ರಾಜ್ಯ ಉಪಚುನಾವಣೆ: 13 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಬಿಜೆಪಿ ಕೇಂದ್ರ ಸಮಿತಿ ಮುಂಬರುವ ಡಿಸೆಂಬರ್ 5 ರ ಕರ್ನಾಟಕದ ಉಪಚುನಾವಣೆಗೆ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಶಿವಾಜಿನಗರ ಕ್ಷೇತ್ರದಲ್ಲಿ ರೋಷನ್ ಬೇಗ್ ವಿಚಾರವಾಗಿ ಬಿಜೆಪಿ ಮೌನ ನಿಲುವು ತಾಳಿದೆ. 

Updated: Nov 14, 2019 , 04:00 PM IST
 ರಾಜ್ಯ ಉಪಚುನಾವಣೆ: 13 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
Photo courtesy: Twitter

ನವದೆಹಲಿ: ಬಿಜೆಪಿ ಕೇಂದ್ರ ಸಮಿತಿ ಮುಂಬರುವ ಡಿಸೆಂಬರ್ 5 ರ ಕರ್ನಾಟಕದ ಉಪಚುನಾವಣೆಗೆ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಶಿವಾಜಿನಗರ ಕ್ಷೇತ್ರದಲ್ಲಿ ರೋಷನ್ ಬೇಗ್ ವಿಚಾರವಾಗಿ ಬಿಜೆಪಿ ಮೌನ ನಿಲುವು ತಾಳಿದೆ. 

ಇಂದು ಸಿಎಂ ಯಡಿಯೂರಪ್ಪನವರು ರೋಷನ್ ಬೇಗ್ ಅವರನ್ನು ಹೊರತುಪಡಿಸಿ ಉಳಿದ 16 ಅನರ್ಹ ಶಾಸಕರನ್ನು ಬಿಜೆಪಿಗೆ ಬರಮಾಡಿಕೊಂಡಿದ್ದರು. ಈಗ ರಾಣೆಬೆನ್ನೂರು ಕ್ಷೇತ್ರದಲ್ಲಿ ಇನ್ನೂ ಟಿಕೆಟ್ ಘೋಷಣೆ ಮಾಡಬೇಕಾಗಿದೆ.ಈ ಕ್ಷೇತ್ರಕ್ಕೆ ಆರ್.ಶಂಕರ್ ಅವರು ಆಕಾಂಕ್ಷಿಗಳಾಗಿದ್ದಾರೆ.

ಉಪ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ: 

1) ಎಚ್. ವಿಶ್ವನಾಥ್(ಹುಣಸೂರು), 
2) ಮಹೇಶ್ ಕುಮಟಳ್ಳಿ(ಅಥಣಿ), 
3) ರಮೇಶ್ ಜಾರಕಿಹೊಳಿ(ಗೋಕಾಕ್), 
4) ಬಿ.ಸಿ.ಪಾಟೀಲ್(ಹಿರೇಕೆರೂರು), 
5) ಶಿವರಾಂ ಹೆಬ್ಬಾರ್(ಯಲ್ಲಾಪುರ), 
6) ಆನಂದ್ ಸಿಂಗ್(ವಿಜಯನಗರ), 
7) ಕೆ.ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), 
8) ಬೈರತಿ ಬಸವರಾಜ(ಕೆ.ಆರ್.ಪುರ), 
9) ಎಂ.ಟಿ.ಬಿ ನಾಗರಾಜ್(ಹೊಸಕೋಟೆ), 
10) ಕೆ.ಸಿ.ನಾರಾಯಣ ಗೌಡ(ಕೆ.ಆರ್.ಪೇಟೆ), 
11) ಶ್ರೀಮಂತ ಪಾಟೀಲ(ಕಾಗಾವಾಡ), 
12) ಡಾ.ಸುಧಾಕರ್ ಕೆ(ಚಿಕ್ಕಬಳ್ಳಾಪುರ) 
13) ಎಸ್ ಟಿ ಸೋಮಶೇಖರ್(ಯಶವಂತಪುರ)