Minister Muniratna : ಮತದಾರರ ಪಟ್ಟಿ ಅಕ್ರಮ ವಿಚಾರ : ಕಾಂಗ್ರೆಸ್ಗೆ ಸವಾಲ್ ಹಾಕಿದ ಸಚಿವ ಮುನಿರತ್ನ
ಸಚಿವ ಮುನಿರತ್ನ ವಿರುದ್ದ ಸಂಸದ ಡಿಕೆ ಸುರೇಶ್ ಆರ್. ಆರ್. ನಗರದಲ್ಲಿ ಮತದಾರರ ಪಟ್ಟಿಯಿಂದ ಹಲವರ ಹೆಸರು ಡಿಲೀಟ್ ವಿಷಯವಾಗಿ ಚುನಾವಣಾ ಆಯೋಗಕ್ಕೆ ದೂರು ಹಿನ್ನೆಲೆ, ಮುನಿರತ್ನ ನಾನು ನಿಮ್ಮ ಜೋತೆ ಇದ್ದಾಗ ಪವಿತ್ರವಾಗಿದ್ದೆ..? ಇವಾಗ ಅಪವಿತ್ರವಾಗಿದ್ದೇನಾ..? ಎಂದು ಪ್ರಶ್ನಿಸಿದರು.
ಬೆಂಗಳೂರು : ಸಚಿವ ಮುನಿರತ್ನ ವಿರುದ್ದ ಸಂಸದ ಡಿಕೆ ಸುರೇಶ್ ಆರ್. ಆರ್. ನಗರದಲ್ಲಿ ಮತದಾರರ ಪಟ್ಟಿಯಿಂದ ಹಲವರ ಹೆಸರು ಡಿಲೀಟ್ ವಿಷಯವಾಗಿ ಚುನಾವಣಾ ಆಯೋಗಕ್ಕೆ ದೂರು ಹಿನ್ನೆಲೆ, ಮುನಿರತ್ನ ನಾನು ನಿಮ್ಮ ಜೋತೆ ಇದ್ದಾಗ ಪವಿತ್ರವಾಗಿದ್ದೆ..? ಇವಾಗ ಅಪವಿತ್ರವಾಗಿದ್ದೇನಾ..? ಎಂದು ಪ್ರಶ್ನಿಸಿದರು.
ವಿಕಾಸ ಸೌಧದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸಚಿವ ಮುನಿರತ್ನ, ಆರೋಪಗಳನ್ನ ತಳ್ಳಿಹಾಕಿದ ಇವರು "ನಾನು ಚುನಾವಣೆಗೆ ನಾಮ ಪತ್ರ ಸಲ್ಲಿಸುತೇನೆ. ಆದ್ರೆ ಯಾವುದೇ ಪ್ರಚಾರ ನಾನು ಮಾಡೊಲ್ಲ. ನನ್ನ ಕ್ಷೇತ್ರದಲ್ಲಿ ನಾನು ಓಡಾಡೊಲ್ಲ. ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೂಡ ಪ್ರಚಾರ ಮಾಡಬಾರ್ದು" ಎಂದು ಸಂಸದ ಡಿಕೆ ಸುರೇಶ್ ಗೆ ಬಹಿರಂಗ ಸಾವಲು ಹಾಕಿದರು.
ಇದನ್ನೂ ಓದಿ : Congress complaint: ಆರ್ ಆರ್ ನಗರದಲ್ಲಿ ಮತದಾರರ ಪಟ್ಟಿ ಅಕ್ರಮದ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಇದೇ ಸಂದರ್ಭದಲ್ಲಿ ಮಾತನ್ನಾಡಿ,ಸಂಸದ ಡಿಕೆ ಸುರೇಶ್ ಅವರು ನಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಎಲ್ಲಿ ಮತದಾರರ ಹೆಸರು ಡಿಲೇಟ್ ಆಗಿದೆ..ಎಲ್ಲಿ ಸೇರ್ಪಡೆ ಆಗಿದೆ ಅನ್ನೊದು ಡಿಕೆ ಸುರೇಶ್ ಮೊದಲು ಆ ಲಿಸ್ಟ್ ತನ್ನಿ. ನಾನು ನಿಮ್ಮ ಜೋತೆ ಇದ್ದಾಗ ಮತದಾರರ ಹೆಸರು ಡಿಲೇಟ್ ಆಗಿದೇನಾ..? ಮತದಾರರ ಪಟ್ಟಿ ಡಿಲೇಟ್ ಮಾಡುವ ಕೀಳು ರಾಜಕೀಯ ಮುನಿರತ್ನ ಮಾಡೊಲ್ಲ. ನಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ. ಸಾಮಾಜಿಕ ಸೇವೆ ಮಾಡೊಕ್ಕೆ ಬಂದಿದೇನೆ. ಸಂಸದ ಡಿಕೆ ಸುರೇಶ್ ಅವರ ಕೊಡುಗೇ ಏನು ಕ್ಷೇತ್ರಕ್ಕೆ ಅನ್ನೊದು ಮೊದಲು ಅವರು ಲಿಸ್ಟ್ ಕೊಡಲಿ. ಚುನಾವಣೆಗೆ ಬನ್ನಿ... ನಿಮ್ಮ ಅಭ್ಯರ್ಥಿಗೆ ಗೆಲ್ಲಿಸುವ ಪ್ರಯತ್ನ ಮಾಡಿ. ಕಾಂಗ್ರೆಸ್ ನನ್ನ ತೇಜೊವಧೆ ಮಾಡೊಕ್ಕೆ ಹೊರಟ್ಟಿದ್ದಾರೆ ಎಂದರು.
ನಾವು ಕಾಂಗ್ರೆಸ್ ಪಕ್ಷ ಬಿಟ್ಟಿದ್ಯಾಕೆ? ನಿಮ್ಮ ಈ ರೀತಿಯ ನಡುವಳಿಕೆ ಇಂದ ನಾವು ನಿಮ್ಮ ಪಕ್ಷ ಬಿಟ್ಟಿದೇವೆ. ಆಂಧ್ರಪ್ರದೇಶ ದಿಂದ ಮತದಾರರ ಹೆಸರು ಸೇರಿಸಿದ್ದಾರೆ ಅಂತ ಆರೋಪ ಮಾಡಿದ್ದಾರೆ.. ಎಲ್ಲರಿಗೂ ಗೊತ್ತಿದೆ ಆಂಧ್ರ ಜೋತೆ ಯಾರ ಸಂಬಂಧ ಇದೆ ಅಂತ. ಬೇಕಾದರೆ ರಾಜಕೀಯ ಬಿಟ್ಟು ಕೂಲಿ ಮಾಡಿಕೊಂಡು ಇರುತ್ತೇನೆ, ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ವಾಪಸ್ ಹೋಗಲ್ಲ.ಬಂದ್ರೆ ಸಾಕು ಅಂತಾ ಅವರು ಕಾಯ್ತಾ ಇದ್ದಾರೆ, ಎಂದು ಹೇಳಿದರು.
ಡಿಕೆ ಸುರೇಶ್ ಒಡೆದು ಅಳುವ ನೀತಿ, ಸದ್ಯಕ್ಕೆ ಬೆಂಗಳೂರಿನಲ್ಲಿ ಇವರ ಆಟ ನಡೆಯಲ್ಲ. ಇವರನ್ನು ರಾಜರಾಜೇಶ್ವರಿನಗರದ ಒಳಗೆ ಬಿಟ್ಟುಕೊಂಡರೆ ಪುಲಿಕೇಶಿ ನಗರ, ಕೆಹಿ ಹಳ್ಳಿ ಡಿಜೆ ಹಳ್ಳಿ ಆಗುತ್ತದೆ. ನನ್ನ ಕುಟುಂಬಕ್ಕೆ ರಾಜಕಾರಣಕ್ಕೆ ನಾನೇ ಕೊನೆ. ಇವರದ್ದು ಈಗಲೇ ಮೂರು ತಲೆಮಾರಿಗೆ ರಾಜಕೀಯ ಮಾಡುತ್ತಾರೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ : "ಎಂಸಿಡಿ ಫಲಿತಾಂಶವೇ ಬಿಬಿಎಂಪಿ ಚುನಾವಣೆಯಲ್ಲಿ ಪುನರಾವರ್ತನೆ"
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.