)
Bengaluru Crime News: ಪಾರ್ಕ್ ಮಾಡಿದ್ದ ಸ್ಕೂಲ್ ಬಸ್ನಲ್ಲಿ ಬೆಂಕಿ ಹೊತ್ತಿ ಉರಿದಿದ್ದು ಬಸ್ ಒಳಗೆ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಬಾಣಸವಾಡಿ OMBR ಲೇಔಟ್ ನಲ್ಲಿ ರಾತ್ರಿ 10:45ರ ಸುಮಾರಿಗೆ ಸಂಭವಿಸಿದೆ.
ಬಾಣಸವಾಡಿ ಅಗ್ನಿಶಾಮಕ ಕಛೇರಿ ಬಳಿಯಲ್ಲಿ ಈ ಘಟನೆ ನಡೆದಿದ್ದು ರಾಮಮೂರ್ತಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್ ಒಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯ ಶ*ವ ಪತ್ತೆಯಾಗಿದ್ದು ಆ ವ್ಯಕ್ತಿಯ ಗುರುತೂ ಸಹ ಪತ್ತೆಯಾಗಿಲ್ಲ. ಈ ಘಟನೆ ಬಗ್ಗೆ ಅನುಮಾನಗಳಿದ್ದು ಇದು ಕೊ*ಲೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ, ಸುಮಾರು ಮೂರ್ನಾಲ್ಕು ತಿಂಗಳಿಂದ ಬಸ್ ಇದೇ ಜಾಗದಲ್ಲಿ ನಿಲ್ಲುತ್ತಿತ್ತು. ಘಟನೆ ನಡೆದ ಸ್ಥಳದ ಪಕ್ಕದಲ್ಲೆ ಬಸ್ ಮಾಲಿಕನ ಮನೆ ಇದ್ದು, ಬಸ್ ಮಾರುವ ಸಲುವಾಗಿ ಇಲ್ಲಿ ಬಸ್ ನಿಲ್ಲಿಸಲಾಗಿತ್ತು ಎನ್ನಲಾಗಿದೆ.
ಇನ್ನೂ ಬಸ್ ನಿಲ್ಲಿಸಿದ್ದ ಜಾಗ ಪಡೆ ಹುಡುಗರ ಅಡ್ಡೆಯಾಗಿತ್ತು. ಎಷ್ಟು ಬಾರಿ ಬಸ್ ಡೋರ್ ಲಾಕ್ ಮಾಡಿದ್ರು ಹುಡುಗರು ಬಸ್ ಒಳಗೆ ಹೋಗಿ ಕೂರುತ್ತಿದ್ದರು. ಅವರ ನಡುವೆಯೇ ಗಲಾಟೆಯಾಗಿ ಬಸ್ಗೆ ಬೆಂಕಿ ಇಟ್ಟಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ರಾಮಮೂರ್ತಿ ನಗರ ಪೊಲೀಸರು ಘಟನೆ ಸಂಬಂಧಿಸಿದಂತೆ ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.