FASTag New Rule: ಫೆ.17ರಿಂದ ಫಾಸ್ಟ್‌ಟ್ಯಾಗ್ ಹೊಸ ನಿಯಮ ಜಾರಿ, ಡಬಲ್ ಚಾರ್ಜ್ ತಪ್ಪಿಸಲು ಈಗಲೇ ಈ ಕೆಲಸ ಮಾಡಿ..!

FASTag New Rule: ಎನ್‌ಪಿ‌ಸಿ‌ಐ ಫಾಸ್ಟ್‌ಟ್ಯಾಗ್ ಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ.  ಟೋಲ್ ಪ್ಲಾಜಾಗಳಲ್ಲಿ ದುಪ್ಪಟ್ಟು ಶುಲ್ಕವನ್ನು ತಪ್ಪಿಸಲು ಈ ಸುದ್ದಿಯನ್ನು ತಪ್ಪದೇ ಓದಿ... 

Written by - Yashaswini V | Last Updated : Feb 14, 2025, 02:59 PM IST
  • ಫಾಸ್ಟ್‌ಟ್ಯಾಗ್ ಸಂಬಂಧಿಸಿದಂತೆ ಜನವರಿ 28, 2025ರಂದು ಎನ್‌ಪಿ‌ಸಿ‌ಐ ಹೊಸ ಸುತ್ತೋಲೆಯನ್ನು ಹೊರಡಿಸಿದೆ
  • ಇದರಲ್ಲಿ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಮೌಲ್ಯೀಕರಣಕ್ಕಾಗಿ ಹೊಸ ನಿಯಮವನ್ನು ಜಾರಿಗೊಳಿಸುವುದಾಗಿ ಉಲ್ಲೇಖಿಸಿದೆ.
  • ಈ ಹೊಸ ನಿಯಮ ಫೆಬ್ರವರಿ 17, 2025ರಿಂದ ಜಾರಿಗೆ ಬರಲಿದೆ
FASTag New Rule: ಫೆ.17ರಿಂದ ಫಾಸ್ಟ್‌ಟ್ಯಾಗ್ ಹೊಸ ನಿಯಮ ಜಾರಿ, ಡಬಲ್ ಚಾರ್ಜ್ ತಪ್ಪಿಸಲು ಈಗಲೇ ಈ ಕೆಲಸ ಮಾಡಿ..!

FASTag New Rule: ಎನ್‌ಸಿ‌ಪಿ‌ಐ ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದಂತೆ 2025ರ ಫೆಬ್ರವರಿ 17ರಿಂದ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಟೋಲ್ ಪ್ಲಾಜಾಗಳಲ್ಲಿ ದುಪ್ಪಟ್ಟು ಹಣ ಕಟ್ಟಬೇಕಾಗುತ್ತದೆ. ಹಾಗಿದ್ದರೆ, ಎನ್‌ಸಿ‌ಪಿ‌ಐ ಜಾರಿ ಮಾಡುತ್ತಿರುವ ಹೊಸ ನಿಯಮ ಯಾವುದು? ಇದರಿಂದ ಏನು ಪ್ರಯೋಜನ. ದುಪ್ಪಟ್ಟು ಹಣ ಪಾವತಿಸುವುದನ್ನು ತಪ್ಪಿಸಲು ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿಗಾಗಿ  ಮುಂದೆ ಓದಿ... 

Add Zee News as a Preferred Source

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವಾಗ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸಲು ಫಾಸ್ಟ್‌ಟ್ಯಾಗ್ ಅನ್ನು ಜಾರಿಗೆ ತಂದು ಹಲವು ದಿನಗಳಾಗಿವೆ. ಆದರೂ, ಇನ್ನೂ ಸಹ ಹೊರಡುವ ಮುನ್ನ ಫಾಸ್ಟ್‌ಟ್ಯಾಗ್ ರಿಚಾರ್ಜ್ ಆಗಿದ್ಯೋ ಅಥವಾ ಇಲ್ಲವೋ... ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಎಷ್ಟಿದೆ ಎಂಬುದನ್ನು ಪರಿಶೀಲಿಸುವ ಅಭ್ಯಾಸ ಬಹುತೇಕ ಜನರಿಗೆ ಇಲ್ಲ. ಆದರೆ, ಇನ್ಮುಂದೆ ಈ ವಿಷಯದಲ್ಲಿ ಅಜಾಗರೂಕರಾಗಿದ್ದರೆ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ. 

ಫಾಸ್ಟ್‌ಟ್ಯಾಗ್ ಸಂಬಂಧಿಸಿದಂತೆ ಜನವರಿ 28, 2025ರಂದು ಎನ್‌ಪಿ‌ಸಿ‌ಐ ಹೊಸ ಸುತ್ತೋಲೆಯನ್ನು ಹೊರಡಿಸಿದೆ, ಇದರಲ್ಲಿ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಮೌಲ್ಯೀಕರಣಕ್ಕಾಗಿ ಹೊಸ ನಿಯಮವನ್ನು ಜಾರಿಗೊಳಿಸುವುದಾಗಿ ಉಲ್ಲೇಖಿಸಿದೆ. ಈ ಹೊಸ ನಿಯಮ ಫೆಬ್ರವರಿ 17, 2025ರಿಂದ ಜಾರಿಗೆ ಬರಲಿದ್ದು, ಅದಕ್ಕೂ ಮೊದಲು ನಿಮ್ಮ ಫಾಸ್ಟ್‌ಟ್ಯಾಗ್ ಬ್ಲಾಕ್ ಲಿಸ್ಟ್ ನಲ್ಲಿದ್ದರೆ ಕೂಡಲೇ ಅದನ್ನು ಸರಿಪಡಿಸಿ ಎಂದು ಇದರಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ- ಬಾಡಿಗೆಗೆ ಸಿಗುತ್ತಾರೆ ಬಾಯ್ ಫ್ರೆಂಡ್ಸ್… ಆದರೆ...!

ವಾಸ್ತವವಾಗಿ, ಫಾಸ್ಟ್‌ಟ್ಯಾಗ್ ರಿಚಾರ್ಜ್ ಆಗದಿದ್ದಾಗ ಟೋಲ್ ಪ್ಲಾಜಾಗಳಲ್ಲಿ ಅಂತಹ ವಾಹನಗಳಿಂದ ಆಗಬಹುದಾದ ಸಂಚಾರ ದಟ್ಟಣೆಯನ್ನು ಮನಗಂಡು ಇದನ್ನು ತಪ್ಪಿಸುವ ಸಲುವಾಗಿ ಎನ್‌ಸಿ‌ಪಿ‌ಐ ಅದನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುತ್ತದೆ. ಟೋಲ್ ಪ್ಲಾಜಾ ಮೂಲಕ ಹಾದು ಹೋಗುವಾಗ ವಾಹನ ಟೋಲ್ ಪ್ಲಾಜಾವನ್ನು ಪ್ರವೇಶಿಸುವ ಸಮಯ ಮತ್ತು ಪಾವತಿಯ ಸಮಯದ ಅಂತರವನ್ನು ಆಧರಿಸಿ ಅದನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುತ್ತದೆ. ಒಂದೊಮ್ಮೆ ಟೋಲ್ ಪ್ಲಾಜಾದಲ್ಲಿ ನಿಮ್ಮ ವಾಹನದ ಫಾಸ್ಟ್‌ಟ್ಯಾಗ್ ರೀಡ್ ಆಗುವ 60 ನಿಮಿಷಗಳ ಮೊದಲು ಮತ್ತು 10 ನಿಮಿಷಗಳ ನಂತರ ನಿಮ್ಮ ಫಾಸ್ಟ್‌ಟ್ಯಾಗ್  ಸಕ್ರಿಯವಾಗಿಲ್ಲದಿದ್ದರೆ ಅಂತಹ ಪಾವತಿಯನ್ನು ನಿರಾಕರಿಸಲಾಗುತ್ತದೆ. ಈ ನಿರಾಕರಣೆಗೆ ಕೋಡ್ 176 ಕಾರಣ ಎಂದು ಉಲ್ಲೇಖಿಸಲಾಗಿರುತ್ತದೆ. 

ಬಳಕೆದಾರರ ಮೇಲೆ ನೇರ ಪರಿಣಾಮ: 
ಫೆಬ್ರವರಿ 17ರಿಂದ ಜಾರಿಯಾಗಲಿವ ಫಾಸ್ಟ್‌ಟ್ಯಾಗ್ ಹೊಸ ನಿಯಮವು ಬಳಕೆದಾರರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಿಮ್ಮ ಫಾಸ್ಟ್‌ಟ್ಯಾಗ್ ಬ್ಲಾಕ್ ಲಿಸ್ಟ್ ಗೆ ಸೇರಿದ್ದರೆ ನೀವು ದುಪ್ಪಟ್ಟು ಶುಲ್ಕ ಪಾವತಿಸಬೇಕಾಗಬಹುದು. ಕಾರಣ ಫಾಸ್ಟ್‌ಟ್ಯಾಗ್ ಕಪ್ಪುಪಟ್ಟಿಯಲ್ಲಿದ್ದರೆ ಅದು ಕೂಡಲೇ ರಿಚಾರ್ಜ್ ಆಗುವುದಿಲ್ಲ.  

ಫಾಸ್ಟ್‌ಟ್ಯಾಗ್ ಬ್ಲಾಕ್ ಲಿಸ್ಟ್ ಸೇರಲು ಕಾರಣ: 
ನಿಮ್ಮ ಫಾಸ್ಟ್‌ಟ್ಯಾಗ್ ಬ್ಲಾಕ್ ಲಿಸ್ಟ್ ಸೇರಲು ಕಡಿಮೆ ಬ್ಯಾಲೆನ್ಸ್, ಕೆವೈಸಿ ನವೀಕರಿಸದಿರುವುದು, ವಾಹನದ ಚಾಸಿಸ್ ಸಂಖ್ಯೆ ಮತ್ತು ನೋಂದಣಿ ಸಂಖ್ಯೆಯಲ್ಲಿನ ದೋಷ ಸೇರಿದಂತೆ ಹಲವು ಪ್ರಮುಖ ಕಾರಣಗಳಿವೆ. 

ಇದನ್ನೂ ಓದಿ- Railway New Rules: ರೈಲ್ವೆ ಕೌಂಟರ್ ಟಿಕೆಟ್ ಸಂಬಂಧಿಸಿದಂತೆ ಮಹತ್ವದ ಆದೇಶ, ನಿಮಿಷಗಳಲ್ಲೇ ಹಣ ರಿಟರ್ನ್ 

ಫಾಸ್ಟ್‌ಟ್ಯಾಗ್ ಅನ್ನು ಬ್ಲಾಕ್ ಲಿಸ್ಟ್ ನಿಂದ ತೆಗೆಯುವುದು ಹೇಗೆ? 
ಒಂದೊಮ್ಮೆ ನಿಮ್ಮ ಫಾಸ್ಟ್‌ಟ್ಯಾಗ್ ಬ್ಲಾಕ್ ಲಿಸ್ಟ್ ನಲ್ಲಿದ್ದರೆ ಅದನ್ನು ಸರಿಪಡಿಸಲು ಒಟ್ಟು 70 ನಿಮಿಷಗಳ ಕಾಲಾವಕಾಶವಿರುತ್ತದೆ. ನಿಮ್ಮ ಫಾಸ್ಟ್‌ಟ್ಯಾಗ್ ರಿಚಾರ್ಜ್ ಮಾಡಿದರೆ ಅದು ಕೂಡಲೇ ಸಕ್ರಿಯಗೊಳ್ಳುತ್ತದೆ. ಟೋಲ್ ಪ್ಲಾಜಾದಲ್ಲಿ ಈ ಮಾಹಿತಿಯನ್ನು ನವೀಕರಿಸಲು ಬಯಸಿದರೆ ಇದಕ್ಕಾಗಿ ಸುಮಾರು 20 ನಿಮಿಷಗಳು ಬೇಕಾಗಬಹುದು. 

ನಿಮ್ಮ ಫಾಸ್ಟ್‌ಟ್ಯಾಗ್ ಬ್ಲಾಕ್ ಲಿಸ್ಟ್ ಸೇರಿದ್ಯಾ ಅಂತ ಪರಿಶೀಲಿಸಲು ಈ ಕೆಳಗಿನ ಹಂತವನ್ನು ಪರಿಶೀಲಿಸಿ: 
>>  ಮೊದಲಿಗೆ ಸಾರಿಗೆ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ. 
>> ಇ-ಚಲನ್ ಸ್ಥಿತಿ ಪರಿಶೀಲಿಸಿ
>> ನಿಮ್ಮ ವಾಹನ ನೋಂದಾಯಿತ ಸಂಖ್ಯೆಯನ್ನು ನಊಡಿಸಿ 
>> ಈ ಮೂಲ ನಿಮ್ಮ ಫಾಸ್ಟ್‌ಟ್ಯಾಗ್ ಬ್ಲಾಕ್ ಲಿಸ್ಟ್ ಗೆ ಸೇರಿದ್ಯಾ/ ಇಲ್ಲವೇ ಎಂದು ಪರಿಶೀಲಿಸಬಹುದು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News