ಸಿಲಿಕಾನ್‌ ಸಿಟಿ ಮಂದಿಗೆ ಗುಡ್‌ ನ್ಯೂಸ್:‌ ಒಂದೇ ವರ್ಷದಲ್ಲಿ 2 ಹೊಸ ಮೆಟ್ರೋ ಮಾರ್ಗಗಳು ಲೋಕಾರ್ಪಣೆ?

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ದ ವತಿಯಿಂದ ನಗರದಲ್ಲಿ 'ಗುಲಾಬಿ ಮಾರ್ಗ' ಹಾಗೂ 'ನೀಲಿ ಮಾರ್ಗ' (ಎರಡು ಹಂತಗಳಲ್ಲಿ) ನಿರ್ಮಾಣ ಕಾರ್ಯ ನಡೆಯುತ್ತಿದೆ. ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆವ ಕೆಲಸ ಶೇ.96ರಷ್ಟು ಮುಕ್ತಾಯವಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗೆ 18 KMವರೆಗೆ 2ನೇ ಹಂತದಲ್ಲಿ ನೀಲಿ ಮಾರ್ಗದ ಕಾಮಗಾರಿ ಭರದಿಂದ ಸಾಗಿದೆ.

Written by - Puttaraj K Alur | Last Updated : Apr 18, 2025, 04:52 PM IST
  • 'ಗುಲಾಬಿ ಮಾರ್ಗ' ಹಾಗೂ 'ನೀಲಿ ಮಾರ್ಗ' (ಎರಡು ಹಂತಗಳಲ್ಲಿ) ನಿರ್ಮಾಣ ಕಾರ್ಯ ನಡೆಯುತ್ತಿದೆ
  • ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆವ ಕೆಲಸ ಶೇ.96ರಷ್ಟು ಮುಕ್ತಾಯವಾಗಿದೆ
  • ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗೆ 18 KMವರೆಗೆ ನೀಲಿ ಮಾರ್ಗದ ಕಾಮಗಾರಿ ನಡೆಯುತ್ತಿದೆ
ಸಿಲಿಕಾನ್‌ ಸಿಟಿ ಮಂದಿಗೆ ಗುಡ್‌ ನ್ಯೂಸ್:‌ ಒಂದೇ ವರ್ಷದಲ್ಲಿ 2 ಹೊಸ ಮೆಟ್ರೋ ಮಾರ್ಗಗಳು ಲೋಕಾರ್ಪಣೆ?

Namma Metro: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ʼನಮ್ಮ ಮೆಟ್ರೋʼ ಜಾಲವು ವರ್ಷದಿಂದ ವರ್ಷಕ್ಕೆ ವಿಸ್ತರಣೆ ಆಗುತ್ತಿದೆ. ಸಿಲಿಕಾನ್‌ ಸಿಟಿಯ ಹೆಚ್ಚಿನ ಮಂದಿ ಮೆಟ್ರೋ ಸಾರಿಗೆಯನ್ನ ಅವಲಂಬಿಸಿದ್ದಾರೆ. ಹೀಗಾಗಿ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಹೊಸ ಮಾರ್ಗದ ಯೋಜನೆಗಳು ಆರಂಭವಾಗಲಿವೆ. ಸದ್ಯ ಎಲ್ಲರ ಚಿತ್ತ ಮೆಟ್ರೋ ಹಳದಿ ಮಾರ್ಗದ ಮೇಲಿದೆ. ಇದರೊಂದಿಗೆ ಮತ್ತೊಂದು ಹೊಸ ಮಾರ್ಗವು ವಾಣಿಜ್ಯ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಅನ್ನೋ ಗುಡ್‌ ನ್ಯೂಸ್‌ ಸಿಕ್ಕಿದೆ. 

Add Zee News as a Preferred Source

ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ದ ವತಿಯಿಂದ ನಗರದಲ್ಲಿ 'ಗುಲಾಬಿ ಮಾರ್ಗ' ಹಾಗೂ 'ನೀಲಿ ಮಾರ್ಗ' (ಎರಡು ಹಂತಗಳಲ್ಲಿ) ನಿರ್ಮಾಣ ಕಾರ್ಯ ನಡೆಯುತ್ತಿದೆ. ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆವ ಕೆಲಸ ಶೇ.96ರಷ್ಟು ಮುಕ್ತಾಯವಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗೆ 18 KMವರೆಗೆ 2ನೇ ಹಂತದಲ್ಲಿ ನೀಲಿ ಮಾರ್ಗದ ಕಾಮಗಾರಿ ಭರದಿಂದ ಸಾಗಿದೆ. ವೈಟ್‌ಫಿಲ್ಡ್ (ನೇರಳೆ ಮಾರ್ಗ), ಎಲೆಕ್ಟ್ರಾನಿಕ್ ಸಿಟಿ (ಹಳದಿ ಮಾರ್ಗ) ಬಿಟ್ಟರೆ ಮಾರತ್ತಹಳ್ಳಿಯಂತಹ ಐಟಿ ಪ್ರದೇಶ ಸಂರ್ಪಕಿಸುವ ಮೆಟ್ರೋ ಮಾರ್ಗವೆಂದರೆ ಅದು ನೀಲಿ ಮಾರ್ಗ. ಈ ಮಾರ್ಗವು ಮುಂದಿನ ವರ್ಷ 2026ರ ಜೂನ್ ಅಂತ್ಯಕ್ಕೆ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ. ಜನದಟ್ಟಣೆಯ ಹೊರ ವರ್ತುಲ ರಸ್ತೆಯ (ORR) ಪ್ರಮುಖ ಜನದಟ್ಟಣೆ ಪ್ರದೇಶವನ್ನ ಸಂಪರ್ಕಿಸುವ ನೀಲಿ ಮಾರ್ಗವು ಪ್ರಮುಖ ಐಟಿ ಕಾರಿಡಾರ್‌ಗೆ ಸಾರಿಗೆ ಸೇವೆ ಒದಗಿಸಲಿದೆ. ಇದು ನಿತ್ಯ ಲಕ್ಷಾಂತರ ಪ್ರಯಾಣಿಕರಿಗೆ ಆಸರೆಯಾಗಲಿದೆ. ಇದನ್ನ ಬಿಟ್ರೆ ಆರಂಭವಾಗಬೇಕಾದ ಹಳದಿ ಮಾರ್ಗವು ಕೂಡ ಐಟಿ ಕಂಪನಿ ಉದ್ಯೋಗಿಗಳು ಸೇರಿದಂತೆ ಲಕ್ಷಾಂತರ ಪ್ರಯಾಣಿಕರಿಗೆ ಸಾರಿಗೆ ಸೇವೆ ಒದಗಿಸಲಿದೆ. 

ಇದನ್ನೂ ಓದಿ: ಹೆಣ್ಣಲ್ಲ-ಗಂಡಲ್ಲ.. ಆದರೂ ಎರಡು ಮದುವೆ, ಅಘೋರಿಯಾಗಿದ್ದೂ ಅತ್ಯಾಚಾರ..! ಅಸಲಿಗೆ ಶ್ರೀನಿವಾಸ್‌ ನಾಗಾಸಾಧು ಆಗಿದ್ದೇಗೆ..?

ಸೆಂಟ್ರಲ್ ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್.ಪುರಂವರೆಗಿನ ನೀಲಿ ಮಾರ್ಗದ ಮೊದಲ ಹಂತವು 2026ರ ಮಧ್ಯಭಾಗದಲ್ಲಿ ಉದ್ಘಾಟನೆಗೆ ಸಿದ್ಧವಾಗಲಿದೆ. ಆದರೆ ಸಣ್ಣ ಪುಟ್ಟ ವಿಳಂಬವಾಗಬಹುದು ಎಂದು ಹೇಳಲಾಗಿದೆ. ಇದರ ಹೊರತು ಹೆಚ್ಚಿನ ವಿಳಂಬ ಆಗುವುದಿಲ್ಲವೆಂದು ಸ್ವತಃ BMRCL ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರೇ ತಿಳಿಸಿದ್ದಾರೆ. ಕೆ.ಆರ್.ಪುರಂನಿಂದ ದೇವನಹಳ್ಳಿ ಏರ್‌ಪೋರ್ಟ್‌ವರೆಗೆ ಎರಡನೇ ಹಂತದಲ್ಲಿ ನೀಲಿ ಮಾರ್ಗ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ನಮ್ಮ ಮೆಟ್ರೋ ಹಳದಿ ಮಾರ್ಗವು ಫೆಬ್ರವರಿ ಬಳಿಕ ಮೇ ತಿಂಗಳಲ್ಲಿ ತೆರೆಯುವ ಗಡುವು ಹೊಂದಿತ್ತು. ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಸಾಗುವ 19.5 KM ಉದ್ದದ ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರ ಸಂಪರ್ಕಿಸುವ ಹಳಿದ ಮಾರ್ಗವು ಜೂನ್ ಅಂತ್ಯಕ್ಕೆ ತೆರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ರೈಲುಗಳ ಪೂರೈಕೆಯಲ್ಲಾಗುತ್ತಿರುವ ವಿಳಂಬದ ಕಾರಣ ಈ ಮಾರ್ಗ ತೆರೆಯುವುದು ತಡವಾಗುತ್ತಿದೆ. ಇದೇ ಏಪ್ರಿಲ್ ಅಂತ್ಯಕ್ಕೆ ಚೀನಾ ನಿರ್ಮಿತ ಮೆಟ್ರೋ ರೈಲಿನ ಸೆಟ್‌ ಬೆಂಗಳೂರಿಗೆ ತಲುಪಬೇಕಿದೆ. ಈ ಡ್ರೈವರ್‌ಲೆಸ್ ಮೆಟ್ರೋ ಬಂದ ಬಳಿಕ ಮೆಟ್ರೋ ಲೋಕಾರ್ಪಣೆಗೊಳ್ಳಬಹುದು ಅಂತಾ ಹೇಳಲಾಗುತ್ತಿದೆ. ಈ ಮೂಲಕ ಒಂದೇ ವರ್ಷದಲ್ಲಿ ಎರಡು ಹೊಸ ಮಾರ್ಗಗಳು ಸಾರ್ವಜನಿಕರಿಗೆ ಮುಕ್ತವಾದಂತಾಗುತ್ತದೆ. 2025ರ ಜೂನ್ ಅಂತ್ಯಕ್ಕೆ ಹಳದಿ ಮಾರ್ಗ, ಮುಂದಿನ 2026ರ ಜೂನ್ ಹೊತ್ತಿಗೆ ನೀಲಿ ಮಾರ್ಗದ ಮೊದಲ ಹಂತವು ಸಾರ್ವಜನಿಕರ ಸೇವೆಗೆ ಅಣಿಯಾಗಲಿವೆ. 24 ತಿಂಗಳು ಆಸುಪಾಸಿನಲ್ಲಿ ಸಿಲಿಕಾನ್‌ ಸಿಟಿ ಮಂದಿ ಎರಡು ಮೆಟ್ರೋ ಮಾರ್ಗದಲ್ಲಿ ಓಡಾಡುವ ಅವಕಾಶ ಪಡೆಯಲಿದ್ದಾರೆ. BMRCL ಗುರಿಯಂತೆ ನೀಲಿ ಮಾರ್ಗವನ್ನ ಮುಂದಿನ ವರ್ಷ ಜೂನ್‌ ಅಥವಾ ಸೆಪ್ಟಂಬರ್‌ ಒಳಗೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಮುಂದಿನ ಎರಡ್ಮೂರು ತಿಂಗಳಲ್ಲಿ ಒಂದಷ್ಟು ರೈಲುಗಳ ಸೆಟ್ ನಮಗೆ ಸಿಗಲಿದ್ದು, ರೈಲು ಸರಬರಾಜು, ಕಾರ್ಮಿಕರ ಲಭ್ಯತೆ ನೋಡಿಕೊಂಡು ಮಾರ್ಗವನ್ನ ಆರಂಭಿಸಲಾಗುವುದು. ಸದ್ಯ ಕಾಮಗಾರಿಗೆ ವೇಗ ನೀಡಲಾಗಿದೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಭಾರತದ ಈ ಕಾಲೇಜಿನ ವಿದ್ಯಾರ್ಥಿಗಳ ಹುಟ್ಟುಹಬ್ಬಕ್ಕೆ "ಕಾಂಡೋಮ್" ಗಿಫ್ಟ್‌ ನೀಡಲಾಗುತ್ತೆ..! ಯಾವುದೇ ಮುಚ್ಚುಮರೆಯಿಲ್ಲ ಇಲ್ಲಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News