ಬೆಂಗಳೂರು : ಈ ಫೋಟೋದಲ್ಲಿ ಕಾಣ್ತಿರುವ ವ್ಯಕ್ತಿಯ ಹೆಸರು ಸುರೇಶ್ ಅಂತಾ. ಈತನೇ ಸ್ನೇಹಿತರಿಂದ ಕೊಲೆಯಾಗಿ ಹೋದವನು. ಮರ್ಡರ್ ಮಾಡಿದವರು ಈತನ ಸ್ನೇಹಿತರಾದ ವೇಲು, ನೇತಾಜಿ ಪ್ರತಾಪ್. ಇನ್ನು ಈ ಘಟನೆ ನಡೆದಿರೋದು ಬನಶಂಕರಿಯ ಕೆ.ಆರ್ ರೋಡಲ್ಲಿ.
ಕೊಲೆಯಾದ ಸುರೇಶ್ ಕೂಲಿ ಕೆಲಸ ಮಾಡಿದ್ರೆ. ಆರೋಪಿಗಳು ಹೋಟೆಲ್ ನಲ್ಲಿ ಕೆಲಸ ಮಾಡ್ತಾರೆ. ಮೊನ್ನೆ ರಾತ್ರಿ ಕೆಲಸ ಮುಗಿಸಿದ ಬಳಿಕ ನಾಲ್ವರು ಕೆ.ಆರ್ ರೋಡಲ್ಲಿ ಇರೋ ಎಂಆರ್ಪಿ ಶಾಪ್ ಗೆ ಹೋಗಿದ್ದಾರೆ. ಅಲ್ಲಿ ಎಣ್ಣೆ ಪಾರ್ಸೆಲ್ ತಗೊಂಡು ಆಟೋದಲ್ಲಿ ಕೂತ್ಕೊಂಡು ಕುಡಿದಿದ್ದಾರೆ. ಆದ್ರೆ ಯಾಕೋ ಎಣ್ಣೆ ಸಾಕಾಗಿಲ್ಲ ಮತ್ತೆ ಆಟೋ ಸ್ಟಾರ್ಟ್ ಮಾಡ್ಕೊಂಡು ಬಾರ್ ಇರೋ ಕಡೆಯಲ್ಲಿ ಮತ್ತೊಮ್ಮೆ ಎಣ್ಣೆ ತಗೊಂಡಿದ್ದಾರೆ. ಹೀಗೆ ಎಣ್ಣೆ ಜಾಸ್ತಿ ಆಗಿದ್ದೇ ಕೊಲೆಯಾದ ಸುರೇಶ್ ಹಾಗೂ ವೇಲುಗೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಕೋಪಗೊಂಡ ವೇಲು ಬಿಯರ್ ಬಾಟೆಲ್ ಒಡೆದು ಸುರೇಶ್ ಕುತ್ತಿಗೆಗೆ ತಿವಿದಿದ್ದಾನೆ.
ಇದನ್ನೂ ಓದಿ: ಪ್ರೀತಿಸುವವರು ಲಕ್ಷಗಟ್ಟಲೇ ಇದ್ದರೂ ಶಾರುಖ್ ಇನ್ಟಾದಲ್ಲಿ ಫಾಲೋ ಮಾಡೋದು ಈ 5 ಸುಂದರಿಯರನ್ನ ಮಾತ್ರ!
ಇತ್ತ ಸುರೇಶ್ ಕುತ್ತಿಗೆಗೆ ಬಿಯರ್ ಬಾಟಲ್ ತಿವಿದಿದ್ದೇ ತೀವ್ರ ರಕ್ತಸ್ರಾವ ಆಗಿದೆ. ಆಗ ಅಲ್ಲಿಯೇ ಇದ್ದ ವೇಲುನ ಇಬ್ಬರು ಸಹಚರರಾದ ನೇತಾಜಿ ಹಾಗೂ ಪ್ರತಾಪ್ ಅವರ ಕೈಲಿದ್ದ ಬಾಟೆಲ್ ಒಡೆದು ಅವರು ಸಹ ಸುರೇಶ್ ಗೆ ಮನಸೋ ಇಚ್ಚೆ ತಿವಿದುಬಿಟ್ಟಿದ್ದಾರೆ. ಸುರೇಶ್ ಕೂಗಲು ಶುರು ಮಾಡಿದಾಗ ಭಯಭೀತರಾಗಿ ಅವರದ್ದೇ ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಲು ನೋಡಿದ್ರು ಅಷ್ಟೋತ್ತಿಗೆ ಸಾವನ್ನಪ್ಪಿದ್ದಾನೆ. ಬಳಿಕ ಶವವನ್ನು ಆಟೋದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದು, ಬಳಿಕ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ಘಟನೆ ಬಳಿಕ ಬನಶಂಕರಿ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆಟೋ ನಂಬರ್, ಲೊಕೇಶನ್ ಆಧರಿಸಿ ಆರೋಪಿಗಳ ಪತ್ತೆ ಮಾಡಿದ್ದಾರೆ. ಇನ್ನು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಲು ಹೋದಾಗ ನಿಜವಾಗಿಯೂ ನಮಗೆ ಗೊತ್ತಾಗಿಲ್ಲ, ನಶೆಯಲ್ಲಿ ಮಾಡಿದ್ದೀವಿ, ನಮ್ಮ ಸ್ನೇಹಿತ ನಿಜವಾಗಿಯೂ ಸತ್ತೋಗಿದ್ದಾನಾ ಅಂತಾ ಪೊಲೀಸರನ್ನೇ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ದೇಹದ ವಿಚಾರವಾಗಿ ಪ್ರಶ್ನೆ ಮಾಡಿದ ಯೂಟ್ಯೂಬರ್‌ಗೆ ತಲೆ ತಗ್ಗಿಸುವಂತ ಉತ್ತರ ನೀಡಿದ ನಟಿ!
ಕೊನೆಗೆ ಪೊಲೀಸರು ಮೂವರನ್ನು ಬಂಧನ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ. ಅದೆನೇ ಹೇಳಿ, ಎಣ್ಣೆ ಏಟಲ್ಲಿ ಸಾಕಷ್ಟು ವರ್ಷದಿಂದ ಜೊತೆಗಿದ್ದ ಸ್ನೇಹಿತನನ್ನು ಕೊಲ್ತಾರೆ ಅಂದ್ರೆ ಏನ್ ಹೇಳೋದು. ಇನ್ನಾದ್ರೂ ಸ್ನೇಹಿತರ ಜೊತೆ ಎಣ್ಣೆ ಹಾಕೋ ಟೈಮಲ್ಲಿ ಎಚ್ಚರಿಕೆಯಿಂದ ಇರಬೇಕು. ಇಲ್ಲಾ ಅಂದ್ರೆ ಯದ್ವಾ, ತದ್ವಾ ಕುಡಿದಾಗ ಇಂತಹ ಘಟನೆಗಳು ಕಾಮನ್ ಆಗಿ ಬಿಡುತ್ತೆ.









