Divya Darshana: ಬೆಂಗಳೂರಿನಲ್ಲಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗುವುದೇ ಒಂದು ದೊಡ್ಡ ತಲೆ ಬಿಸಿ. ಹಾಗಾಗಿಯೇ, ಮನಸ್ಸಿದ್ದರೂ ಮನೆಯ ಹಿರಿಯರನ್ನು ದೇವಾಲಯಗಳಿಗೆ ಕರೆದೊಯ್ಯಲು ಜನ ಹೆಚ್ಚು ಚಿಂತಿಸುತ್ತಾರೆ. ಇಂತಹವರಿಗೆ ಪರಿಹಾರ ನೀಡಲು ಬಿಎಂಟಿಸಿ 'ದಿವ್ಯ ದರ್ಶನ' ಎಂಬ ದೇಗುಲಗಳ ಪ್ರವಾಸದ ಟೂರ್ ಪ್ಯಾಕೇಜ್ ಘೋಷಿಸಿದೆ.

One Day Temple Tour In Bangalore: ಬೆಂಗಳೂರಿನಲ್ಲಿದ್ದು ದೇವಾಲಯಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂತಲೋ ಅಥವಾ ಎಲ್ಲಾ ದೇವಾಲಯಗಳಿಗೆ ನಮ್ಮನ್ನು ಕರೆದುಕೊಂಡು ಹೋಗುವವರ್ಯಾರು ಎಂದು ಯೋಚಿಸುವುವವರಿಗಾಗಿ ಬಿಎಂಟಿಸಿ 'ದಿವ್ಯ ದರ್ಶನ' (Divya Darshan) ಎಂಬ ಹೊಸ ವೀಕೆಂಡ್ ಟೂರ್ ಪ್ಯಾಕೇಜ್ ಘೋಷಿಸಿದೆ.
ಬೆಂಗಳೂರಿನ ಪ್ರಸಿದ್ದ ದೇವಾಲಯಗಳ ದರ್ಶನಕ್ಕಾಗಿ ಬಿಎಂಟಿಸಿ ಘೋಷಿಸಿರುವ ಈ 'ದಿವ್ಯ ದರ್ಶನ' ಟೂರ್ ಪ್ಯಾಕೇಜ್ ನಲ್ಲಿ ಸಾರ್ವಜನಿಕರು ಎಸಿ ಬಸ್ ಮೂಲಕ ಒಂದೇ ದಿನ ಬೆಂಗಳೂರಿನ 8 ಪ್ರಸಿದ್ಧ ದೇಗುಲಗಳ ದರ್ಶನ ಮಾಡಬಹುದಾಗಿದೆ.
‘ಒನ್ ಡೇ ಟೆಂಪಲ್ ಟೂರ್' ಬಿಎಂಟಿಸಿ ಆರಂಭಿಸಿರುವ 'ದಿವ್ಯ ದರ್ಶನ' ಯೋಜನೆಗೆ ಬುಧವಾರ (ಮೇ 28) ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಚಾಲನೆ ನೀಡಿದ್ದಾರೆ. ಇನ್ನೂ ಬಿಎಂಟಿಸಿಯ ಈ ಹೆಜ್ಜೆಗೆ ಸಾಮಾಜಿಕಜಾಲತಾಣದಲ್ಲಿ ಭಾರೀ ಬೆಂಬಲ ಸಹ ವ್ಯಕ್ತವಾಗುತ್ತಿದೆ.
ಬಿಎಂಟಿಸಿ ‘ದಿವ್ಯ ದರ್ಶನ’ದಲ್ಲಿ ಯಾವೆಲ್ಲ ದೇಗುಲಗಳಿಗೆ ಭೇಟಿ ನೀಡಬಹುದು?
‘ಒನ್ ಡೇ ಟೆಂಪಲ್ ಟೂರ್’ಯೋಜನೆಯಡಿ ಬಿಎಂಟಿಸಿ ಆರಂಭಿಸಿರುವ 'ದಿವ್ಯ ದರ್ಶನ' ಪ್ಯಾಕೇಜ್ ನಲ್ಲಿ ಒಂದೇ ದಿನದಲ್ಲಿ ಈ ಕೆಳಗಿನ 8 ಪ್ರಸಿದ್ಧ ದೇವಾಲಯಗಳನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದು. ಅವೆಂದರೆ...
ಇದನ್ನೂ ಓದಿ-
ದಿವ್ಯ ದರ್ಶನ ಟೆಂಪಲ್ ಟೂರ್ ಯಾವಾಗೆಲ್ಲಾ ಲಭ್ಯವಾಗಲಿದೆ?
ಪ್ರತಿ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಈ 'ದಿವ್ಯ ದರ್ಶನ ಟೆಂಪಲ್ ಟೂರ್ ' ಪ್ಯಾಕೇಜ್ ಲಭ್ಯವಿರಲಿದೆ. ಬೇಡಿಕೆಯ ಆಧಾರದ ಮೇಲೆ ಒಂದೊಮ್ಮೆ ಬಸ್ ಫುಲ್ ಬುಕಿಂಗ್ ಆದರೆ ವಾರದ ಇತರ ದಿನಗಳಲ್ಲಿಯೂ ಸಹ ಈ ಪ್ಯಾಕೇಜ್ ಸೇವೆ ಲಭ್ಯವಾಗಲಿದೆ ಎಂದು ಬಿಎಂಟಿಸಿಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ವಾರಾಂತ್ಯದ ದಿವ್ಯ ದರ್ಶನ ಟೂರ್ ಆರಂಭ ಮತ್ತು ಮುಕ್ತಾಯದ ಸಮಯ:
ದಿವ್ಯ ದರ್ಶನ ಟೂರ್ ಗಾಗಿ ನೊಂದಾಯಿಸಿಕೊಂಡವರಿಗಾಗಿ ವಾರಾಂತ್ಯದಲ್ಲಿ ಮುಂಜಾನೆ 08:30ರ ಸುಮಾರಿಗೆ ಬಿಎಂಟಿಸಿ ಎಸಿ ಬಸ್ ಮೆಜೆಸ್ಟಿಕ್ನಿಂದ ಹೊರಡಲಿದೆ. ದಿನವಿಡೀ ನಗರದ 8 ದೇವಾಲಯಗಳಲ್ಲಿ ದೇವರ ದರ್ಶಣದ ಬಳಿಕ ಸಂಜೆ 05:30ಕ್ಕೆ ಮತ್ತೆ ಮೆಜೆಸ್ಟಿಕ್ಗೆ ಬಸ್ ವಾಪಸ್ಸಾಗಲಿದೆ.
ದಿವ್ಯ ದರ್ಶನ ಟಿಕೆಟ್ ದರ ಎಷ್ಟು?
ದಿವ್ಯ ದರ್ಶನ ಟೆಂಪರ್ ಟೂರ್ ಪ್ಯಾಕೇಜ್ನಲ್ಲಿ ವಯಸ್ಕರಿಗೆ 450 ರೂ., ಮಕ್ಕಳಿಗೆ 350 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.
ದಿವ್ಯ ದರ್ಶನ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ?
ಕೆಎಸ್ಆರ್ಟಿಸಿ ಅಧಿಕೃತ ವೆಬ್ಸೈಟ್ ksrtc.in ಗೆ ಭೇಟಿ ಮೂಲಕ ದಿವ್ಯ ದರ್ಶನ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಇದಲ್ಲದೆ, ಬಿಎಂಟಿಸಿಯ 080-22483777 ಅಥವಾ 7760991170 ಸಂಪರ್ಕ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕವೂ ದಿವ್ಯ ದರ್ಶನ ಒನ್ ಡೇ ಟೂರ್ ಪ್ಯಾಕೇಜ್ ಟಿಕೆಟ್ ಕಾಯ್ದಿರಿಸಬಹುದಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.