)
ಬೆಂಗಳೂರು : ಕಳೆದ ತಿಂಗಳು ಭಾರತಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿಶೀಟರ್ ಕೊಲೆ ಇಡೀ ಬೆಂಗಳೂರನ್ನೇ ಬೆಚ್ಚುವಂತೆ ಮಾಡಿತ್ತು. ಬಿಕ್ಲು ಶಿವು ಭೀಕರ ಕೊಲೆಯ ಮಾಸ್ಟರ್ ಮೈಂಡ್ ಆಗಿದ್ದ ಎ1 ಆರೋಪಿ ಜಗದೀಶ್ ಅಲಿಯಾಸ್ ಜಗ್ಗನ ವಿಚಾರಣೆಯನ್ನು ಸಿಐಡಿ ಮುಂದುರೆಸಿದೆ. ಸದ್ಯ ಜಗ್ಗನ ಹಿನ್ನೆಲೆ, ಹಣದ ಮೂಲಕ್ಕೂ ಸಹ ಸಿಐಡಿ ಕೈ ಹಾಕಿದೆ. ವಿಚಾರಣೆ ವೇಳೆ ಕೊಲೆಗೂ ನನಗೂ ಸಂಬಂಧವಿಲ್ಲ ಎಂದು ಜಗ್ಗ ಹೇಳುತ್ತಿದ್ದಾನೆ. ಆದರೆ ಸಿಐಡಿ ತನಿಖೆಯಲ್ಲಿ ಬೇರೆ ವಿಷಯವೇ ಗೊತ್ತಾಗಿದ್ದು, ಅಧಿಕಾರಿಗಳು ಜಗ್ಗನಿಗೆ ಫುಲ್ ಡ್ರಿಲ್ ನಡೆಸಿದ್ದಾರೆ.
ಈ ಜಗ್ಗನ ಮಾತು ಕೇಳಿದ್ರೆ ಜೋಗಿ ಸಿನಿಮಾದ ಒಂದೇ ತಟ್ಟೆಲಿ ಅನ್ನ ತಿಂದು ಮುಹೂರ್ತ ಇಡ್ತಾರೋ ಎಂಬ ಹಾಡು ನೆನಪಿಗೆ ಬರುತ್ತೆ. ಈ ಮೊದಲೇ ತಿಳಿದಂತೆ ಜಗ್ಗ ಹಾಗೂ ಬಿಕ್ಲು ಇಬ್ಬರು ಸ್ನೇಹಿತರು. ಆದ್ರೆ ಪ್ರಾಪರ್ಟಿ ವಿಷಯಕ್ಕೆ ಇಬ್ಬರ ಮಧ್ಯೆ ದ್ವೇಷ ಬೆಳೆದು ಕೊಲೆಯಾಗಿರುವ ಆರೋಪವಿದೆ. ಅದಿರಲಿ, ಈಗ ಜಗ್ಗ ತನ್ನ ಮತ್ತು ಬಿಕ್ಲು ನಡುವಿನ ಸ್ನೇಹದ ಬಗ್ಗೆ ಹೇಳಿಕೊಂಡಿದ್ದಾನಂತೆ.
ಜೈಲಿನಲ್ಲಿ ಭೇಟಿಯಾಗಿದ್ದು, ಬಿಕ್ಲ ಶಿವನ ಜೊತೆಗಿನ ಕ್ಲೋಸ್ ಫ್ರೆಂಡ್ಶಿಪ್ ಬಗ್ಗೆ ಹೇಳಿ ನನ್ನ ಸ್ನೇಹಿತನನ್ನೇ ನಾನ್ಯಾಕೆ ಕೊಲೆ ಮಾಡಿಸಲಿ ಎಂದಿದ್ದಾನಂತೆ. ಇಬ್ಬರೂ ಸೇರಿ ಒಂದಷ್ಟು ಕೆಲಸಗಳನ್ನ ಮಾಡ್ತಿದ್ವಿ. ಕೆಲ ಮನಸ್ತಾಪಗಳು ಇದ್ದದ್ದು ನಿಜ. ಆದ್ರೆ ಆದ್ರೆ ಕೊಲೆ ಮಾಡುವಷ್ಟು ದ್ವೇಷ ಇರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾನೆ. ಆದ್ರೆ ಫೆಬ್ರುವರಿಯಲ್ಲಿ ಬಿಕ್ಲು ಕೊಟ್ಟಿದ್ದ ದೂರಿನ ಬಗ್ಗೆ ಕೇಳಿದ್ರೆ ಜಗ್ಗ ಗಪ್ ಚುಪ್ ಅಂತೆ.
ಇನ್ನೂ 40ದಿನಗಳ ವಿದೇಶಗಳ ಪ್ರವಾಸ ಬಗ್ಗೆ ಜಗ್ಗ ಹೇಳಿಕೆ ಕೊಟ್ಟಿದ್ದು, ಚಿನ್ನಾಭರಣ ಮಾರಿ ವಿದೇಶ ಸುತ್ತಾಡುತ್ತಿದ್ದೆ. ನನಗೆ ಯಾರು ಸಹ ಹಣ ಪಾವತಿ ಮಾಡಿಲ್ಲ ಎಂದಿದ್ದಾನೆ. ಮತ್ತೊಂದು ಕಡೆ ಸಿಐಡಿ ಜಗ್ಗನ ವಿದೇಶ ಟ್ರಾವೆಲ್ ಹಿಸ್ಟರಿ ಹಣದ ಸಂದಾಯದ ಬಗ್ಗೆ ತನಿಖೆ ನಡೆಸುತ್ತಿದ್ದು, ಜಗ್ಗನ ಹಳೇ ಕೇಸ್ ಗಳು, ಪ್ರಾಪರ್ಟಿ ಡೀಟೆಲ್ಸ್, ಬಿಕ್ಲ ಶಿವ ಕೊಲೆ ಕೇಸ್ ನ ಸಾಕ್ಷಿಗಳಿಟ್ಟು ತೀವ್ರ ವಿಚಾರಣೆ ನಡೆಸಿದೆ. ಸದ್ಯ ಜಗ್ಗನ ಹೇಳಿಕೆ ಪಡೀತಿರೋ ಸಿಐಡಿ ತನಿಖಾ ತಂಡ ಮುಂದಿನ ಹಂತದಲ್ಲಿ ಅಸಲಿ ವಿಚಾರಣೆ ಶುರು ಮಾಡಲಿದೆ.