ರಾಜಧಾನಿ ಬೆಂಗಳೂರು ಜನರಿಗೆ ಶಾಕ್ ಮೇಲೆ ಶಾಕ್! ಯುಗಾದಿ ಹಬ್ಬಕ್ಕೆ ಬಸ್ ದರ ಏರಿಕೆ!

Bus Fare Hike: ಈ ಸಲ ಶನಿವಾರ ಯುಗಾದಿ ಹಬ್ಬ, ಭಾನುವಾರ ಹೊಸ್ತಡ್ಕು, ಸೋಮವಾರ ರಂಜಾನ್ ಹಬ್ಬ ಇರುವುದರಿಂದ ಹಿಂದೂ ಮುಸ್ಲಿಂ ಬಾಂಧವರೆಲ್ಲರೂ ಊರಿಗೆ ಹೋಗಬೇಕಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಒನ್ ಟು ತ್ರಿಬಲ್ ದರ ಏರಿಕೆ ಮಾಡಿ ವಸೂಲಿ ದಂಧೆ ಶುರು ಮಾಡಿಕೊಂಡಿದ್ದಾರೆ.

Written by - Yashaswini V | Last Updated : Mar 25, 2025, 01:47 PM IST
  • ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಖಾಸಗಿ ಬಸ್‌ಗಳಿಂದ ಶಾಕ್..!!
  • ಎರಡ್ಮೂರು ಪಟ್ಟು ದರ ಏರಿಕೆ ಮಾಡಿ, ಜನರಿಂದ ದುಪ್ಪಟ್ಟು ದರ ವಸೂಲಿ..!!
  • ಒನ್ ಟು ತ್ರಿಬಲ್ ದರ ಏರಿಕೆ ಮಾಡಿ ಮತ್ತದೇ ವಸೂಲಿ ದಂದೆ ಶುರು
ರಾಜಧಾನಿ ಬೆಂಗಳೂರು ಜನರಿಗೆ ಶಾಕ್ ಮೇಲೆ ಶಾಕ್! ಯುಗಾದಿ ಹಬ್ಬಕ್ಕೆ ಬಸ್ ದರ ಏರಿಕೆ!

Bangalore News Today: ಬೆಂಗಳೂರಿನಿಂದ ಯುಗಾದಿ ಹಬ್ಬಕ್ಕೆ ಊರಿಗೆ ಹೋಗಬೇಕಂದುಕೊಂಡವರಿಗೆ ಬೇವು ಬೆಲ್ಲದ ಹಬ್ಬ ಯುಗಾದಿಗೂ ಮುನ್ನವೇ ಕಹಿ ಅನುಭವ ಆಗಲಿದೆ. ಹಬ್ಬ ಆಚರಿಸಬೇಕು ಎಂದುಕೊಂಡು ಬೆಂಗಳೂರಿಂದ ಊರಿಗೆ ಹೋಗುವವರಿಗೆ ಖಾಸಗಿ ಬಸ್ ಗಳು ಶಾಕ್ ನೀಡಲು ಮುಂದಾಗಿವೆ. ಅದೂ ಎರಡರಿಂದ ಮೂರು ಪಟ್ಟು ದರ ಏರಿಕೆ ಮಾಡಿ, ಜನರಿಂದ ಹಣ ವಸೂಲಿ ಮಾಡಲು ಮುಂದಾಗಿವೆ. ಈ ಬಾರಿ ನಿಜಕ್ಕೂ ಹಬ್ಬ ಆಚರಿಸುತ್ತಿರುವುದು ಖಾಸಗಿ ಬಸ್ ಮಾಲೀಕರು.  ಸಾಲು-ಸಾಲು ರಜೆ ಬಂತು ಅಂದರೆ ಅವರಿಗೆ ಅಕ್ಷರಶಃ ಹಬ್ಬವೇ. 

Add Zee News as a Preferred Source

ಈಗ ಯುಗಾದಿ ಹಬ್ಬಕ್ಕೆ ಮೂರು ಮೂರು ದಿನ ರಜೆ ಸಿಗುತ್ತೆ. ಹಾಗಾಗಿ ಸಿಲಿಕಾನ್ ಸಿಟಿಯ ಜನ ಹಬ್ಬ ಮಾಡಲು ಅವರ ಊರಿಗೆ ಹೋಗಲೇ ಬೇಕು. ಈ ಸಂದರ್ಭವನ್ನು ಬಳಸಿಕೊಂಡು ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ಏರಿಕೆ ಮಾಡಿದ್ದಾರೆ. ಅದೂ ಎರಡರಿಂದ ಮೂರು ಪಟ್ಟು ಎಂದು ತಿಳಿದುಬಂದಿದೆ.

ಇದನ್ನೂ ಓದಿ- ಹಾಲಿನ ದರ ಏರಿಕೆ ಫಿಕ್ಸ್: ಪ್ರತಿ ಲೀ.ಗೆ ಎರಡು ರೂ. ದರ ಏರಿಕೆ ಬಹುತೇಕ ಖಚಿತ

ಯುಗಾದಿ ಹಬ್ಬ ಮಾತ್ರವಲ್ಲ, ಗೌರಿ- ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ ಹೀಗೆ ಹಬ್ಬಗಳ ಸೀಜನ್ ಬಂತು ಅಂದರೆ ಸಾಕು ಖಾಸಗಿ ಬಸ್ ಮಾಲೀಕರು ಮತ್ತೆ ಅದೇ ಚಾಳಿ ಮುಂದುವರೆಸುತ್ತಾರೆ. ಬಸ್ ಪ್ರಯಾಣ ದರಗಳನ್ನು ಮನಸೋ ಇಚ್ಛೆ ಏರಿಕೆ ಮಾಡಿಬಿಡುತ್ತಾರೆ.

ಈ ಸಲ ಶನಿವಾರ ಯುಗಾದಿ ಹಬ್ಬ, ಭಾನುವಾರ ಹೊಸ್ತಡ್ಕು, ಸೋಮವಾರ ರಂಜಾನ್ ಹಬ್ಬ ಇರುವುದರಿಂದ ಹಿಂದೂ ಮುಸ್ಲಿಂ ಬಾಂಧವರೆಲ್ಲರೂ ಊರಿಗೆ ಹೋಗಬೇಕಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಒನ್ ಟು ತ್ರಿಬಲ್ ದರ ಏರಿಕೆ ಮಾಡಿ ವಸೂಲಿ ದಂಧೆ ಶುರು ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ- ಬುರ್ಖಾ ವೀಡಿಯೋ ವೈರಲ್ ಕೇಸ್: ಎರಡು ತನಿಖಾ ತಂಡ ರಚನೆ

ಯಾವ್ಯಾವ ಊರಿಗೆ ಎಷ್ಟೆಷ್ಟು ಪ್ರಯಾಣ ದರ ನಿಗದಿಯಾಗಿದೆ ಎನ್ನುವ ಮಾಹಿತಿಗಳು ಈ ಕೆಳಗಿನಂತೆ ಇವೆ. 
ಬೆಂಗಳೂರು-ದಾವಣಗೆರೆ 

ಪ್ರಸ್ತುತ ದರ=450-1300ರೂ. 
ಹಬ್ಬದ ದರ=750-5500ರೂ. 

ಬೆಂಗಳೂರು-ಧಾರವಾಡ 
ಪ್ರಸ್ತುತ ದರ = 600-1100ರೂ. 
ಹಬ್ಬದ ದರ =1069-5500ರೂ. 

ಬೆಂಗಳೂರು- ಹುಬ್ಬಳ್ಳಿ 
ಪ್ರಸ್ತುತ ದರ=475-1100ರೂ. 
ಹಬ್ಬದ ದರ=1200-4200ರೂ. 

ಬೆಂಗಳೂರು-ಬೆಳಗಾವಿ 
ಪ್ರಸ್ತುತ ದರ=389-1200ರೂ. 
ಹಬ್ಬದ ದರ=1129-5500ರೂ. 

ಬೆಂಗಳೂರು-ಮಂಗಳೂರು 
ಪ್ರಸ್ತುತ ದರ=650-1300ರೂ. 
ಹಬ್ಬದ ದರ=1200-4500ರೂ. 

ಬೆಂಗಳೂರು-ಕಲ್ಬುರ್ಗಿ 
ಪ್ರಸ್ತುತ ದರ=750-1000ರೂ. 
ಹಬ್ಬದ ದರ=1200-2200ರೂ. 

ಬೆಂಗಳೂರು-ರಾಯಚೂರು
 ಪ್ರಸ್ತುತ ದರ=650-990ರೂ. 
ಹಬ್ಬದ ದರ=1100-2990ರೂ. 

ಬೆಂಗಳೂರು-ಹಾಸನ 
ಪ್ರಸ್ತುತ ದರ=463-1000ರೂ. 
ಹಬ್ಬದ ದರ=750-1600ರೂ. 

ಬೆಂಗಳೂರು-ಯಾದಗಿರಿ 
ಪ್ರಸ್ತುತ ದರ=699-900ರೂ. 
ಹಬ್ಬದ ದರ=1300-2200ರೂ. 

ಬೆಂಗಳೂರು-ಶಿವಮೊಗ್ಗ 
ಪ್ರಸ್ತುತ ದರ =500-990ರೂ. 
ಹಬ್ಬದ ದರ =1199-1800ರೂ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News