ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಗೆ ಸೇರಿದ 30,000 ಸೀರೆಗಳು ಪತ್ತೆ- ಕಾಂಗ್ರೆಸ್ ಆರೋಪ

ಉಪ ಚುನಾವಣೆ ಹಿನ್ನಲೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ  ಹಂಚಲು ತಂದಿದ್ದ ಸುಮಾರು 30,000 ಸೀರೆಗಳು ಸಿಕ್ಕಿವೆ ಎಂದು ಟ್ವೀಟ್ ಮೂಲಕ ಆರೋಪಿಸಿದೆ. ಈಗ ಪತ್ತೆಯಾಗಿರುವ ಸೀರೆಗಳ ಪ್ಯಾಕ್ ಮೇಲೆ ಸಿ.ಪಿ ಯೋಗೇಶ್ವರ್ ಪೋಟೋ ಇರುವ ಚಿತ್ರಗಳನ್ನು ಮಹಿಳಾ ಕಾಂಗ್ರೆಸ್ ನಾಯಕಿ ಡಾ. ಪುಷ್ಪಾ ಅಮರ್ ನಾಥ್ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ.

Updated: Nov 17, 2019 , 06:46 PM IST
ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಗೆ ಸೇರಿದ 30,000 ಸೀರೆಗಳು ಪತ್ತೆ- ಕಾಂಗ್ರೆಸ್ ಆರೋಪ
Photo courtesy: Twitter

ಬೆಂಗಳೂರು: ಉಪ ಚುನಾವಣೆ ಹಿನ್ನಲೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ  ಹಂಚಲು ತಂದಿದ್ದ ಸುಮಾರು 30,000 ಸೀರೆಗಳು ಸಿಕ್ಕಿವೆ ಎಂದು ಟ್ವೀಟ್ ಮೂಲಕ ಆರೋಪಿಸಿದೆ. ಈಗ ಪತ್ತೆಯಾಗಿರುವ ಸೀರೆಗಳ ಪ್ಯಾಕ್ ಮೇಲೆ ಸಿ.ಪಿ ಯೋಗೇಶ್ವರ್ ಪೋಟೋ ಇರುವ ಚಿತ್ರಗಳನ್ನು ಮಹಿಳಾ ಕಾಂಗ್ರೆಸ್ ನಾಯಕಿ ಡಾ. ಪುಷ್ಪಾ ಅಮರ್ ನಾಥ್ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಈಗ ಕಾಂಗ್ರೆಸ್ ಪಕ್ಷ ತನ್ನ ಟ್ವೀಟ್ ನಲ್ಲಿ 'ಹುಣಸೂರು ಕ್ಷೇತ್ರದಲ್ಲಿ ಹಂಚಲು ಇಟ್ಟಿದ್ದ 30,000 ಸೀರೆಗಳು ಸಿಕ್ಕಿವೆ. ಸೀರೆಯ ಪ್ಯಾಕ್ ಗಳ ಮೇಲೆ ಸಿ.ಪಿ ಯೋಗೇಶ್ವರ್ ಭಾವಚಿತ್ರವಿದೆ.ಬಿಜೆಪಿ ಸೀರೆ ಹಂಚುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಇಂತಹ ಕೆಲಸ ಮಾಡಿದೆ.ಚುನಾವಣಾ ಆಯೋಗ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಬೇಕು ಎಂದು ಆಗ್ರಹಿಸಿದೆ.

ಇನ್ನೊಂದು ಟ್ವೀಟ್ ನಲ್ಲಿ 'ಪಾರದರ್ಶಕ ಚುನಾವಣೆ ನಡೆಸುತ್ತೇವೆ ಎಂದು ಚುನಾವಣಾ ಅಯೋಗ ಹೇಳುತ್ತದೆ.ಈ ಕಾರಣಕ್ಕಾಗಿ ಆಯೋಗ ನ್ಯಾಯವಾದ ಕ್ರಮಗೊಳ್ಳುವ ವಿಶ್ವಾಸವಿದೆ' ಎಂದು ಟ್ವೀಟ್ ಮಾಡಿದೆ. ಈ ಕ್ಷೇತ್ರದಿಂದ ಬಿಜೆಪಿಯಿಂದ ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರು ಕಣಕ್ಕೆ ಇಳಿದಿದ್ದರೆ, ಕಾಂಗ್ರೆಸ್ ಪಕ್ಷದಿಂದ ಎಚ್. ಪಿ ಮಂಜುನಾಥ್, ಅದೇ ರೀತಿಯಾಗಿ ಜೆಡಿಎಸ್ ಪಕ್ಷದಿಂದ  ಸೋಮಶೇಖರ್ ಸ್ಪರ್ಧಿಸಲಿದ್ದಾರೆ.