ರ್ಯಾಪಿಡೋ ಬೈಕ್ ಟ್ಯಾಕ್ಸಿ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮೊದಲು ಕೈ ಹಾಕಿದ್ದು ಯುವತಿ, ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಯ್ತು ಅಸಲಿ ಮ್ಯಾಟರ್‌

Rapido Driver: ಜಯನಗರದಲ್ಲಿ ನಡೆದಿರುವ ರ್ಯಾಪಿಡೋ ಬೈಕ್ ಟ್ಯಾಕ್ಸಿ ಹಲ್ಲೆ ಪ್ರಕರಣವು ಇದೀಗ ಭಾರೀ ತಿರುವು ಪಡೆದುಕೊಂಡಿದೆ. ಮೊದಲಿಗೆ ವೈರಲ್‌ ಆಗಿದ್ದ ವಿಡಿಯೋದಲ್ಲಿ ತಪ್ಪಿತಸ್ತನ ಪಟ್ಟ ಸಿಕ್ಕಿದ್ದ ಚಾಲಕನಿಗೀಗ ಸಮರ್ಥನೆ ಸಿಕ್ಕಿದೆ.  

Written by - Deepa A Reddy | Last Updated : Jun 16, 2025, 08:41 PM IST
  • ರ್ಯಾಪಿಡೋ ಬೈಕ್ ಟ್ಯಾಕ್ಸಿ ಹಲ್ಲೆ ಪ್ರಕರಣವು ಇದೀಗ ಭಾರೀ ತಿರುವು ಪಡೆದುಕೊಂಡಿದೆ.
  • ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು ಸತ್ಯಾಂಶ ಏನು ಎಂಬುದನ್ನು ಬಿಚ್ಚಿಟ್ಟಿದೆ.
  • ಜೂನ್ 13ರಂದು ಜಯನಗರದ ಬಾಟಾ ಶೋರೂಂ ಬಳಿ ನಡೆದ ಘಟನೆ
ರ್ಯಾಪಿಡೋ ಬೈಕ್ ಟ್ಯಾಕ್ಸಿ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮೊದಲು ಕೈ ಹಾಕಿದ್ದು ಯುವತಿ, ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಯ್ತು ಅಸಲಿ ಮ್ಯಾಟರ್‌

ಬೆಂಗಳೂರು: ಜಯನಗರದಲ್ಲಿ ನಡೆದಿರುವ ರ್ಯಾಪಿಡೋ ಬೈಕ್ ಟ್ಯಾಕ್ಸಿ ಹಲ್ಲೆ ಪ್ರಕರಣವು ಇದೀಗ ಭಾರೀ ತಿರುವು ಪಡೆದುಕೊಂಡಿದೆ. ಮೊದಲಿಗೆ ವೈರಲ್‌ ಆಗಿದ್ದ ವಿಡಿಯೋದಲ್ಲಿ ತಪ್ಪಿತಸ್ತನ ಪಟ್ಟ ಸಿಕ್ಕಿದ್ದ ಚಾಲಕನಿಗೀಗ ಸಮರ್ಥನೆ ಸಿಕ್ಕಿದೆ. ಯುವತಿಯ ಮೇಲೆ ರ್ಯಾಪಿಡೋ ಬೈಕ್ ಚಾಲಕ ಹಲ್ಲೆ ಮಾಡಿದ್ದ ಎನ್ನುವ ವಿಡಿಯೋ ಈ ಮುಂಚೆ ವೈರಲ್‌ ಆಗಿತ್ತು. ಈ ವಿಡಿಯೋ ನೋಡಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು, ಚಾಲಕ ಸುಹಾಸ್‌ನ ವಿರುದ್ದ ಎಲ್ಲರೂ ತಿರುಗಿ ಬಿದ್ದಿದ್ದರು. ಆದರೆ, ಇದೀಗ ಸಿಸಿಟಿವಿ ದೃಶ್ಯಗಳ ಬಿಡುಗಡೆಯಾಗಿದ್ದು, ಘಟನೆ ಹಿಂದಿನ ಪೂರ್ತಿ ಸ್ಟೋರಿಗೆ ಟ್ವಿಸ್ಟ್‌ ಸಿಕ್ಕಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು ಸತ್ಯಾಂಶ ಏನು ಎಂಬುದನ್ನು ಬಿಚ್ಚಿಟ್ಟಿದೆ.

Add Zee News as a Preferred Source

ಜೂನ್ 13ರಂದು ಜಯನಗರದ ಬಾಟಾ ಶೋರೂಂ ಬಳಿ ನಡೆದ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು, ಆರಂಭದಲ್ಲಿ ಯುವತಿ ಈ ಕುರಿತಾಗಿ ದೂರು ನೀಡಿಲ್ಲ. ಆದರೆ ನಂತರ ಸ್ನೇಹಿತರ ಸಲಹೆ ಮೇರೆಗೆ ಆಕೆ ಚಾಲಕನ ವಿರುದ್ಧ ದೂರು ದಾಖಲಿಸಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಎಫ್.ಐ.ಆರ್ ದಾಖಲಿಸಿ, ಚಾಲಕ ಸುಹಾಸ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು. 

ಆದರೆ ನಂತರ ಲಭ್ಯವಾದ ಸಿಸಿಟಿವಿ ದೃಶ್ಯದಲ್ಲಿ ಈ ಪ್ರಕರಣಕ್ಕೆ ಪೂರ್ತಿ ಟ್ವಿಸ್ಟ್‌ ಸಿಕ್ಕಿದೆ. ವಿಡಿಯೋದಲ್ಲಿ, ಬೈಕ್ ನಡವಳಿಕೆಯನ್ನು ಪ್ರಶ್ನಿಸಿದ ಚಾಲಕನ ಮೇಲೆ ಯುವತಿಯೇ ಮೊದಲು ಹಲ್ಲೆ ನಡೆಸಿದ್ದು ಸ್ಪಷ್ಟವಾಗಿ ಕಂಡುಬಂದಿದೆ. ಚಾಲಕನನ್ನು ಒಂದಲ್ಲ ಮೂರು ಬಾರಿ ಯುವತಿ ಹೊಡೆದಿದ್ದು, ಇದಕ್ಕೆ ತಿರುಗೇಟಾಗಿ ಸುಹಾಸ್‌ ಯುವತಿಯ ಮೇಲೆ ಕೈ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಾಲಕ ಸುಹಾಸ್ ಸ್ವತಃ ಈ ಕುರಿತು ಮಾತನಾಡುತ್ತಾ, “ನಾನು ಕಾರಣವಿಲ್ಲದೆ ಯುವತಿಯ ಮೇಲೆ ಹಲ್ಲೆ ಮಾಡಿಲ್ಲ. ನನ್ನನ್ನು ಆಕೆ ಮೂರ್ಮೂರು ಬಾರಿ ಹೊಡೆದಳು ಅದಕ್ಕೆ ನಾನು ಸಹನೆ ಕಳೆದುಕೊಂಡು, ನಾನು ತಿರುಗಿ ಹೊಡೆದೆ,” ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಡಿಸಿಪಿ ಸೌತ್ ಲೊಕೇಶ್ ಜಗಲಾಸರ್ ಮಾತನಾಡುತ್ತಾ, “ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಘಟನೆಗೆ ಮತ್ತೊಂದು ಮುಖವಿದೆಯೆಂಬುದು ಬಯಲಾಗಿದೆ. ತನಿಖೆ ಮುಂದುವರಿಯುತ್ತಿದೆ,” ಎಂದರು.

ಒಟ್ಟಾರೆ, ಮೊದಲು ಯುವತಿಯೇ ಹಲ್ಲೆ ನಡೆಸಿದ್ದಾಳೆ, ಆದರೆ ಸಾಮಾಜಿಕ ಜಾಲತಾಣದಲ್ಲಿ ಅರ್ಧಭಾಗದ ವಿಡಿಯೋ ಹರಿಬಿಟ್ಟು ಚಾಲಕನ ವಿರುದ್ಧ ಸ್ಟೋರಿಯನ್ನು ತಿರುಚಿದ್ದಾಳೆ ಎಂಬುದು ಈಗ ಬಹಿರಂಗವಾಗಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೇಲ್ಮಟ್ಟದ ನಿರ್ಣಯ ನೀಡುವ ಮನೋಭಾವದ ವಿರುದ್ಧವೂ ಪ್ರಶ್ನೆಗಳು ಎದ್ದಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Deepa A Reddy

ದೀಪಾ ಎ (Deepa A) Zee ಕನ್ನಡ ನ್ಯೂಸ್‌ ಮಾಧ್ಯಮದಲ್ಲಿ 2023ರಿಂದ ಕೆಲಸ ಮಾಡುತ್ತಿದ್ದು, ವೆಬ್‌ ವಿಭಾಗದಲ್ಲಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದ್ದು, ಇದೀಗ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಜ್ಯೋತಿಷ್ಯ, ವೈರಲ್‌, ಆರೋಗ್ಯ ಹಾಗೂ ಲೈಫ್‌ ಸ್ಟೈಲ್‌ ವಿಭಾಗಗಳಲ್ಲಿನ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಓದುಗರನ್ನು ತಮ್ಮ ಬರವಣಿಗೆಯ ಮೂಲಕ ತಲುಪುವ ಗುರಿ ಇವರದ್ದಾಗಿದ್ದು, ಓದುಗರ ಆಸಕ್ತಿ ಹಾಗೂ ಅಗತ್ಯಗಳನ್ನು ಗೌರವಿಸುತ್ತಾರೆ. 

...Read More

Trending News