಮಾಪಕ ಬಿ.ಕೆ.ಶ್ರೀನಿವಾಸ್ (ಬೆಂಕೋಶ್ರೀ), ಮಜಾ ಭಾರತ ಖ್ಯಾತಿಯ ಸುಶ್ಮಿತಾ ಜಗ್ಗಪ್ಪ, ಅಂಬೇಡ್ಕರ್ ಕ್ರಾಂತಿಸೇನೆಯ ಅಧ್ಯಕ್ಷ ಕ್ರಾಂತಿರಾಜು ಉಪಸ್ಥಿತರಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News