ಕೇಂದ್ರದಿಂದ ಪೂರೈಕೆ ಮಾಡಿರುವ ಯೂರಿಯಾ ರಸಗೊಬ್ಬರವನ್ನ ಕಾಳಸಂತೆಯಲ್ಲಿ ಮಾರಾಟ: ಬಿ ವೈ ವಿಜಯೇಂದ್ರ

BJP protest in Tumkur: ರಾಜ್ಯದಲ್ಲಿ ಮುಂಗಾರು ಮಳೆ ಹದವಾಗಿ ಬಿದ್ದಿದ್ದು ಮುಂಗಾರು ಕೃಷಿ ಚಟುವಟಿಕೆ ಬರದಿಂದ ಸಾಗಿದೆ. ಮುಂಗಾರು ಬಿತ್ತನೆಗೆ ರಸ ಗೊಬ್ಬರ ಸಿಗದೆ ರೈತರು ಪರದಾಡ್ತಿದ್ದಾರೆ. ಇದನ್ನೆ ರಾಜಕೀಯವಾಗಿ ಬಳಸಿಕೊಳ್ತಿರುವ ಬಿಜೆಪಿ ರೈತರ ಪರವಾಗಿ ನಿಂತು ರಾಜ್ಯ ಸರ್ಕಾರದ ವಿರುದ್ದ ಹೋರಾಟಕ್ಕಿಳಿದಿದೆ..

Written by - Chetana Devarmani | Last Updated : Jul 29, 2025, 11:21 PM IST
  • ತುಮಕೂರಿನಲ್ಲಿ ಬಿಜೆಪಿ ಪ್ರತಿಭಟನೆ
  • ರಸಗೊಬ್ಬರವನ್ನ ಕಾಳಸಂತೆಯಲ್ಲಿ ಮಾರಾಟ
  • ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಕೇಂದ್ರದಿಂದ ಪೂರೈಕೆ ಮಾಡಿರುವ ಯೂರಿಯಾ ರಸಗೊಬ್ಬರವನ್ನ ಕಾಳಸಂತೆಯಲ್ಲಿ ಮಾರಾಟ: ಬಿ ವೈ ವಿಜಯೇಂದ್ರ

ತುಮಕೂರು: ರಾಜ್ಯದಲ್ಲಿ ಕೆಲವೆಡೆ ರಸಗೊಬ್ಬರ ಯೂರಿಯಾ ಕೊರತೆಯಿಂದ ರೈತರು ಪರದಾಡ್ತಿದ್ದಾರೆ. ಕೇಂದ್ರದಿಂದ ಪೂರೈಕೆ ಮಾಡಿರುವ ಯೂರಿಯಾ ರಸಗೊಬ್ಬರವನ್ನ ಕಾಳಸಂತೆಯಲ್ಲಿ ಮಾರಾಟ ಮಾಡಿಕೊಂಡಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ದ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ. ಇತ್ತ ಕಾಂಗ್ರೇಸ್ ಸರ್ಕಾರ ಕೇಂದ್ರದಿಂದ ಗೊಬ್ಬರ ಪೂರೈಕೆ ಆಗಿಲ್ಲ ಎನ್ನುತ್ತಿದೆ ಸದ್ಯ ರಾಜ್ಯದಲ್ಲಿ ಗೊಬ್ಬರದ ಪಾಲಿಟಿಕ್ಸ್ ಜೋರಾಗಿದೆ..

Add Zee News as a Preferred Source

ರಾಜ್ಯದಲ್ಲಿ ರಸಗೊಬ್ಬರ ಯೂರಿಯಾ ಕೊರತೆ ವಿರೋಧಿಸಿ ಇಂದು ತುಮಕೂರಿನಲ್ಲಿ ಬಿಜೆಪಿ ವತಿಯಿಂದ ರಾಜ್ಯಾದ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು. ನಗರದ ಟೌನ್ ಹಾಲ್ ವೃತ್ತದಿಂದ ಎತ್ತಿನ ಬಂಡಿ ಏರಿದ ಬಿ ವೈ ವಿಜಯೇಂದ್ರ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೂಲಕ ಮೆರವಣಿ ನಡೆಸಿದ್ರು. 

ವಿಜಯೇಂದ್ರ ಜೊತೆಯಲ್ಲಿ ಜಿಲ್ಲೆಯ ಶಾಸಕರಾದ ಸುರೇಶ್ ಗೌಡ, ಜ್ಯೋತಿಗಣೇಶ್, ಚಿದಾನಂದ್ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದ್ರು. ಪ್ರತಿಭಟನೆಯಲ್ಲಿ ರೈತರು, ಬಿಜೆಪಿ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಿದ್ರು ಇದೇ ವೇಳೆ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಕೃಷಿ ಸಚಿವ ಚೆಲುವರಾಯ ಸ್ವಾಮಿ ವಿರುದ್ದ ವಿಜಯೇಂದ್ರ ಹರಿಹಾಯ್ದು ಕೇಂದ್ರ ಸರ್ಕಾರ ನೀಡಿರುವ ರಸಗೊಬ್ಬರ ವನ್ನ ರಾಜ್ಯ ಸರ್ಕಾರ ಕಾಳಸಂತೆಯಲ್ಲಿ ಮಾರಿಕೊಂಡು ರಸಗೊಬ್ಬರ ಅಭಾವ ಸೃಷ್ಟಿಸಿದೆ ಎಂದು ಕಿಡಿಕಾರಿದ್ರು.

ಇದನ್ನೂ ಓದಿ:ಇಂದಿನಿಂದ ಫ್ರೀಡಂ ಪಾರ್ಕ್‌ನಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಇನ್ನೂ ರಾಜ್ಯದಲ್ಲಿ ರೈತರಿಗೆ ರಸಗಿಬ್ಬರ ಸಿಗದೇ ಸಮಸ್ಯೆ ಸಿಲುಕಿದ್ದಾರೆ ಕಾಂಗ್ರೇಸ್ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಕಿತ್ತಾಡ್ತಿದ್ದಾರೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ತಮ್ಮ ಸ್ಥಾನವನ್ನ ಉಳಿಸಿಕೊಳ್ಳಲು ತಿಂಗಳಿಗೆ ನಾಲ್ಕು ಬಾರಿ ದೆಹಲಿ ಗೆ‌ ಹೋಗಿ ಸೋನಿಯಾ ಗಾಂಧಿ ಮನೆ ಭಾಗಿಲು ಕಾಯ್ತಿದ್ದಾರೆ, ಇತ್ತ ಕೃಷಿ ಸಚಿವರು ರೈತರ ಬಗ್ಗೆ  ಬೆಂಗಳೂರಿನಲ್ಲಿ ಕುಳಿತು ಮೋಜು ಮಸ್ತಿ ಮಾಡ್ತಿದ್ದಾರೆ ಎಂದು ಗುಡುಗಿದ್ರು.

ಒಟ್ಟಾರೆ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಮುಂಗಾರು ಬಿತ್ತನೆಗೆ ಗೊಬ್ಬರ ಸಿಗದೇ ರೈತರ ಪರಾದಾಡ್ತಿದ್ದಾರೆ. ಕೇಂದ್ರ ಸರ್ಕಾರ ರಸ ಗೊಬ್ಬರ ಪೂರೈಕೆ ಮಾಡಿದೆ ಆದ್ರೆ, ರಾಜ್ಯ ಸರ್ಕಾರ ಕೇಂದ್ರದಿಂದ ರಾಜ್ಯಕ್ಕೆ ರಸಗೊಬ್ಬರ ಯೂರಿಯಾ ಬಂದಿಲ್ಲ ಎನ್ನುತ್ತಿದ್ದಾರೆ. ಇಬ್ಬರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ  ರೈತರ ಸಮಸ್ಯೆ ಬಗೆ ಹರಿಸಬೇಕಾದ  ಸರ್ಕಾರ ಹಾಗೂ ವಿಪಕ್ಷಗಳು ರಾಜಕೀಯ ಕೆಸರೆಚಾಟದಲ್ಲಿ ಮುಳಗಿವೆ.

ಇದನ್ನೂ ಓದಿ:ಈ ದಿನದಂದು ಬರಲಿದೆ ಗೃಹಲಕ್ಷ್ಮಿ ಯೋಜನೆಯ 4000 ರೂ. ಪೆಂಡಿಂಗ್ ಹಣ! ಡೇಟ್‌ ನೋಡಿಕೊಂಡು ಖಾತೆ ಚೆಕ್‌ ಮಾಡಿ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News