)
Bengaluru Crime News: ಬಾಳಿ ಬದುಕಬೇಕಿದ್ದ ಬಾಲಕ, ಇಂದು ಮಸಣ ಸೇರಿದ್ದಾನೆ. ಸೋದರ ಮಾವನೇ ಚಾ*ಕುವಿನಿಂದ ಕುತ್ತಿಗೆ ಕೊ*ಯ್ದು 14 ವರ್ಷದ ಅಮೋಘ ನ ಭೀಕರವಾಗಿ ಕೊ*ಲೆ ಮಾಡಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಹೊರವಲಯದ ಕುಂಬಾರಹಳ್ಳಿಯಲ್ಲಿ ನಡೆದಿದೆ.
ಆರೋಪಿ ಮಾವ ನಾಗಪ್ರಸಾದ್ ಚಾಕುವಿನಿಂದ ಬರ್ಬರವಾಗಿ ಹ*ತ್ಯೆಗೈದಿದ್ದಾನೆ. ಗೇಮ್ ಎನ್ನುವ ಚಟ ಬಿಡುತ್ತಿಲ್ಲ, ಮಾತು ಕೇಳುತ್ತಿಲ್ಲ ಹಾಗಾಗಿ ಎಲ್ಲ ಪ್ರಯತ್ನ ವಿಫಲವಾಯಿತು. ಕೊನೆಗೆ ಕೋಪ ಮಿತಿ ಮೀರಿದ ಸ್ಥಿತಿಯಲ್ಲಿ ಆಗಸ್ಟ್ 4ರಂದು, ಚಾಕು ತೆಗೆದ ಮಾವ, ಬಾಲಕನ ಕುತ್ತಿಗೆ ಕುಯ್ದು ಕೊಂದೆ ಬಿಟ್ಟಿದ್ದಾನೆ. ಹ*ತ್ಯೆ ಬಳಿಕ ಆರೋಪಿ ತಾನು ಆತ್ಮಹ*ತ್ಯೆಗೆ ಯತ್ನಿಸಿದ್ದು ಬದುಕುಳಿದಿದ್ದಾನೆ.
ಇನ್ನೂ ಕೆಲ ತಿಂಗಳ ಹಿಂದೆ ಮಗನ ಗೇಮ್ ಚಟ ನೋಡಿ ತಾಯಿಯಾದ ಶಿಲ್ಪಗೆ ತಲೆ ಕೆಟ್ಟ ಸ್ಥಿತಿಯಾಗಿತ್ತು. ಏನೇ ಬುದ್ದಿವಾದ ಹೇಳಿದರೂ ಮೊಬೈಲ್ ಗೇಮ್ ಬಿಡದ ಅಮೋಘ್, ಶಾಲೆಯನ್ನು ಬಿಟ್ಟು ಮೊಬೈಲ್ ನಲ್ಲಿ ತಲ್ಲೀನನಾಗಿದ್ದ. ತಮ್ಮ ತಂಗಿಯ ಮಗನನ್ನು ಸರಿಯಾದ ದಾರಿಗೆ ತರುವ ನಿಟ್ಟಿನಲ್ಲಿ ನಾಗಪ್ರಸಾದ್, ತಾನೇ ನೋಡಿ ನೋಡಿಕೊಳ್ಳಬೇಕೆಂದು 10 ತಿಂಗಳ ಹಿಂದೆ ಅಮೋಘ್ರನ್ನು ಮನೆಗೆ ಕರೆತಂದಿದ್ದ. ಕೊನೆಗೆ ಕೋಪದ ಬುದ್ಧಿಗೆ ಕೈ ಕೊಟ್ಟು ಕೃತ್ಯ ಎಸಗಿದ್ದಾನೆ. ನಾಲ್ಕು ದಿನಗಳ ಬಳಿಕ ಆತ ಸ್ವತಃ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ಮುಗಿಸಿ, ಆರೋಪಿ ಮಾವನನ್ನ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಏನೇ ಹೇಳಿ ಮಾವನ ಕೋಪಕ್ಕೋ, ಗೇಮ್ ಚಟಕ್ಕೋ ಬದುಕಿ ಬಾಳಬೇಕಿದ್ದ ಬಾಲಕ ಉಸಿರುನಿಲ್ಲಿಸಿದ್ದು ಮಾತ್ರ ದುರಂತ.