)
ಬೆಂಗಳೂರು: ಡ್ರಗ್ ವಿರುದ್ಧದ ಸಮರವನ್ನು ಸಿಸಿಬಿ ಪೊಲೀಸರು ಮುಂದುವರೆಸಿದ್ದಾರೆ.ಕೋಟ್ಯಾಂತರ ಮೌಲ್ಯದ ಮಾದಕ ವಸ್ತು ಸೀಜ್ ಮಾಡಿ ಇಬ್ಬರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.ಈ ಬಗೆಗಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಯೆಸ್ ಸಿಲಿಕಾನ್ ವ್ಯಾಲಿ ಬೆಂಗಳೂರಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಇಬ್ಬರನ್ನ ಬಂಧಿಸಿರುವ ಸಿಸಿಬಿ ಪೊಲೀಸರು 1.47 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದುಕೊಂಡಿದ್ದಾರೆ.ದೆಹಲಿಯಿಂದ ಎಂಡಿಎಂಎ ತರಿಸಿಕೊಂಡು ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾದ ಡುರೊ ಮಿಶೆಲ್ ಹಾಗೂ ಇಬು ಸ್ಯಾಮುಯೆಲ್ ಬಂಧಿತರಾಗಿದ್ದು, ಬಿಸೆನೆಸ್ ವೀಸಾದಡಿ 2017ರಲ್ಲಿ ಭಾರತಕ್ಕೆ ಬಂದಿದ್ದರು ಎನ್ನಲಾಗಿದೆ.
ನಗರದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದುಕೊಂಡು ಆರಂಭದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು.ತಮಿಳುನಾಡಿನಿಂದ ಬಟ್ಟೆ ಖರೀದಿಸಿ ನೈಜೀರಿಯಾಗೆ ರಪ್ತು ಮಾಡುತ್ತಿದ್ದರು.ನಂತರ ಸುಲಭವಾಗಿ ಹಣ ಸಂಪಾದನೆ ಮಾಡಲು ಅಡ್ಡ ದಾರಿ ಹಿಡಿದು ನಗರದ ಕೆಲ ಕಾಲೇಜುಗಳ ಮುಂದೆ ಡ್ರಗ್ಸ್ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು. ಆರೋಪಿಗಳು ಡ್ರಗ್ಸ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನ ಬಂಧಿಸಿದ್ದಾರೆ. ಸದ್ಯ ಇಬ್ಬರ ವಿರುದ್ದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಬಿಸ್ಕತ್, ಚಾಕಲೇಟ್ ಪ್ಯಾಕೆಟ್ ಗಳಲ್ಲಿ ಡ್ರಗ್ಸ್ ಸಪ್ಲೈ..
ಮತ್ತೊಂದು ಕಡೆ ಕೆ.ಜಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ಥೈಲ್ಯಾಂಡ್ ನಿಂದ ಬಂದಿದ್ದ ಅನುಮಾನಸ್ಪಾದ ಪಾರ್ಸೆಲ್ ನಲ್ಲಿದ್ದ 3 ಕೋಟಿ ಮೌಲ್ಯದ 3 ಕೆ.ಜಿ.ಹೈಡ್ರೊಗಾಂಜಾವನ್ನ ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.ಅಂಚೆ ಕಚೇರಿಗೆ ವಿದೇಶದಿಂದ ಅನುಮಾನ್ಪಾಸದ ಪಾರ್ಸೆಲ್ ಬರುತ್ತಿರುವ ಬಗ್ಗೆ ಕಸ್ಟಮ್ಸ್ ಇಲಾಖೆಯ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ವಿದೇಶಿ ಕಂಪನಿಗಳ ಬಿಸ್ಕತ್, ಚಾಕಲೇಟ್ ಪ್ಯಾಕೇಟ್ ಗಳಲ್ಲಿ ಡ್ರಗ್ಸ್ ಮಾರೆ ಮಾಚಿ ಅಪರಿಚಿತ ಆರೋಪಿಗಳು ನಗರಕ್ಕೆ ತರಿಸಿಕೊಂಡಿದ್ದರು.ಈ ಬಗ್ಗೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಒಟ್ಟಾರೆ ನಗರವನ್ನ ಡ್ರಗ್ ಮುಕ್ತ ಮಾಡಬೇಕು ಎಂದು ಪೊಲೀಸರು ಸಾಕಷ್ಟು ಸರ್ಕಸ್ ಮಾಡುತ್ತಿದ್ರು ಸಹ ಯಾವುದಾದರೂ ಒಂದು ರೂಪದಲ್ಲಿ ಮಾದಕ ಜಾಲ ವಿಸ್ತರಿಸುತ್ತಿದೆ. ಇದನ್ನ ಬುಡದಿಂದಲೇ ಕಿತ್ತೊಗೆಯಲು ಮತ್ತಷ್ಟು ರೀತಿಯಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕೆಲಸ ಮಾಡಬೇಕಿದೆ.
ವರದಿ: ವಿಶ್ವನಾಥ್ ಎನ್ ಹರಿಹರ ಜೀ ಕನ್ನಡ ನ್ಯೂಸ್ ಬೆಂಗಳೂರು