ರಾಜಧಾನಿಯಲ್ಲಿ ಹೆಚ್ಚುತ್ತಿದೆ ಮಂಗಳಮುಖಿಯರ ದೌರ್ಜನ್ಯ..! ಹಣಕ್ಕಾಗಿ ಬೇಡಿಕೆ, ಕೊಟ್ಟಿಲ್ಲ ಅಂದ್ರೆ ರಂಪಾಟ..

ಅಲ್ಲಿ ಶುಭ ಸಮಾರಂಭ ನಡೆತಿತ್ತು. ಇದನ್ನೇ ಕಾದು ಕುಳಿತ್ತಿದ್ದ ಗುಂಪೊಂದು ಅಲ್ಲಿರುವ ಸಂತಸವನ್ನೇ ಹಾಳು ಮಾಡಿಬಿಟ್ಟಿತ್ತು. ಅಂದಹಾಗೇ ಇಂತಹ ಗ್ಯಾಂಗ್ ಗಳು ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಾ ಇದ್ದು, ಸಾರ್ವಜನಿಕರಿಗೆ ಇದು ಸಾಕಷ್ಟು ಕಿರಿಕಿರಿ ಉಂಟು ಮಾಡ್ತಿದೆ. ಹಾಗಾದ್ರೆ ಆ ಗ್ಯಾಂಗ್ ಯಾವುದು, ಅವರೇನೂ ಮಾಡಿದ್ರು ಅಂತೀರಾ. ಈ ಸ್ಟೋರಿ ನೋಡಿ.

Written by - Krishna N K | Last Updated : Dec 8, 2024, 06:59 PM IST
    • ಸಿಲಿಕಾನ್‌ ಸಿಟಿಯಲ್ಲಿ ಮಂಗಳಮುಖಿಯರ ದೌರ್ಜನ್ಯ ಮುಂದುವರಿದಿದೆ.
    • ಬಟ್ಟೆ ಅಂಗಡಿ ಓಪನಿಂಗ್ ವೇಳೆ ತೃತೀಯ ಲಿಂಗಿಗಳ ಎಂಟ್ರಿ.
    • ಕೇಳಿದಷ್ಟು ಹಣ ಕೊಡಲಿಲ್ಲ ಅಂತಾ ಮಂಗಳಮುಖಿಯರ ಅಟ್ಟಹಾಸ.
ರಾಜಧಾನಿಯಲ್ಲಿ ಹೆಚ್ಚುತ್ತಿದೆ ಮಂಗಳಮುಖಿಯರ ದೌರ್ಜನ್ಯ..! ಹಣಕ್ಕಾಗಿ ಬೇಡಿಕೆ, ಕೊಟ್ಟಿಲ್ಲ ಅಂದ್ರೆ ರಂಪಾಟ.. title=

ಬೆಂಗಳೂರು : ಮಂಗಳಮುಖಿಯರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಉತ್ತಮ ಜೀವನ ನಡೆಸಬೇಕು ಅಂತಾ ಎಲ್ಲರು ಬಯಸ್ತಾರೆ. ಹಲವು ಮಂಗಳಮುಖಿಯರು ಸಮಾಜದಲ್ಲಿ ಎಲ್ಲರಂತೆ ಛಲದಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಕೆಲ ಮಂಗಳಮುಖಿಯರು ಕಿರಿಕ್ ಮಾಡಿಕೊಂಡೆ ಇರಬೇಕು ಅಂತಲೇ ಇದ್ದಾರೆ ಅನ್ಸುತ್ತೆ. ಶುಭ ಸಮಾರಂಭಗಳು ನಡೆಯುವುದನ್ನು ಕಾಯುವ ಇವರು ಎಲ್ಲಿಲ್ಲದ ಮೊಂಡಾಟ ಮಾಡಿ ಹೈಡ್ರಾಮಾ ಕ್ರಿಯೇಟ್ ಮಾಡ್ತಾರೆ. 

ಹೌದು.. ನಗರದಲ್ಲಿ ಮಂಗಳಮುಖಿಯರ ದೌರ್ಜನ್ಯ ಮುಂದುವರಿದಿದೆ. ಶುಭ ಕಾರ್ಯಕ್ರಮ ಮಾಡೋ‌‌ ಜನರಿಗೆ ಕೆಲವು ಮಂಗಳಮುಖಿಯರದ್ದೆ ಭಯ. ಮನೆ, ಆಫೀಸ್, ಶಾಪ್ ಮುಂದೆ ಹಬ್ಬದ ವಾತಾವರಣವಿದ್ರೆ ಇವರು ಎಂಟ್ರಿ ಕೊಡ್ತಾರೆ. ತಾವೇ ಡಿಮ್ಯಾಂಡ್ ಹಣ ಕೇಳ್ತಾರೆ, ಅವ್ರು ಕೇಳಿದಷ್ಟು ಹಣ ಕೊಡಲಿಲ್ಲ ಅಂದ್ರೆ ಅನುಚಿತ ವರ್ತನೆ ತೋರಿ ದೌರ್ಜನ್ಯ ಎಸಗಯತ್ತಾರೆ. ವಿಜಯನಗರದ ಹಂಪಿ ನಗರದಲ್ಲಿ ಮಂಗಳಮುಖಿಯರು ದೌರ್ಜನ್ಯ ವೆಸಗಿದ್ದಾರೆ. 

ಇದನ್ನೂ ಓದಿ:ಸರ್ಕಾರದ ಬೊಕ್ಕಸ ಬರಿದಾಗಿ ಕಳಪೆ ಔಷಧಿ 

ನಿನ್ನೆ ಸಂಜೆ ಬಟ್ಟೆ ಅಂಗಡಿ ಉದ್ಘಾಟನೆ ಮುನ್ನ ಹೋಮಹವನ ಮಾಡುವಾಗ ಸರಿಯಾಗಿ ಪೂಜೆ ಸಮಯಕ್ಕೆ ಆಗಮಿಸಿರೋ ಮಂಗಳಮುಖಿಯರ ಗುಂಪು 10 ಸಾವಿರ ಕೊಡುವಂತೆ ಡಿಮ್ಯಾಂಡ್ ಮಾಡಿದೆ. ಎರಡು ಸಾವಿರ ಕೊಟ್ಟರೂ ಒಪ್ಪದ ಮಂಗಳಮುಖಿಯರ ತಂಡ 10 ಸಾವಿರ ರೂ‌ ಕೊಡದೇ ಇರೋದಕ್ಕೆ ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಂಗಡಿ ಮುಂದೆ ರಂಪಾಟ ಮಾಡಿರುವ ಆರೋಪ ಕೇಳಿ ಬಂದಿದೆ. 

ಇನ್ನೂ ಕೆಲ ಮಂಗಳಮುಖಿಯರು ಅನೇಕ ಬಾರಿ ಇದೇ ರೀತಿಯ ವರ್ತನೆ ತೋರುತ್ತಿದ್ದಾರೆ. ಅವಾಚ್ಯ ಶಬ್ದಗಳ ಬಳಕೆ, ಹಲ್ಲೆಗೆ ಯತ್ನಿಸುವುದನ್ನು ಮಾಡುತ್ತಿದ್ದಾರೆ. ಹೀಗಾಗಿ ಇಂತವರನ್ನು ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಪೊಲೀಸರು ಕೆಲಸ ಮಾಡಬೇಕಿದೆ. ಸದ್ಯ ನಿನ್ನೆಯ ಘಟನೆ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ದೌರ್ಜನ್ಯದ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ವಿಡಿಯೋ ಆಧಾರದ ಮೇಲೆ ಪೊಲೀಸರು ಏನ್ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News