ಬಿಜೆಪಿ ಸರ್ಕಾರ ಇರೋದು 6 ತಿಂಗಳು ಮಾತ್ರ: ಜಮೀರ್ ಖಾನ್

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 6 ತಿಂಗಳ ಬಳಿಕ ಪತನವಾಗುತ್ತೆ ಎಂಡ್ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. 

Updated: Sep 25, 2019 , 04:32 PM IST
ಬಿಜೆಪಿ ಸರ್ಕಾರ ಇರೋದು 6 ತಿಂಗಳು ಮಾತ್ರ: ಜಮೀರ್ ಖಾನ್

ಬಾಗಲಕೋಟೆ: ರಾಜ್ಯದಲ್ಲಿ ಮುಂದಿನ 6 ತಿಂಗಳು ಮಾತ್ರ ಬಿಜೆಪಿ ಸರ್ಕಾರ ಆಡಳಿತ ನಡೆಸಲಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಭವಿಷ್ಯ ನುಡಿದಿದ್ದಾರೆ. 

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 6 ತಿಂಗಳ ಬಳಿಕ ಪತನವಾಗುತ್ತೆ. ಯಡಿಯೂರಪ್ಪ ಹಿಟ್ಲರ್ ರೀತಿ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ 40ಕ್ಕೂ ಹೆಚ್ಚು ಶಾಸಕರಲ್ಲಿ ಅಸಮಾಧಾನವಿದೆ ಎಂದು ಹೇಳಿದರು.

ವಿಧಾನಸಭೆ ಉಪಚುನಾವಣೆ ಅಕ್ಟೋಬರ್ 24ರಂದು ನಡೆಯಲಿದ್ದು, ನಾವು 14 ರಿಂದ 15 ಸ್ಥಾನಗಳನ್ನು ಗೆಲ್ಲುತ್ತೇವೆ. ಇನ್ನು ಬಿಜೆಪಿಯವರು ತಮ್ಮ ಸರ್ಕಾರ ಉಳಿಸಿಕೊಳ್ಳಲು ಗೆಲ್ಲಬೇಕಷ್ಟೇ. ಈಗಾಗಲೇ ಮುಖ್ಯಮಂತ್ರಿ ವಿಚಾರವಾಗಿ ಸಾಕಷ್ಟು ಅಸಮಾಧಾನ ಭುಗಿಲೆದ್ದಿದೆ. ಮುಖ್ಯಮಂತ್ರಿ ನಾನಾಗ್ಬೇಕು, ನೀನಾಗ್ಬೇಕು ಅನ್ನೋ ಕಚ್ಚಾಟದಲ್ಲಿ ಬಿಜೆಪಿ ಫಿಶ್ ಮಾರ್ಕೆಟ್ ಆಗಿದೆ ಎಂದು ಜಮೀರ್ ಖಾನ್ ಟೀಕಿಸಿದರು.