ನಿಶ್ಚಿತಾರ್ಥ ಮುಗಿಸಿ ವಾಪಾಸ್ ಆಗುವಾಗ ಬಸ್ ಪಲ್ಟಿ: ಓರ್ವ ಸಾವು, 30 ಮಂದಿಗೆ ಗಾಯ

Accident: ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ನವೀನ್(38) ಎಂಬಾತ ಮೃತಪಟ್ಟ ವ್ಯಕ್ತಿ. ಶಾಗ್ಯ ಗ್ರಾಮದ ಜನರು ನಿಶ್ಚಿತಾರ್ಥ ಕಾರ್ಯಕ್ರಮದ ನಿಮಿತ್ತ ಶಾಗ್ಯ ಗ್ರಾಮದಿಂದ ಖಾಸಗಿ ಬಸ್ ನಲ್ಲಿ  ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಳ್ಳಿಯೊಂದಕ್ಕೆ ತೆರಳಿದ್ದರು. 

Written by - Yashaswini V | Last Updated : Mar 10, 2025, 02:29 PM IST
  • ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿ ಬರುತ್ತಿದ್ದ ಬಸ್ ಪಲ್ಟಿ.
  • ಓರ್ವ ಸ್ಥಳದಲ್ಲೇ ಸಾವು, 30 ಜನರಿಗೆ ಗಾಯ.
  • ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಬಂಡಳ್ಳಿ ಮಾರ್ಗಮಧ್ಯ ಘಟನೆ.
ನಿಶ್ಚಿತಾರ್ಥ ಮುಗಿಸಿ ವಾಪಾಸ್ ಆಗುವಾಗ ಬಸ್ ಪಲ್ಟಿ: ಓರ್ವ ಸಾವು, 30 ಮಂದಿಗೆ ಗಾಯ

ಚಾಮರಾಜನಗರ:  ಹನೂರು ತಾಲೂಕಿನ  ಬಂಡಳ್ಳಿ  ಹೊರವಲಯದ ತೆಳ್ಳನೂರು ರಸ್ತೆಯಲ್ಲಿ  ಚಾಲಕನ ನಿಯಂತ್ರಣ ತಪ್ಪಿದ  ಖಾಸಗಿ ಬಸ್ ವೊಂದು ಉರುಳಿ ಬಿದ್ದು ಬಸ್ ಕ್ಲೀನರ್ ಸ್ಥಳದಲ್ಲಿ ಸಾವನ್ನಪ್ಪಿ 30ಕ್ಕೂ  ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.

Add Zee News as a Preferred Source

ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ನವೀನ್(38) ಎಂಬಾತ ಮೃತಪಟ್ಟ ವ್ಯಕ್ತಿ. ಶಾಗ್ಯ ಗ್ರಾಮದ ಜನರು ನಿಶ್ಚಿತಾರ್ಥ ಕಾರ್ಯಕ್ರಮದ ನಿಮಿತ್ತ ಶಾಗ್ಯ ಗ್ರಾಮದಿಂದ ಖಾಸಗಿ ಬಸ್ ನಲ್ಲಿ  ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಳ್ಳಿಯೊಂದಕ್ಕೆ ತೆರಳಿದ್ದರು. ನಂತರ ಕಾರ್ಯಕ್ರಮವನ್ನು ಮುಗಿಸಿಕೊಂಡು ಶಾಗ್ಯ ಗ್ರಾಮಕ್ಕೆ ಹಿಂತಿರುಗಿ ಬರುವಾಗ ಬಂಡಳ್ಳಿ ತೆಳ್ಳನೂರು ಮಾರ್ಗದ  ಕಾಯಿ ಒಡೆಯುವ ಕಲ್ಲಿನ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿ ಬಸ್ ಕ್ಲೀನರ್  ಬಸ್ಸಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ.

ಇದನ್ನೂ ಓದಿ- Karnataka Rain Update: ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಗುಡ್ ನ್ಯೂಸ್, ನಾಳೆಯಿಂದ ಪೂರ್ವ ಮುಂಗಾರು ಆಗಮನ... ಈ ಜಿಲ್ಲೆಗಳಲ್ಲಿ ಭಾರೀ ಮಳೆ 

ಬಸ್ಸಿನಲ್ಲಿದ್ದ ಸುಮಾರು 30ಕ್ಕೂ ಹೆಚ್ಚು ಜನರಿಗೆ ಕೈಕಾಲುಗಳಿಗೆ ಗಾಯಗಳಾಗಿದೆ.  ಮಾಹಿತಿ ಅರಿತ ಸಮೀಪದ ಗ್ರಾಮಸ್ಥರು  ಆಗಮಿಸಿ, ಬಸ್ಸಿನಲ್ಲಿದ್ದ ಜನರನ್ನು ಖಾಸಗಿ ವಾಹನಗಳ ಮೂಲಕ  ಹನೂರು, ಕಾಮಗೆರೆ, ಕೊಳ್ಳೇಗಾಲ  ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ. 

ಇದನ್ನೂ ಓದಿ- ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಜಗಳದಲ್ಲಿ ತಲೆ ಹಾಕದಿರಲು ಆರೆಸೆಸ್ಸ್ ನಿರ್ಧಾರ..! 

ಬಳಿಕ ಸ್ಥಳಕ್ಕೆ ಆಗಮಿಸಿದ ಹನೂರು ಹಾಗೂ ಕೊಳ್ಳೇಗಾಲ ಪೊಲೀಸರು ಮೃತ ದೇಹವನ್ನು ಜೆಸಿಬಿ ಮುಖಾಂತರ ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News