ನವೆಂಬರ್ ತಿಂಗಳು ಬಂತಂದ್ರೆ ಸಾಕು ಬೆಂಗಳೂರಿನಲ್ಲಿ ಕೃಷಿ ಉತ್ಸವ ಆರಂಭ ಆಗುತ್ತೆ. ಯಲಹಂಕ ಬಳಿ ಇರುವ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜನೆ ಆಗುವ ಕೃಷಿ ಮೇಳ ಹೊಸ ಹೊಸ ಥೀಮ್ ಗಳ ಮೂಲಕ ಜನಾಕರ್ಷಣೆಗೊಳ್ಳುತ್ತದೆ. ಈ ಭಾರಿಯೂ ಕೃಷಿಕರಿಂದ ಕೃಷಿಕರಿಗಾಗಿ ಆಯೋಜನೆ ಆದ ಕೃಷಿ ಮೇಳಕ್ಕೆ ಭಾರೀ ರೆಸ್ಪಾನ್ಸ್ ಸಿಕ್ಕಿದೆ. ಆರಂಭಗೊಂಡ ಮೊದಲ ದಿನದಿಂದ ಕೊನೆ ದಿನದವರೆಗೂ ಕೃಷಿ ಉತ್ಸವದಲ್ಲಿ ತಂತ್ರಜ್ಞಾನದ ಆವಿಷ್ಕಾರಕ್ಕೆ ಕಾರಣವಾಯ್ತು. ಡ್ರೈವರ್ ಲೆಸ್ ಟ್ರ್ಯಾಕ್ಟರ್, ಮಾನವ ರಹಿತ ಔಷಧಿ ಸಿಂಪಡಣೆ ಯಂತ್ರ, ಕೀಟ ಪ್ರಪಂಚ ಸೇರಿ ನೋಡುಗರನ್ನ ಆಶ್ಚರ್ಯ ಚಕಿತರಾಗುವಂತೆ ಮಾಡಿದ್ವು.
ರೈತರಿಗಾಗಿಯೇ ಸಮಗ್ರ ಕೃಷಿ ಪದ್ಧತಿ, ಬೇಸಾಯ, ರೇಷ್ಮೆ ಕೃಷಿ, ನೂತನ ತಳಿಗಳ ಪ್ರಾತಕ್ಷಿಕೆ, ತೋಟಗಾರಿಕೆ, ಸಿರಿಧಾನ್ಯ, ಜಲಾನಯನ ನಿರ್ವಹಣೆ, ಸಾವಯವ ಕೃಷಿ, ಮಣ್ಣು ರಹಿತ ಕೃಷಿ ಪದ್ಧತಿಯಂತಹ ಅನೇಕ ನೂತನ ಯಂತ್ರೋಪಕರಣಗಳ ಬಗ್ಗೆಯೂ ಬಂದಂತ ಕೃಷಿ ಮೇಳ ಅಭಿಮಾನಿಗಳಿಗೆ ರಸದೌತಣ ಸಿಕ್ಕಂತಾಯ್ತು. ಜೊತೆಗೆ ಕೃಷಿಮೇಳಕ್ಕೆ ಎಂಟ್ರಿ ಆಗ್ತಿದ್ದಂತೆ ಹಳ್ಳಿಕಾರ್ ತಳಿ ಎತ್ತುಗಳು, ಜಾಫ್ರಾಬಾದ್ ಎಮ್ಮೆ, ಪುಂಗನೂರು ಗಿಡ್ಡ ಹಸುಗಳು ಗಮನ ಸೆಳೆದವು.
ಈ ಭಾರಿಯ ಜಿಕೆವಿಕೆ ಕೃಷಿ ಉತ್ಸವ ದಾಖಲೆ ನಿರ್ಮಿಸಿದೆ. ನಾಲ್ಕು ದಿನಗಳಲ್ಲಿ ಬರೊಬ್ಬರಿ 19 ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಇದು ಕೃಷಿ ಮೇಳದ ಇತಿಹಾಸದಲ್ಲೇ ಅತೀ ಹೆಚ್ಚು ಜನರ ವೀಕ್ಷಣೆ ಎಂದು ಅಂದಾಜಿಸಲಾಗಿದ್ದು, ಅಂತಿಮವಾಗಿ ಮೇಳಕ್ಕೆ ಅದ್ದೂರಿ ತೆರೆಬಿದ್ದಿದೆ. ಒಟ್ನಲ್ಲಿ ವೀಕೆಂಡ್ ಮೂಡ್ ನಲ್ಲಿದ್ದ ಬೆಂಗಳೂರು ಜನರಿಗೆ ದೊಡ್ಡ ಜಾತ್ರೆಯಾದ್ರೆ, ಇತ್ತ ಬೆಂಗಳೂರಿನ ಸುತ್ತ ಮುತ್ತಲಿನ ಕೃಷಿಕರಿಗೆ ಒಳ್ಳೊಳ್ಳೊ ಯಂತ್ರೋಪಕರಣಗಳು, ಇತರೆ ಕೃಷಿ ಉತ್ಪನ್ನಗಳ ಪರಿಚಯ ಆಗಿದ್ದು ಖುಷಿತಂದಿದೆ.









