)
ಬೆಂಗಳೂರು : ಈ ದೃಶ್ಯವಾಳಿಗಳು ನೋಡಿದ್ರೆನೆ ಗೊತ್ತಾಗುತ್ತೆ ಇಲ್ಲಿ ದೊಡ್ಡ ಸ್ಪೋಟ ಸಂಭವಿಸಿದೆ ಅಂತಾ. ಹೌದು.. ಮೆಲ್ನೋಟಕ್ಕೆ ಸಿಲಿಂಡರ್ ಸ್ಫೋಟವಾಗಿದೆ ಅಂತ ಹೇಳಲಾಗಿದ್ದು, ಘಟನೆಯಲ್ಲಿ ಓರ್ವ ಬಾಲಕ ಸಾವನಪ್ಪಿದ್ದಾನೆ.. ಇದ್ರಿಂದ ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ಸಹ ಸರ್ಕಾರ ಘೋಷಿಸಿದೆ.
ಹೌದು.. ನಗರದ ವಿಲ್ಸನ್ ಗಾರ್ಡನ್ ಬಳಿಯ ಚಿನ್ನಯ್ಯ ಪಾಳ್ಯದಲ್ಲಿ ನಡೆದ ನಿಗೂಢ ಸ್ಫೋಟದಿಂದಾಗಿ ಅಲ್ಲಿನ ಜನರು ಫುಲ್ ಭಯಬೀತರಾಗಿದ್ದಾರೆ. ಇಂದು ಬೆಳಗ್ಗೆ ಎಂಟು ಗಂಟೆಯ ಸುಮಾರಿಗೆ ಕಸ್ತೂರಿ ಎಂಬುವವರ ಮನೆಯಲ್ಲಿ ಇದ್ದಕ್ಕಿದ್ದಂತೆ ಸಿಲಿಂಡರ್ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ ಮುಬಾರಕ್ ಎಂಬ ಬಾಲಕ ಮೃತಪಟ್ಟಿದ್ದಾನೆ. ದುರಂತ ಸ್ಥಳಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ರಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ, ಸಿದ್ದರಾಮಯ್ಯ, ಇಂದು ಬೆಳಗ್ಗೆ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಮುಬಾರಕ್ (10) ಸಾವನ್ನಪ್ಪಿದ್ದು ಇವರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ವಿತರಿಸಲಾಗುವುದು. ಘಟನೆಯಲ್ಲಿ ಕಸ್ತೂರಮ್ಮ ಎಂಬುವರಿಗೆ ಶೇ.30 ರಷ್ಟು ಸುಟ್ಟ ಗಾಯವಾಗಿದ್ದು, ಇವರನ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳು ಖರ್ಚುವೆಚ್ಚ ಹಾಗೂ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿ ಕೊಡಲಾಗುವುದು ಎಂದರು.
ಇನ್ನೂ ಸರಸಮ್ಮ ಶಬೀನಾ ಬಾನು, ಫಾತೀಮಾ, ಖಯಾಲ, ಸುಬ್ರಹ್ಮಣಿ, ಶೇಕ್ ನಜೀಬ್ ಉಲ್ಲಾ, ಪ್ರಮೀಳಾ ಹಾಗೂ ರಾಜೇಶ್ ಎಂಬುವರು ಗಾಯಗೊಂಡಿದ್ದು ಇವರನ್ನ ವಿಕ್ಟೋರಿಯಾ, ಸಂಜಯಗಾಂಧಿ ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಮೇಲ್ನೋಟಕ್ಕೆ ಸಿಲಿಂಡರ್ ಸ್ಪೋಟವಾಗಿದೆ ಎಂದು ಪೊಲೀಸರು ಪರಿಶೀಲನೆ ನಡೆಸಲಾಗುತ್ತಿದ್ದಾರೆ..
ಇನ್ನು ಸ್ಥಳದಲ್ಲಿ ಆಡುಗೋಡಿ ಪೊಲೀಸರು, ಬಾಂಬ್ ಸ್ಕ್ವಾಡ್ ಸಿಬ್ಬಂದಿ, ಎನ್ಡಿಆರ್ಫ್, ಅಗ್ನಿಶಾಮಕ ಸಿಬ್ಬಂದಿ ಗಂಟೆಗಳ ಕಾಲ ಜಂಟಿ ಕಾರ್ಯಾಚರಣೆ ನಡೆಸಿ ಕೆಳಗಿರುವ ಸಿಲಿಂಡರ್ ಅಥವಾ ಸ್ಪೋಟಗೊಂಡ ವಸ್ತುವನ್ನು ಹುಡುಕಲು ಮುಂದಾಗಿದ್ದರು. ಇನ್ನು ಘಟನೆಗೆ ನಿಖರವಾದ ಕಾರಣ ಮಾತ್ರ ತನಿಖೆಯ ನಂತರವೇ ತಿಳಿಯಬೇಕಿದೆ. ಒಟ್ಟಿನಲ್ಲಿ ಈ ದುರ್ಘಟನೆಯಿಂದಾಗಿ ಇನ್ನು ಬದುಕಿ ಬಾಳಬೇಕಾಗಿದ್ದ ಪುಟ್ಟ ಬಾಲಕ ಮಾತ್ರ ಸಾವನಪ್ಪಿದ್ದು ಮಾತ್ರ ದುರಂತವೇ ಸರಿ.