Video : ಟ್ರಾಫಿಕ್ನಲ್ಲಿ ಸಿಲುಕಿದ ಕಾರು, ರೋಗಿಯ ಜೀವ ಉಳಿಸಲು 3 ಕಿಮೀ ಓಡಿದ ಡಾಕ್ಟರ್!
Bengaluru surgeon : ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ, ಆದರೆ ತಡ ಮಾಡದೆ ಬೆಂಗಳೂರಿನ ವೈದ್ಯರೊಬ್ಬರು
ಬೆಂಗಳೂರು: ಇದನ್ನು ನಿಜವಾದ ಕರ್ತವ್ಯ ಪ್ರಜ್ಞೆ ಎಂದು ಕರೆಯಲಾಗುತ್ತದೆ. ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ, ಆದರೆ ತಡ ಮಾಡದೆ ಬೆಂಗಳೂರಿನ ವೈದ್ಯರೊಬ್ಬರು ನಡುರಸ್ತೆಯಲ್ಲೇ ಕಾರಿನಿಂದ ಇಳಿದು ಸುಮಾರು 3 ಕಿಲೋ ಮೀಟರ್ ದೂರ ಓಡಿ ಆಸ್ಪತ್ರೆ ತಲುಪಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಆಸ್ಪತ್ರೆಗೆ ತಲುಪಲು ಬೆಂಗಳೂರಿನ ಬೀದಿಗಳಲ್ಲಿ ಓಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಬೆಂಗಳೂರಿನಲ್ಲಿ ನವೆಂಬರ್ ವರೆಗೂ ಸುರಿಯಲಿದೆ ಮಳೆ.! ರಾಜಧಾನಿಗೆ ಮತ್ತೆ ಕಂಟಕ ತರುವನಾ ವರುಣ
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಡಾ.ಗೋವಿಂದ್ ನಂದಕುಮಾರ್ ಅವರನ್ನು ನೋಡಿ ಎಲ್ಲರೂ ಖುಷಿಪಟ್ಟರು. ಆಗಸ್ಟ್ 30 ರಂದು ಆಸ್ಪತ್ರೆಗೆ ತೆರಳಿದ್ದರು. ಆದರೆ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದು, ಸರ್ಜಾಪುರ-ಮಾರತಹಳ್ಳಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯರೇ ರೋಗಿಗಳಿಗೆ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಆದರೆ ಅವರು ಈ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದರು. ರೋಗಿಯ ಬಗ್ಗೆ ಯೋಚಿಸಿದ ವೈದ್ಯ ನಂದಕುಮಾರ್ ಕೊನೆಗೆ ಕಾರಿನಿಂದ ಇಳಿದು ಓಡತೊಡಗಿದ್ದಾರೆ.
WATCH : ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆ ಯೋಗಾಸನ.. ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.