Protest: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವನ್ಯ ಜೀವಿ ಸಂರಕ್ಷಕ ಹಾಗೂ ಉರಗ ರಕ್ಷಕರಿಂದ ಬೆಂಗಳೂರಿನಲ್ಲಿ ಇಂದು (ಆ.19) ಪ್ರತಿಭಟನೆ ನಡೆಸಿದರು.

Protest: ವನ್ಯಜೀವಿ ಸಂರಕ್ಷಕರ ತುರ್ತು ಪರಿಸ್ಥಿತಿ ನಿಧಿ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ವನ್ಯ ಜೀವಿ ಸಂರಕ್ಷಕ ಹಾಗೂ ಉರಗ ರಕ್ಷಕರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ನೂರಾರು ವನ್ಯಜೀವಿ ಸಂರಕ್ಷರು ಸೇರಿ ಉರಗ ತಜ್ಞರು ಭಾಗಿಯಾಗಿದ್ದರು. ಅವರ ಬೇಡಿಕೆಗಳು ಈ ಕೆಳಕಂಡಂತಿವೆ:
1. ವನ್ಯಜೀವಿ ಸಂರಕ್ಷಕರು, ಹಾವು ರಕ್ಷಕರಿಗೆ ವನ್ಯಜೀವಿಗಳಿಂದ ರಕ್ಷಣೆ ವೇಳೆಯಲ್ಲಿ ಆಕಸ್ಮಿಕವಾಗಿ ಸಾವನಪ್ಪಿದಾಗ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು.
2. ವನ್ಯಜೀವಿ ಸಂರಕ್ಷರು, ಹಾವುರಕ್ಷಕರಿಗೆ ರಕ್ಷಣೆ ವೇಳೆಯಲ್ಲಿ ವನ್ಯಜೀವಿಗಳಿಂದ ದಾಳಿಗೆ ಒಳಗಾದಾಗ ವೈದ್ಯಕೀಯ ವೆಚ್ಚವನ್ನು ಭರಿಸಬೇಕು
3. ವನ್ಯಜೀವಿ ಸಂರಕ್ಷಕರು ಹಾಗೂ ಹಾವು ರಕ್ಷಕರಿಗೆ ವನ್ಯಜೀವಿಗಳಿಂದ ದಾಳಿಗೆ ಒಳಗಾದಲ್ಲಿ ಅವರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು.
4. ವನ್ಯಜೀವಿ ಸಂರಕ್ಷರಿಗೆ ಮಾಸಿಕ ಗೌರವಧನ ನೀಡುವ ಯೋಜನೆ ರೂಪಿಸಬೇಕು
5. ವನ್ಯಜೀವಿ ಸಂರಕ್ಷಕರಿಗೆ ಹಾವು ರಕ್ಷಕರಿಗೆ ಅಧಿಕೃತವಾಗಿ ತರಬೇತಿ, ಕೌಶಲ್ಯ ನೀಡಿ ಸಲಕರಣೆಗಳನ್ನು ನೀಡಬೇಕು
6. ಜೀವವಿಮೆ ಮತ್ತು ಆರೋಗ್ಯವಿಮೆಯನ್ನು ವನ್ಯಜೀವಿ ಸಂರಕ್ಷಕರು, ಹಾವು ರಕ್ಷಕರಿಗೆ ಮತ್ತವರ ಕುಟುಂಬಕ್ಕೆ ನೀಡುವುದು.
7. ಸಂಬಂಧಪಟ್ಟ ಇಲಾಖೆಯಿಂದ ವನ್ಯಜೀವಿ ಸಂರಕ್ಷಕರು, ಹಾವು ರಕ್ಷಕರಿಗೆ ಪರವಾನಿಗೆ ಹಾಗೂ ಗುರುತಿನ ಚೀಟಿಯನ್ನು ನೀಡಬೇಕು
8. ವನ್ಯಜೀವಿ ಸಂರಕ್ಷಕರ ತುರ್ತು ಪರಿಸ್ಥಿತಿ ನಿಧಿ ಸ್ಥಾಪಿಸಬೇಕು.