)
ಬೆಂಗಳೂರು : ಈ ಪೋಟೊದಲ್ಲಿರುವ ಈ ಯುವಕನ ಹೆಸರು ಕುಮಾರ ರಾವ್ ಪವಾರ್, ಆರ್ಟಿ ನಗರ ನಿವಾಸಿಯಾದ ಈತ ಡಿಪ್ಲೋಮಾ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಪಾರ್ಟ್ ಟೈಮ್ ಆಗಿ ಪುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ. ಆಕ್ಟೋಬರ್ 17 ರಂದು ಆರೋಪಿ ಕುಮಾರ ರಾವ್ ಫುಡ್ ಡೆಲಿವರಿ ಮಾಡಲು ಆರ್ ಟಿ ನಗರದ ಅಪಾರ್ಟ್ ಮೆಂಟ್ ವೊಂದಕ್ಕೆ ಹೋಗಿದ್ದಾನೆ. ಈ ವೇಳೆ ಬ್ರೆಜಿಲ್ ಮೂಲದ ಮಾಡೆಲ್ ಗೆ ಲೈಂಗಿಕ ಕಿರುಕುಳ ನೀಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಆಗಿರೋದಿಷ್ಟು ಅವತ್ತು ಅಕ್ಟೋಬರ್ 17. ಬ್ರೆಜಿಲ್ ಮೂಲದ ಮಾಡೆಲ್ ಬ್ಲಿಂಕ್ ಇಟ್ ನಲ್ಲಿ ಫುಡ್ ಆರ್ಡರ್ ಮಾಡಿದ್ರು. ಆರ್ಡರ್ ಪಡೆದು ಕುಮಾರ್ ರಾವ್ ಅಲ್ಲಿನ ಮನೆಗೆ ಹೋಗಿದ್ದಾನೆ. ಈ ವೇಳೆ ಬ್ರೆಜಿಲ್ ಮೂಲದ ಮಾಡೆಲ್ ಆ ಮನೆಯ ಬಾಗಿಲು ತೆಗೆದು ಹೊರ ಬಂದಿದ್ದಾರೆ. ಪುಡ್ ಡೆಲಿವರಿ ಮಾಡುವಾಗ ಆಕೆಯ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಇದನ್ನೂ ಓದಿ:
ತಕ್ಷಣ ಎಚ್ಚೆತ್ತ ಮಾಡೆಲ್ ಆತನನ್ನು ದೂರ ತಳ್ಳಿ ಬಾಗಿಲು ಹಾಕಿಕೊಂಡಿದ್ದಾಳೆ. ನಂತರ ತಮ್ಮ ಅಪಾರ್ಟ್ಮೆಂಟ್ ನಲ್ಲಿದ್ದ ಮತ್ತಿಬ್ಬರು ಸಹೋದ್ಯೋಗಿಗಳ ಜೊತೆ ಚರ್ಚಿಸಿ ಕೆಲ ದಿನಗಳ ನಂತರ ತಾವು ಕೆಲಸ ಮಾಡೋ ಕಂಪನಿಯ ಮ್ಯಾನೇಜರ್ಗೆ ಮಾಹಿತಿ ನೀಡಿದ್ದಾರೆ. ಲೈಂಗಿಕ ಕಿರುಕುಳ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ ನಂತರ ಆರ್ ಟಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಿಯನ್ನ ಬಂಧಿಸಿದ್ದಾರೆ. ಇನ್ನು ಆರೋಪಿ ಕುಮಾರ್ ರಾವ್ ಪೋಷಕರು ಸಣ್ಣ ಪುಟ್ಟ ಕೆಲಸ ಮಾಡುತ್ತಾ ಮಗನನ್ನ ಓದಿಸುತ್ತಿದ್ದರು. ಓದುವ ವೇಳೆಯೇ ಪಾರ್ಟ್ ಟೈಮ್ ಕೆಲಸ ಅಂತಾ ಡೆಲಿವರಿ ಬಾಯ್ ಕೆಲಸಕ್ಕೆ ಸೇರಿದ್ದನಂತೆ. ಇನ್ನೂ ಬ್ರೆಜಿಲ್ ಮೂಲದ ಈ ಮಾಡೆಲ್ ಕಳೆದ ಒಂದೂವರೆ ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು ಎನ್ನಲಾಗಿದೆ.
ಇದನ್ನೂ ಓದಿ:
ಸದ್ಯ ಆರ್ಟಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಕಿರುಕುಳ ನೀಡಿದ ಆರೋಪಿಯನ್ನ ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯ ಬಗ್ಗೆ ತನಿಖೆ ನಡೆಸಿ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದಾರೆ. ಅದೇನೇ ಇರಲಿ ಬಡ ಕುಟುಂಬದಿಂದ ಬಂದಿದ್ದ ಯುವಕ ಹೊಟ್ಟೆಪಾಡಿಗಾಗಿ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿದ್ದ. ಆದ್ರೆ ಒಂದು ಕ್ಷಣ ಮೈಮರೆತು ತೋರಿದ ದುರ್ವತನೆಯಿಂದ ಈಗ ಜೈಲು ಸೇರುವಂತಾಗಿದೆ.