)
ಆ ಹುಡುಗಿ ಹೊಟ್ಟೇನೋವಿನಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದರು. ಹೆತ್ತವರೂ ಕೂಡಾ ಹಾಗೇ ಅಂದುಕೊಂಡು ಎಲ್ಲಾ ಕಾರ್ಯ ಮಾಡಿ ಮುಗಿಸಿದ್ದರು. ಆದರೆ ನಂತರ ಆಕೆಯ ಮೊಬೈಲ್ ನೋಡಿದವರು ದಿಘ್ಬ್ರಮೆಯಾಗಿದ್ದಾರೆ. ಆ ಮೊಬೈಲ್ ಇಡೀ ಪ್ರಕರಣಕ್ಕೆ ಸ್ಫೋಟಕ ತಿರುವು ನೀಡಿದೆ.
ಇತ್ತೀಚೆಗೆ ಚಿ.ನಾ.ಹಳ್ಳಿಯ ಸಿದ್ದನಕಟ್ಟೆ ಗ್ರಾಮದಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. 20 ವರ್ಷದ ಅಶ್ವಿನಿ ಹೊಟ್ಟೆ ನೋವಿನಿಂದ ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿತ್ತು. ಆದರೆ ಅದು ಹೊಟ್ಟೆ ನೋವಿನಿಂದ ಸತ್ತಿರುವುದಲ್ಲ, ಅವಳ ಸಾವಿಗೆ ಪ್ರಿಯಕರನೇ ಕಾರಣ ಎನ್ನುವ ಗುಸುಗುಸು ಶುರುವಾಗಿತ್ತು ಗ್ರಾಮದಲ್ಲಿ. ಇತ್ತ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂದುಕೊಂಡಿದ್ದ ಪೋಷಕರ ಕನಸ್ಸು ನುಚ್ಚು ನೂರಾಗಿತ್ತು. ಮಗಳ ಸಾವನ್ನ ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ : ಆಟವಾಡುತ್ತಿದ್ದ ಮಗು ಮೇಲೆ ಬೀದಿನಾಯಿ ಅಟ್ಯಾಕ್
ಮೃತ ಅಶ್ವಿನಿ ದೇವರಾಜು, ನಾಗರತ್ನಮ್ಮ ದಂಪತಿಯ ದ್ವೀತಿಯ ಪುತ್ರಿಯಾಗಿದ್ದು, ತುಮಕೂರಿನಲ್ಲಿ ಪ್ಯಾರ ಮೆಡಿಕಲ್ ಓದುತ್ತಿದ್ದಳು. ಅಶ್ವಿನಿ ಹೊಟ್ಟೆನೋವಿನಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದರು. ಇದೀಗ ಅಶ್ವಿನಿ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಿಯಕರನಿಂದಲೇ ಯುವತಿ ಸಾವನ್ನಪ್ಪಿರುವುದು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗ್ರಾಮಸ್ಥರ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಪ್ರಿಯಕರ ಚೇತನ್ ಹಾಗೂ ಅಶ್ವಿನಿ ನಡೆಸಿರುವ ಫೋನ್ ಕರೆಗಳು, ವಾಟ್ಸಾಪ್ ಚಾಟ್ ಗಳು ಎಲ್ಲಾ ಸತ್ಯಾಂಶಗಳನ್ನ ಬಿಚ್ವಿಟ್ಟಿವೆ. ಪ್ರಿಯಕರ ಚೇತನ್ ಪದೇ ಪದೇ ಅಶ್ವಿನಿಗೆ ಫೋನ್ ಕರೆ ಮಾಡಿ ಹಿಂಸೆ ಕೊಡುತ್ತಿರುವುದು ಪತ್ತೆಯಾಗಿದೆ.
ಅಶ್ವಿನಿ ಪ್ರೀತಿಸುತ್ತಿದ್ದ ಚೇತನ್ ಎಂಬಾತನ ಬಣ್ಣ ಅದ್ಯಾವಾಗ ಬಯಲಾಯ್ತೋ ಅಶ್ವಿನಿ ಕನಸ್ಸು ನುಚ್ಚುನೂರಾಗಿದೆ. ಚೇತನ್ ಮೋಸಕ್ಕೆ ಬಲಿಯಾಗಿದ್ದೇನೆ ಎಂದು ಮನನೊಂದ ಅಶ್ವಿನಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವೇಳೆ ಕೊನೆಯಾದಾಗಿ ಸೆಲ್ಪಿ ಪೋಟೋವನ್ನು ತೆಗೆದುಕೊಂಡಿದ್ದಾಳೆ.
ಇದನ್ನೂ ಓದಿ : ಚಾಮರಾಜನಗರ ಜಿಲ್ಲೆಯಲ್ಲಿ ಶಾಕಿಂಗ್.. ಬ್ಲೇಡ್ ಬೇಲಿ
ಸದ್ಯ ಚೇತನ್ ವಿರುದ್ಧ ಇಡೀ ಕುಟುಂಬ ಗಂಭೀರ ಆರೋಪ ಮಾಡುತ್ತಿದ್ದೆ. ಚೇತನ್ ನಿಂದಲೇ ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಾಟ್ಸಾಪ್ ಮೆಸೆಜ್ ಹಾಗೂ ಆಡಿಯೋ ಮೆಸೆಜ್ ಗಳು ಹೇಳುತ್ತಿವೆ ಎಂದು ಅಶ್ವಿನಿ ಪೋಷಕರು ಆರೋಪಿಸಿದ್ದಾರೆ. ಆದರೆ ಸತ್ಯಾಸತ್ಯಾತೆ ಏನು ಎಂಬುದು ತನಿಖೆಯಿಂದಲೇ ತಿಳಿಯಬೇಕಿದೆ.