ಕುಡಿಯಲು ಹಣ ಕೊಡದಿದ್ದಕ್ಕೆ ಮಹಿಳೆಗೆ ಚಾಕು ಇರಿತ : ತುಂಡಾದ ಎಡ ಕಿವಿ.. ಗದ್ದದವರೆಗೆ ಗಾಯ

ಆ ಮಹಿಳೆ ತನ್ನ ಪಾಡಿಗೆ ತಾನು ಕೂತಿದ್ಳು. ಅಲ್ಲಿಗೆ ಬಂದಿದ್ದ ಅಪರಿಚಿತನೊಬ್ಬ ಹಣ ಕೇಳಿದ್ದ. ಇದರಿಂದ ಗಾಬರಿಗೊಂಡಿದ್ದ ಆಕೆ ಹಣ ಇಲ್ಲ ಎಂದಿದ್ದಾಳೆ. ಇದರಿಂದ ಕೋಪಗೊಂಡವನು ಮಾಡಿದ್ದು ಮಾತ್ರ ಘೋರ ಕೃತ್ಯ. ಆತನ ಹುಚ್ಚಾಟಕ್ಕೆ ಮಹಿಳೆ ಆಸ್ಪತ್ರೆ ಪಾಲಾಗಿದ್ದಾಳೆ. ಅಸಲಿಗೆ ಆಗಿದ್ದಾರರೂ ಏನು..? ಇಲ್ಲಿದೆ ರೋಚಕ ಸುದ್ದಿ

Written by - Krishna N K | Last Updated : Feb 26, 2025, 11:27 PM IST
    • ಹೀಗೆ ಮುಖಕ್ಕೆ ಬ್ಯಾಂಡೆಜ್ ಸುತ್ತಿಕೊಂಡು ಮಲಗಿರುವ ಮಹಿಳೆ ಹೆಸರು ನಾಗಲಕ್ಷ್ಮಿ.
    • ಈಕೆಯ ಈ ಸ್ಥಿತಿಗೆ ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತೆ.
    • ಕುಳಿತಿದ್ದವಳ ಮೇಲೆ ರಾಕ್ಷಸ ರೀತಿಯಲ್ಲಿ ಎರಗಿ ಚಾಕುವಿನಿಂದ ಮುಖ ಕೊಯ್ದವನೇ ಆನಂದ.
ಕುಡಿಯಲು ಹಣ ಕೊಡದಿದ್ದಕ್ಕೆ ಮಹಿಳೆಗೆ ಚಾಕು ಇರಿತ : ತುಂಡಾದ ಎಡ ಕಿವಿ.. ಗದ್ದದವರೆಗೆ ಗಾಯ

ಬೆಂಗಳೂರು : ಹೀಗೆ ಮುಖಕ್ಕೆ ಬ್ಯಾಂಡೆಜ್ ಸುತ್ತಿಕೊಂಡು ಮಲಗಿರುವ ಮಹಿಳೆ ಹೆಸರು ನಾಗಲಕ್ಷ್ಮಿ. ಥಣಿಸಂದ್ರ ಮೂಲದವ್ಳು. ಈಕೆಯ ಈ ಸ್ಥಿತಿಗೆ ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತೆ. ಯಾಕಂದ್ರೆ ತನ್ನ ಪಾಡಿಗೆ ತಾನು ಕುಳಿತಿದ್ದವಳ ಮೇಲೆ ರಾಕ್ಷಸ ರೀತಿಯಲ್ಲಿ ಎರಗಿ ಚಾಕುವಿನಿಂದ ಮುಖ ಕೊಯ್ದವನೇ ಆನಂದ.

Add Zee News as a Preferred Source

ಹೌದು, ಪತಿ ಹಾಗೂ ಮಗಳ ಜೊತಗೆ ಬೈಕ್ ನಲ್ಲಿ ಕಾಲೇಜಿಗೆ ಹೊರಟಿದ್ದ ನಾಗಲಕ್ಷ್ಮಿಗೆ ತಲೆ ಸುತ್ತು ಬಂದಿದೆ. ಅಲ್ಲದೇ ಬಿಳಿ ಶಿವಾಲೆ ಸರ್ಕಲ್ ಬಳಿ ವ್ಯಕ್ತಿಯೊಬ್ಬ ಹಣ ಕೊಡಬೇಕಿತ್ತು. ಹಾಗಾಗಿ ನಾಗಲಕ್ಷ್ಮಿ ಪತಿ ಆತನ ಬಳಿ ಹಣ ಪಡೆದು ನಾಗಲಕ್ಷ್ಮಿಗೆ ನೀಡಿದ್ದ. ಕೆ.ಆರ್.ಪುರಂ‌ ಕಾಲೇಜಿಗೆ ಹೋಗಿ ಬರೋವರೆಗೆ ಬಿಳಿಶಿವಾಲೆ ಸರ್ಕಲ್ ನಲ್ಲಿರುವ ಅರಳಿ ಮರದ ಕೆಳಗೆ ಕುಳಿತುಕೊಳ್ಳಲು ಹೇಳಿ ಅಪ್ಪ ಹಾಗೂ ಮಗಳು ಹೊರಟಿದ್ರು. 

ಇದನ್ನೂ ಓದಿ:ENG vs AFG Match : ಕ್ರಿಕೆಟ್‌ ಜನಕರಿಗೆ ಅಫ್ಘಾನ್‌ ಶಾಕ್‌..! ಟೂರ್ನಿಯಿಂದ ಹೊರಬಿದ್ದ ಇಂಗ್ಲೆಂಡ್‌..

ಆದ್ರೆ ಹಣ ಕಂಡ ಈ ಆನಂದ ನಾಗಲಕ್ಷ್ಮಿ ಬಳಿ ಬಂದಿದ್ದ.ಹಣ ಕೊಡು ಅಂತಾ ಕೇಳಿದ್ದ. ನನ್ನ ಬಳಿ ಹಣ ಇಲ್ಲ ಎಂದಿದ್ದಕ್ಕೆ ಅಲ್ಲೇ ಪಕ್ಕದಲ್ಲೇ ಇದ್ದ ತನ್ನ ಮನೆಗೆ ಹೋಗಿದ್ದ ಆಸಾಮಿ ಚಾಕು ತಂದು ಮಹಿಳೆಯ ಎಡಕಿವಿಯಿಂದ ಹಿಡಿದು ಗದ್ದದವರೆಗೆ ಕೊಯ್ದಿದ್ದಾನೆ.

ಘಟನೆಯಿಂದ ಬೆಚ್ಚಿಬಿದ್ದ ಮಹಿಳೆ ಪ್ರಜ್ಞೆ ತಪ್ಪಿದ್ದಾಳೆ. ಅಲ್ಲದೇ ರಕ್ತ ಹರಿದಿದೆ.ತಕ್ಷಣಕ್ಕೆ ಸ್ಥಳೀಯರು ಆಕೆಯ ಬ್ಯಾಗ್ ನಲ್ಲಿದ್ದ ಆಧಾರ್ ಕಾರ್ಡ್ ಆಧಾರದ ಮೇಲೆ ಗುರುತು ಪತ್ತೆ ಹಚ್ಚಿ ಕಾಲೇಜಿಗೆ ಹೊರಟಿದ್ದ ಮಗಳಿಗೆ ಕರೆ ಮಾಡಿವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ತಂದೆ ಹಾಗೂ ಮಗಳು ನಾಗಲಕ್ಷ್ಮಿಯನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. 

ಇದನ್ನೂ ಓದಿ:ENG vs AFG Match : ಕ್ರಿಕೆಟ್‌ ಜನಕರಿಗೆ ಅಫ್ಘಾನ್‌ ಶಾಕ್‌..! ಟೂರ್ನಿಯಿಂದ ಹೊರಬಿದ್ದ ಇಂಗ್ಲೆಂಡ್‌..

ಅಲ್ಲದೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಆನಂದ್ ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಅದೇನೇ ಹೇಳಿ ಕುಡಿಯುವ ಚಟಕ್ಕೆ ಬಿದ್ದಿದ್ದ ಆಸಾಮಿ ಅಪರಚಿತ ಮಹಿಳೆ ಹಣ ಕೊಡ್ಲಿಲ್ಲ ಅಂತಾ ಅಟ್ಟಹಾಸ ಮೆರೆದಿರೋದು ನಿಜಕ್ಕೂ ದುರಂತ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News