ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಿದ್ದತೆ ಹಾಗೂ ದಿನಾಂಕ ನಿಗಧಿ ಕುರಿತು ಚರ್ಚೆ ನಡೆಸಲು ಕೇಂದ್ರ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್, ಮಾರ್ಚ್ 28(ಬುಧವಾರ) ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ರಾಜ್ಯ ಚುನಾವಣಾ ಅಧಿಕಾರಿಗಳೊಂದಿಗೆ ರಾಜ್ಯ ವಿಧಾನಸಭೆ ಚುನಾವಣೆ ಸಿದ್ದತೆ ಹಾಗೂ ದಿನಾಂಕ ನಿಗಧಿ ಕುರಿತು ಸಮಾಲೋಚನೆ ನಡೆಸಲಿರುವ ಓಂ ಪ್ರಕಾಶ್ ರಾವತ್, ಚರ್ಚೆ ಬಳಿಕ ದೆಹಲಿಗೆ ವಾಪಸ್ಸಾಗಿ, ಈ ವಾರಾಂತ್ಯಕ್ಕೆ ಚುನಾವಣಾ ದಿನಾಂಕ ಘೋಷಿಸುವ ಸಾಧ್ಯತೆ ಇದೆ.