ಬೆಂಗಳೂರು ಕಲಾವಿದನ ಮೂನ್ ವಾಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್

ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಬಾದಲ್ ತಮ್ಮ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದನ್ನು ಅದ್ಭುತವಾಗಿ ಚಿತ್ರೀಕರಿಸಲಾಗಿದೆ.

Last Updated : Sep 2, 2019, 06:15 PM IST
ಬೆಂಗಳೂರು ಕಲಾವಿದನ ಮೂನ್ ವಾಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ title=
Pic Courtesy: Twitter

ನವದೆಹಲಿ: ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಜನರಿಗೆ ಎಷ್ಟು ತಲೆನೋವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಈ ರಸ್ತೆ ಗುಂಡಿಗಳು ಎಷ್ಟು ಅಪಾಯಕಾರಿ ಎಂಬುದನ್ನು ಬಿಂಬಿಸಲು ಜನಪ್ರಿಯ ರಂಗಭೂಮಿ ಕಲಾವಿದ ಹಾಗೂ ಚಿತ್ರ ನಟ ಪೂರ್ಣಚಂದ್ರ ಮೈಸೂರು ಅವರು ನಗರದ ರಸ್ತೆಗಳಲ್ಲಿ ಗಗನಯಾತ್ರಿಯ ಉಡುಗೆ ಧರಿಸಿ ಮೂನ್ ವಾಕ್ ಮಾಡಿದ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ರಸ್ತೆ ಗುಂಡಿಗಳಿಗೂ, ಗಗನ ಯಾತ್ರಿಗೂ ಏನ್ ಸಂಬಂಧ ಅಂತ ಯೋಚನೆ ಮಾಡುತ್ತಿದ್ದೀರಾ? ಹೌದು!  ರಸ್ತೆ ಗುಂಡಿಗಳ ಬಗ್ಗೆ ಗಮನ ಸೆಳೆಯಲು ನೂತನವಾಗಿ ಆಲೋಚಿಸಿಡ ಚಮತ್ಕಾರಿ  ಖ್ಯಾತ ಬೀದಿ ಕಲಾವಿದ ಬಾದಲ್ ನಂಜುಂಡಸ್ವಾಮಿ ಗಗನಯಾತ್ರಿಗಳಂತೆ ಉಡುಪು ಧರಿಸಿ ಬೆಂಗಳೂರು ಬೀದಿಗಳಲ್ಲಿ ಮೂನ್ ವಾಕ್ ಮಾಡಿದರು.

ಬಳಿಕ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಬಾದಲ್ ತಮ್ಮ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದನ್ನು ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಇದರಲ್ಲಿ ಅವರು ಅನೇಕ ಗುಂಡಿಗಳನ್ನು ಬೀದಿಗಳಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು.  ಹಲೋ bbmp @BBMPCOMM
@BBMP_MAYOR @bbm #thelatest #streetart #nammabengaluru #herohalli ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬೀದಿ ಕಲಾವಿದನ ಸೃಜನಶೀಲತೆಯನ್ನು ಅವರ ಕಲೆಯನ್ನು ಟ್ವಿಟ್ಟಿಗರು ಮೆಚ್ಚಿದ್ದಾರೆ.

ಪ್ರಾಸಂಗಿಕವಾಗಿ, ದೇಶದಲ್ಲಿ ಚಂದ್ರಯಾನ-2 ಸಾಕಷ್ಟು ಸುದ್ದಿಯಲ್ಲಿರುವ ಈ ಸಂದರ್ಭ ಈ ಕಲಾವಿದನ ಮೂನ್ ವಾಕ್ ಕೂಡ ಸಾಮಾಜಿಕ ಜಾಲತಾಣಿಗರ ಗಮನ ಸೆಳೆದಿದೆ.

ಈ ವರ್ಷದ ಮೇ ತಿಂಗಳಲ್ಲಿ, ಅವರು ರಸ್ತೆಯಲ್ಲಿ ಬೃಹತ್ ಮೊಸಳೆಯ ಪ್ರತಿಕೃತಿಯನ್ನು ರಸ್ತೆ ಗುಂಡಿಯಲ್ಲಿಟ್ಟಿದ್ದರು. ಸದಾ ಜನಜಂಗುಳಿಯಿಂದ ತುಂಬಿರುವ ರಸ್ತೆಯ ಮಧ್ಯದಲ್ಲಿ ದೊಡ್ಡ ಗುಂಡಿ ಇತ್ತು. ಗುಂಡಿ ಸಮಸ್ಯೆಯನ್ನು ಹೈಲೈಟ್ ಮಾಡಲು ಮತ್ತು ಅಧಿಕಾರಿಗಳ ಗಮನ ಸೆಳೆಯಲು ಅವರು ತಮ್ಮ ಬೀದಿ ಕಲೆಯ ಮೂಲಕ ವಿಭಿನ್ನ ಮಾರ್ಗಗಳನ್ನು ಮತ್ತು ವಿಧಾನಗಳನ್ನು ಪ್ರಯತ್ನಿಸುತ್ತಿದ್ದಾರೆ.

Trending News