ಸೊಳ್ಳೆ ಬತ್ತಿಯಲ್ಲಿರುವ ಅಂಶಗಳು ತಲೆನೋವನ್ನು ಉಂಟುಮಾಡಬಹುದು, ಒಮ್ಮೊಮ್ಮೆ ಕಣ್ಣಿನ ಉರಿತ ಕೂಡ ಉಂಟಾಗಬಹುದು.
ಹೊಗೆಯು ಆಸ್ತಮಾವನ್ನು ಪ್ರಚೋದಿಸಬಹುದು. ಮತ್ತು ಅದರ ರೋಗಲಕ್ಷಣಗಳನ್ನು ಮನ್ನಷ್ಟು ಹದಗೆಡಿಸಬಹುದು. ಎದೆಯ ಬಿಗಿತ, ಉಸಿರಾಟದ ತೊಂದರೆ ಮತ್ತು ಇತರ ರೋಗಲಕ್ಷಣಗಳಿಗೆ ಇದು ಕಾರಣವಾಗಬಹುದು.
ಸೊಳ್ಳೆ ಬತ್ತಿಯು ಕಾರ್ಸಿನೋಜೆನ್‌ಗಳನ್ನು ಹೊಂದಿರುತ್ತದೆ, ಇದರಲ್ಲಿ ಹೊರಬರುವ ಗಾಳಿ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಹೊಗೆಯಲ್ಲಿನ ರಾಸಾಯನಿಕಗಳು ಅಲರ್ಜಿಯನ್ನು ಉಂಟು ಮಾಡಬಹುದು. ಊತ ಮತ್ತು ಉಸಿರಾಟದ ತೊಂದರೆಗಳನ್ನು ಹೆಚ್ಚಿಸಬಹುದು.
ಹೊಗೆ ಕೀಟನಾಶಕಗಳನ್ನು ಹೊಂದಿದ್ದು, ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಸಿರಾಡಿದರೆ ಮನುಷ್ಯರು ಮತ್ತು ಪ್ರಾಣಿಗಳಿಗೆ ವಿಷಕಾರಿಯಾಗಿ ಪರಿಣಮಿಸಬಹದು.
ಸೊಳ್ಳೆ ಬತ್ತಿಯಿಂದ ಬರುವ ಹೊಗೆಯು ಆಲೆಥಿನ್ ಮತ್ತು ಪೈರೆಥಿನ್ ನಂತಹ ರಾಸಾಯನಿಕಗಳನ್ನು ಹೊಂದಿದ್ದು, ಕಣ್ಣು, ಮೂಗು ಮತ್ತು ಗಂಟಲಿಗೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಇದರಿಂದ ಉಬ್ಬಸ ಮತ್ತು ಉಸಿರಾಟದ ಸಮಸ್ಯೆಗಳುಂಟಾಗಬಹುದು.