ಬೆಂಗಳೂರು : ಈ ಫೋಟೊದಲ್ಲಿ ಕಾಣ್ತಿರೊ ಆಸಾಮಿ ಹೆಸರು ಪ್ರಭುದೇವ. ಇನ್ನೂ 20 ರ ಹರೆಯ. ಖಾಸಗಿ ಕಾಲೇಜಿನಲ್ಲಿ ಓದು ಮುಗಿಸಿದ್ದ ಈತ ಆ್ಯಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡ್ತಿದ್ದ. ಇನ್ನೂ ಈತನಿಗೆ ಸಾಥ್ ಕೊಟ್ಟ ಪುಡಾರಿಯ ಹೆಸರು ಗಣೇಶ್ ಅಂತಾ. 20 ವರ್ಷದ ಇವ್ನು ಬೇಕರಿ ಒಂದರಲ್ಲಿ ಕೆಲಸ ಮಾಡ್ತಿದ್ದ. ಬೈಕ್ ನಲ್ಲಿ ಬಂದ ಈ ಪೋಕರಿಗಳು. ಚಾಕು ತೋರಿಸಿ ಅದ್ಹೇಗೆ ಅಟ್ಟಹಾಸ ಮೆರಿತಿದ್ದಾರೆ ನೋಡಿ..
ವೈಭವ್ ಎಂಬ ಯುವಕ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡ್ತಿದ್ದಾನೆ. ಈತನಿಗೆ ಅದೇ ತರಗತಿಯಲ್ಲಿ ಓದ್ತಿರುವ ಓರ್ವ ಸ್ನೇಹಿತೆ ಇದ್ದಾಳೆ. ಇಬ್ಬರು ಒಟ್ಟಿಗೆ ಕಾಲೇಜಿಗೆ ಬರೋದು ಹೋಗೋದು ಮಾಡ್ತಾ ಇದ್ರು. ಆದ್ರೆ ಅದೇ ಕಾಲೇಜಿನಲ್ಲಿ ಓದು ಮುಗಿಸಿ ಸದ್ಯ ಆ್ಯಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡ್ತಿರುವ ಪ್ರಭುದೇವ ವೈಭವ್ ಸ್ನೇಹಿತೆಗೆ ಇನ್ಸ್ಟಾಗ್ರಾಮ್ ನಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಿದ್ದಾನೆ. ಯುವತಿ ಸ್ನೇಹಿತನಿಗೆ ವಿಚಾರ ಹೇಳಿದ್ದು, ಆತ ಪ್ರಶ್ನಿಸಿದ್ದಾನೆ. ಇದೇ ವಿಚಾರವಾಗಿ ವೈಭವ್ ಹಾಗೂ ಪ್ರಭುದೇವ ಮಧ್ಯೆ ಎರಡ್ಮೂರು ಬಾರಿ ಆಗಾಗ ಗಲಾಟೆ ಆಗುತ್ತಲೇ ಇತ್ತು.
ಇದನ್ನೂ ಓದಿ:ಸರ್ಕಾರಿ ನೌಕರರ ಮೂಲ ವೇತನದಲ್ಲಿ 2 ಪಟ್ಟು ಹೆಚ್ಚಳ : 8ನೇ ವೇತನ ಆಯೋಗ ಜಾರಿಗೂ ಮುನ್ನವೇ ಜಾಕ್ ಪಾಟ್
ಅಕ್ಟೋಬರ್ 11 ರಂದು ಸಂಜೆಹೊತ್ತಿಗೆ ಇದೇ ಗಲಾಟೆ ವಿಕೋಪಕ್ಕೆ ತಿರುಗಿತ್ತು. ವೈಭವ್ ಹಾಗೂ ಸ್ನೇಹಿತೆ ನಡೆದುಕೊಂಡು ಹೋಗ್ತಿದ್ದ ಆರ್.ಟಿ.ನಗರ ರಸ್ತೆಗೆ ಬೈಕ್ ನಲ್ಲಿ ಬಂದ ಪ್ರಭುದೇವ ಮತ್ತು ಗಣೇಶ್ ವೈಭವ್ ಜೊತೆಗೆ ಕಿರಿಕ್ ತೆಗೆದು ಚಾಕುವಿನಿಂದ ನಡುರಸ್ತೆಯಲ್ಲಿಯೇ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲಾ ಚಾಕು ತೋರಿಸಿ ವಾರ್ನಿಂಗ್ ಮಾಡಿ ಹೊರಟಿದ್ದಾರೆ.
ಘಟನೆಗೆ ಸಂಬಂಧ ಪಟ್ಟಂತೆ ವೈಭವ್ ಆರ್.ಟಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಪ್ರಭುದೇವ್ ಮತ್ತು ಗಣೇಶ್ ಎಂಬ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಅದೇನೇ ಹೇಳಿ. ತಾವಾಯ್ತು ತಮ್ಮ ಕೆಲಸ ಆಯ್ತು ಅಂತಾ ಇದ್ದಿದ್ದರೆ ಇವತ್ತು ಈ ಪರಿಸ್ಥಿತಿ ಬರ್ತಿರ್ಲಿಲ್ಲ. ಯುವತಿ ವಿಚಾರವಾಗಿ ಹಾದಿ ತಪ್ಪಿದ ಇಬ್ಬರು ಯುವಕರು ಸದ್ಯ ಜೈಲು ಪಾಲಾಗಿದ್ದಾರೆ.









