)
ಹಾವೇರಿ: ಸಾರ್ವಜನಿಕ ಸ್ಥಳದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಹಾಗೂ ತಹಶಿಲ್ದಾರರೊಂದಿಗೆ ಅಸಭ್ಯವಾಗಿ ವರ್ತಿಸಿದ ಬೈಕ್ ಸವಾರನಿಗೆ ಹಾವೇರಿಯ JMFC ನ್ಯಾಯಾಲಯದಿಂದ ಬಿಸಿ ಪಾಠ ನೀಡಲಾಗಿದೆ. ನಿಯಮ ಉಲ್ಲಂಘನೆಗೂ ಮೆರೆದು, ಅಧಿಕಾರಿಗಳೊಂದಿಗೆ ಗಲಾಟೆ ನಡೆಸಿದ ವ್ಯಕ್ತಿಗೆ 17,000 ರೂ. ದಂಡ ವಿಧಿಸಿ ನ್ಯಾಯಾಲಯ ಮಾದರಿ ತೀರ್ಪು ನೀಡಿದೆ.
ಆ.2 ರಂದು ಈ ಘಟನೆ ನಡೆದಿದೆ. ಬೈಕ್ ಸವಾರ ಶಿವನಗೌಡ್ ಪಾಟೀಲ್, ಟ್ರಾಫಿಕ್ ನಿಯಮ ಉಲ್ಲಂಘಿಸಿ, ದಾಖಲೆಗಳಿಲ್ಲದೆ ವಾಹನ ಓಡಿಸುತ್ತಿದ್ದ ವೇಳೆ ಅವರನ್ನು ತಪಾಸಣೆಗಾಗಿ ತಡೆದ ಟ್ರಾಫಿಕ್ PSI ಶೈಲಾಶ್ರೀ ನೇತೃತ್ವದ ತಂಡದ ಎದುರು ಗಲಾಟೆ ಆರಂಭಿಸಿದ್ದ. ಪ್ರಕರಣ ಸಂಬಂಧ ಕರ್ತವ್ಯ ನಿರತ ASI ಮತ್ತು ಸಿಎವೈ ತಹಶಿಲ್ದಾರರ ಸಮ್ಮುಖದಲ್ಲೇ ಬೈಕ್ ಸವಾರನು ಏಕವಚನದಲ್ಲಿ ಅಸಭ್ಯವಾಗಿ ವರ್ತಿಸಿದ್ದನು.
ಈ ಪ್ರಕರಣದ ನಂತರ, ಪ್ರಕರಣದ ಮಹತ್ವವನ್ನು ಗಮನಿಸಿ, ಪೊಲೀಸರು ಶಿಷ್ಟ ಕ್ರಮ ಕೈಗೊಂಡು ಸವಾರನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಕಾನೂನು ಮತ್ತು ಶಿಸ್ತು ಕಾಪಾಡುವ ಕರ್ತವ್ಯದಲ್ಲಿದ್ದ ಅಧಿಕಾರಿಗಳ ಪ್ರತಿ ತೋರಿದ ತೊಂದರೆ ಮತ್ತು ಅನಾದರಕ್ಕೆ ಪ್ರತಿಯಾಗಿ JMFC ನ್ಯಾಯಾಲಯ 17 ಸಾವಿರ ದಂಡ ವಿಧಿಸಿ, ಸಾರ್ವಜನಿಕರಿಗೆ ಎಚ್ಚರಿಕೆಯಾಗುವಂತೆ ತೀರ್ಪು ನೀಡಿದೆ.