)
ಬೆಂಗಳೂರು : ರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡಿದ್ದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ಅಂತಿಮ ಹಂತಕ್ಕೆ ಬಂದಿದೆ. ನಿವೃತ್ತ ನ್ಯಾಯಮೂರ್ತಿ ಮೈಕೇಲ್ ಡಿ ಕುನ್ಹಾ ಏಕಸದಸ್ಯ ಆಯೋಗ ಕೊಟ್ಟಿದ್ದ ವರದಿಯನ್ನ ಸಿಎಂ ನೇತೃತ್ವದ ಸಂಪುಟ ಸಭೆ ಒಪ್ಪಿಕೊಂಡಿದೆ. ಸುಮಾರು ಅರ್ಧ ತಾಸು ಚರ್ಚೆ ನಡೆಸಿದ ಕ್ಯಾಬಿನೆಟ್ ವರದಿಯ ಶಿಫಾರಸುಗಳನ್ನ ಒಪ್ಪಿ ಕ್ರಮಕ್ಕೆ ಮುಂದಾಗಿದೆ.
ಕಾಲ್ತುಳಿತಕ್ಕೆ ಘಟನೆಗೆ ಆರ್ಸಿಬಿ ಪ್ರಾಂಚೈಸಿ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಇವೇಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯಾದ ಡಿಎನ್ಎ ಲೋಪ ದೋಷಗಳೇ ಕಾರಣವೆಂದು ಬೆಟ್ಟು ಮಾಡಿದೆ. ಮೂರು ಖಾಸಗಿ ಸಂಸ್ಥೆಗಳ ಪ್ರಮುಖರ ಮೇಲೆ ಇಂಡ್ಯವಿಷಲ್ ಕ್ರಮಕ್ಕೆ ಮುಂದಾಗಿದೆ. ಯಾರ ಮೇಲೆ ಯಾವ ಕ್ರಿಮಿನಲ್ ಕೇಸ್ ಹಾಕಬೇಕು. ಯಾವ ತೀರ್ಮಾನವನ್ನ ಕೈಗೊಳ್ಳಬೇಕೆಂಬ ಅಧಿಕಾರವನ್ನ ಗೃಹ ಸಚಿವ ಪರಮೇಶ್ವರ್ ವಿವೇಚನೆಗೆ ಬಿಟ್ಟಿದೆ. ಅಲ್ಲಿಗೆ ತನ್ನದೇನು ತಪ್ಪಿಲ್ಲ, ಎಲ್ಲವೂ ಸಂಸ್ಥೆಗಳದ್ದೇ ಎಂದು ಹೊಣೆ ಹೊರಸಿ, ತಾನು ಪ್ರಕರಣ ದಿಂದ ಬಚಾವ್ ಆಗಿದೆ.
ಇನ್ನು ಪ್ರಕರಣದ ಸಂಪೂರ್ಣ ವೈಫಲ್ಯಗಳ ಹಾಗೂ ಲೋಪ ದೋಷಗಳಿಗೆ ಮೂರು ಖಾಸಗಿ ಸಂಸ್ಥೆಗಳೇ ಕಾರಣ, ಇದ್ರಲ್ಲಿ ಇನ್ಯಾರದ್ದು ತಪ್ಪಿಲ್ಲವೆನ್ನುವಂತೆ ಸಂಪುಟ ಸಭೆ ನಿರ್ಧರಿಸಿದಂತಿದೆ. ಯಾಕಂದ್ರೆ ಆರ್ ಸಿಬಿ ಪ್ರಾಂಚೈಸಿ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ಕೆ.ಗೋವಿಂದರಾಜ್ ಮೂಲಕವೇ ಕಾರ್ಯಕ್ರಮ ಆಯೋಜನಗರ ಒಪ್ಪಿಗೆ ಪಡೆದಿತ್ತು ಎಂಬ ಮಾತಿದ್ದವು. ಗೋವಿಂದರಾಜು ಒತ್ತಡದಿಂದಾಗಿಯೇ ತರಾತುರಿಯಲ್ಲಿ ಸರ್ಕಾರ ಅನುಮತಿ ನೀಡಿತ್ತು.. ಆದ್ರೆ ಕಾಲ್ತುಳಿತಕ್ಕೆ ಗೋವಿಂದ ರಾಜು ಪಾತ್ರದ ಬಗ್ಗೆ ಎಲ್ಲಯೂ ಚಕಾರವಿಲ್ಲ. ವರದಿಯಲ್ಲೂ ಅವರ ಮೇಲೆ ಆರೋಪವಿಲ್ಲ. ಹೀಗಾಗಿ ಸಿಎಂ ಮಾಜಿ ರಾಜಕೀಯ ಕಾರ್ಯದರ್ಶಿ ಮೇಲೆ ಯಾವುದೇ ಕ್ರಮವಿಲ್ಲ ವೆಂಬುದನ್ನ ಕ್ಯಾಬಿನೆಟ್ ಒಪ್ಪಿಕೊಂಡಂತಿದೆ.
ಇದ್ರ ಜೊತೆಗೆ ಗುಪ್ತಚರ ವೈಫಲ್ಯದ ಬಗ್ಗೆಯೂ ನೋ ಎವಿಡೆನ್ಸ್ ಅಂತ ಷರಾ ಬರೆದಿದೆ. ಯಾಕಂದ್ರೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಸೇರ್ತಾರೆಂಬುದು ಗೊತ್ತಿದ್ರೂ, ಅವಘಡದ ಬಗ್ಗೆ ಸುಳಿವಿದ್ರೂ ಅದನ್ನ ಸಿಎಂ ಗಮನಕ್ಕೆ ತರುವಲ್ಲಿ ಗುಪ್ತಚರ ಇಲಾಖೆ ವೈಫಲ್ಯದ ಬಗ್ಗೆ ಆರೋಪಗಳಿದ್ವು. ಇದೇ ಕಾರಣಕ್ಕೆ ಆಗ ಗುಪ್ತಚರ ವಿಭಾಗದ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನ ಕಡ್ಡಾಯ ರಜೆ ಮೇಲೆ ಕಳಿಸಲಾಗಿತ್ತು. ಈ ತನಿಖಾ ಆಯೋಗದ ವರದಿಯಲ್ಲಿ ಇದರ ಬಗ್ಗೆ ಉಲ್ಲೇಖ ಮಾಡಬಹುದೆಂಬ ಮಾತುಗಳಿದ್ವು. ಆದ್ರೆ ವರದಿಯಲ್ಲೂ ಪಾತ್ರದ ಬಗ್ಗೆ ಕುರುಹುಗಳಿಲ್ಲ. ಕ್ಯಾಬಿನೆಟ್ ನಲ್ಲೂ ಕ್ರಮವಿಲ್ಲ.. ಅಲ್ಲಿಗೆ ಇಬ್ಬರನ್ನೂ ಸರ್ಕಾರ ರಕ್ಷಿಸಿದಂತೆ ಕಾಣ್ತಿದೆ.
ಇನ್ನು ಪ್ರಕರಣದಲ್ಲಿ ಪೊಲೀಸರ ವೈಫಲ್ಯವನ್ನ ಕುನ್ಹಾ ಆಯೋಗ ಎತ್ತಿ ಹಿಡಿದಿದೆ. ಪೊಲೀಸರ ನಿರ್ಲಕ್ಷ್ಯದಿಂದಲೇ ಈ ದೊಡ್ಡ ಪ್ರಮಾಣ ನಡೆದಿದೆ ಅನ್ನೋದನ್ನ ಒತ್ತಿ ಹೇಳಿದೆ. ಮೊದಲೇ ಮುನ್ನೆಚ್ಚರಿಕೆಯನ್ನ ಕೈಗೊಂಡಿದ್ದರೆ. ಹೆಚ್ಚಿನ ಭದ್ರತೆ ಒದಗಿಸಿದ್ದರೆ ಇಂತಹ ಅವಘಡ ಆಗ್ತಿರಲಿಲ್ಲ ಅನ್ನೋದನ್ನ ಉಲ್ಲೇಖಿಸಿದೆ. ಹಾಗಾಗಿ ಇಂದಿನ ಸಂಪುಟ ಸಭೆಯಲ್ಲೂ ಇದರ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದು, ಇಲಾಖಾ ತನಿಖೆ ನಡೆಸಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಹಾಗಾಗಿ ಇಲಾಖಾ ತನಿಯನ್ನ ಎದುರಿಸಬೇಕಿದೆ. ಇನ್ನು ತಕ್ಷಣ ಮುಜುಗರದಿಂದ ಪಾರಾಗೋಕೆ ಸರ್ಕಾರ ಘಟನೆ ನಡೆದ ಒಂದೇ ದಿನದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರು ಸೇರಿ, ಹಿರಿಯ ಅಧಿಕಾರಿಗಳನ್ನೇ ಹೊಣೆ ಮಾಡಿ ಸಸ್ಪೆಂಡ್ ಮಾಡಿತ್ತು.
ಅಂದು ಮಧ್ಯಾಹ್ನ 3:15 ಕ್ಕೆ ಮೂರು ಸಾವಾದ್ರೂ ಅದರ ಮಾಹಿತಿ ಕಮೀಷನರ್ ಗಮನಕ್ಕೆ ಬಂದಿದ್ದು ಸಂಜೆ 5:30ರ ನಂತರ. ಅಷ್ಟರೊಳಗೆ 7 ಮಂದಿ ಆದಾಗಲೇ ಸಾವನ್ನಪ್ಪಿದ್ರು ಅನ್ನೋದನ್ನ ಕುನ್ಹಾ ಕಮಿಟಿ ವರದಿಯಲ್ಲಿ ಉಲ್ಲೇಖಿಸಿತ್ತು. ಹಾಗಾಗಿ ಅಧಿಕಾರಿಗಳ ಮೇಲೆ ಅಮಾನತು ಶಿಕ್ಷೆ ವಾಪಸ್ ಪಡೆಯುವ ಅಧಿಕಾರವನ್ನ ಸಿಎಂಗೆ ಬಿಡಲಾಗಿದೆ. ಸಿಎಂ ದಯಾನಂದ್ ಸೇರಿ ಉಳಿದವರ ಅಮಾನತು ವಾಪಸ್ ಪಡೆಯಬಹುದು ಇಲ್ಲವೇ ಮುಂದುವರಿಸ ಬಹುದು. ಈಗಾಗಲೇ ದಯಾನಂದ್ ಸಸ್ಪೆಂಡ್ ವಾಪಸ್ ಗೆ ಮನವಿ ಮಾಡಿರೋದ್ರಿಂದ ಬಹುತೇಕ ಕೈಬಿಡುವ ಸಾಧ್ಯತೆಗಳಿವೆ.
ಒಟ್ನಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ವಿಚಾರ ಇಂದಿನ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿದ್ದು ಕೆಲವು ತೀರ್ಮಾನ ಕೈಗೊಳ್ಳಲಾಗಿದೆ. ಖಾಸಗಿ ಸಂಸ್ಥೆಗಳ ಮೇಲೆ ಕ್ರಮಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಆದರೆ ಸರ್ಕಾರ, ಗುಪ್ತಚರ ಇಲಾಖೆ ವೈಫಲ್ಯದ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೆ ಸೇಫ್ ಮಾಡುವ ಪ್ರಯತ್ನ ಮಾಡಿದೆ. ಪೊಲೀಸ್ ಅಧಿಕಾರಿಗಳಮೇಲಿನ ಅಮಾನತು ವಾಪಸ್ ಗೂ ಮುಂದಾಗಿದೆ. ಸರ್ಕಾರ ಸೇಫ್.ಸಂಸ್ಥೆ ಅಧಿಕಾರಿಗಳೇ ತಪ್ಪಿತಸ್ಥರು ಅನ್ನೊದನ್ನ ಎತ್ತಿ ತೋರಿಸಿದೆ..