ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, 12 ವಲಸಿಗರಿಗೆ ಮೊದಲ ಪಟ್ಟಿಯಲ್ಲೇ ಟಿಕೆಟ್ ಘೋಷಣೆ ಮಾಡಿದೆ.
ಜೆಡಿಎಸ್ ಪಕ್ಷದಿಂದ ವಲಸೆ ಬಂದಿರುವ ಡಾ.ಶಿವರಾಜ ಪಾಟಿಲ್'ಗೆ ರಾಯಚೂರು ಕ್ಷೇತ್ರದಿಂದ, ಮಾನಪ್ಪ ವಜ್ಜಲ್'ಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಲಿಂಗಸೂರು ಕ್ಷೇತ್ರದಿಂದ, ಮಲ್ಲಿಕಾರ್ಜುನ ಖುಬಾ'ಗೆ ಬಸವಕಲ್ಯಾಣದಿಂದ, ಸುಭಾಶ್ ಗುತ್ತೇದಾರ್'ಗೆ ಅಳಂದ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಅಲ್ಲದೆ, ಕಾಂಗ್ರೆಸ್ ತೋರದು ಇತ್ತೀಚೆಗಷ್ಟೇ ಪಕ್ಷ ಸೇರಿದ್ದ ಮಾಲೀಕಯ್ಯ ಗುತ್ತೇದಾರ್'ಗೆ ಅಫ್ಜಲ್ಪುರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಉಳಿದಂತೆ ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಗೆದ್ದಿದ್ದ ಸಿ.ಪಿ.ಯೋಗಿಶ್ವರ್ ಅವರಿಗೆ ಚನ್ನಪಟ್ಟಣ ಕ್ಷೇತ್ರದಿಂದ ಹಾಗೂ ಬಿಎಸ್ಆರ್ ಪಕ್ಷದಿಂದ ಹೆದ್ದಿದ್ದ ಪಿ.ರಾಜೀವ ಗೆ ಕುಡಚಿ ಕ್ಷೇತ್ರದಿಂದ ಮತ್ತು ಕಂಪ್ಲಿ ಕ್ಷೇತ್ರದಿಂದ ಟಿ.ಹೆಚ್.ಸುರೇಶ ಬಾಬುಗೆ ಟಿಕೆಟ್ ನೀಡಲಾಗಿದೆ. ಅಲ್ಲದೆ, ಪಕ್ಷೇತರರಾಗಿ ಗೆದ್ದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಕುಂದಾಪುರದಿಂದ ಟಿಕೆಟ್ ನೀಡಲಾಗಿದೆ.
ಬಿಜೆಪಿ ಮೊದಲ ಪಟ್ಟಿಯಲ್ಲೇ ಮೂವರು ನಾಯಕರಿಗೆ ಟಿಕೆಟ್
ಇನ್ನೂ ರಾಯಚೂರು ಕ್ಷೇತ್ರದಲ್ಲಿ 12 ಮಂದಿ ಮೂಲ ಬಿಜೆಪಿಗರು ಟಿಕೆಟ್ ಆಕಾಂಕ್ಷಿಗಳಾಗಿದ್ದರೂ ಜೆಡಿಎಸ್ ನಿಂದ ಬಿಜೆಪಿ ಸೇರಿರುವ ಡಾ.ಶಿವರಾಜ ಪಾಟೀಲ್ ಅವರಿಗೆ ಟಿಕೆಟ್ ನೀಡಿರುವುದು ಈ ಕ್ಷೇತ್ರದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಅಷ್ಟೇ ಅಲ್ಲದೆ, ಈ ಹಿಂದೆ ಶಿವರಾಜ ಪಾಟೀಲ್'ಗೆ ಟಿಕೆಟ್ ನೀಡದಂತೆ ಮೂಲ ಬಿಜೆಪಿಗರು ಹೈಕಮಾಂಡ್'ಗೆ ಮನವಿ ಮಾಡಿದ್ದರೂ ಸಹ ಟಿಕೆಟ್ ನೀಡಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.