)
Online Betting Addiction: ನೆಲಮಂಗಲ : ಆನ್ಲೈನ್ ಬೆಟ್ಟಿಂಗ್ನಲ್ಲಿ ಹಣ ಕಳೆದ್ಕೊಂಡ ಯುವಕ ಮನೆಯ ಮೇಲ್ಛಾವಣಿ ಕಂಬಿಗೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡ್ಕೊಂಡ ದಾರುಣ ಘಟನೆ ನೆಲಮಂಗಲ ತಾಲೂಕಿನ ಹಂಚಿಪುರ ಗ್ರಾಮದಲ್ಲಿ ನಡೆದಿದೆ.
ಹುಬ್ಬಳ್ಳಿಯಿಂದ ಕೆಲಸ ಹುಡುಕಿಕೊಂಡು ನೆಲಮಂಗಲಕ್ಕೆ ಬಂದಿದ್ದ ಆಕಾಶ್(25) ಮೃತ ದುರ್ದೈವಿ, ಉಷಾರಾಣಿ ಎಂಬುವರಿಗೆ ಸೇರಿದ ತೋಟದ ಮನೆಯಲ್ಲಿ ಆತ್ಮಹ*ತ್ಯೆಗೆ ಶರಣಾಗಿದ್ದಾನೆ. ಚಾಲಕ ಮಹೇಶ್ ಜೊತೆ ವಾಸವಿದ್ದ ಮೃತ ಆಕಾಶ್, ಕೆಲಸ ಹರಿಸಿ ಹುಬ್ಬಳ್ಳಿಯಿಂದ ಬಂದಿದ್ದ, ಈತ ಆನ್ಲೈನ್ ಬೆಟ್ಟಿಂಗ್ನಲ್ಲಿ ಹಣ ಕಳೆದಿದ್ದು, ಹಲವಾರು ಲೋನ್ ಆ್ಯಫ್ಗಳಿಂದಲೂ ಸಹ ಹಣ ಸಾಲ ಮಾಡ್ಕೊಂಡಿದ್ನಂತೆ. ಈ ಬಗ್ಗೆ ಮನೆಯವರನ್ನ ವಿಚಾರಿಸಿದ್ರೆ 3 ತಿಂಗಳ ಹಿಂದೆ ಊರು ಬಿಟ್ಟು ಬಂದಿದ್ದಾನೆ ಅಂತಾರೆ.
ಆನ್ಲೈನ್ ಬೆಟ್ಟಿಂಗ್, ಗೇಮ್ ಮತ್ತು ಇನ್ಸ್ ಟೆಂಟ್ ಲೋನ್ಗಳಂತವುಗಳಿಂದ ಪಡೆದ ಸಾಲ ತೀರಿಸಲಾಗದೆ ಮನನೊಂದ ಯುವಕ ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ- ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಪಾಗಲ್ ಪ್ರೇಮಿ ಹುಚ್ಚಾಟ
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.