ಚೌಕೀದಾರನ ವೇಷದಲ್ಲಿರುವ ಮೋದಿ ದೇಶದ ಕೀಲಿ ಕೈ ಕಳ್ಳರ ಕೈಗೆ ನೀಡಿದ್ದಾರೆ-ರಾಹುಲ್ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೋಲಾರದಲ್ಲಿ ಮೈತ್ರಿ ಪಕ್ಷದ ಚುನಾವಣಾ ಸಮಾವೇಶದಲ್ಲಿ ಮಾತನಾಡುತ್ತಾ  "ಮೋದಿಯವರು ಕಳ್ಳರಾಗಿರುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಹೀಗಾಗಿಯೇ ನಾನು ಹಾಗೂ ಈ ದೇಶದ ಜನರು ಚೌಕೀದಾರ್ ಚೋರ್ ಹೈ ಎಂದು ಧೈರ್ಯವಾಗಿ ಹೇಳುತ್ತೇವೆ ಎಂದರು.

Last Updated : Apr 13, 2019, 03:10 PM IST
ಚೌಕೀದಾರನ ವೇಷದಲ್ಲಿರುವ ಮೋದಿ ದೇಶದ ಕೀಲಿ ಕೈ ಕಳ್ಳರ ಕೈಗೆ ನೀಡಿದ್ದಾರೆ-ರಾಹುಲ್ ಗಾಂಧಿ  title=
Photo courtesy: Twitter

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೋಲಾರದಲ್ಲಿ ಮೈತ್ರಿ ಪಕ್ಷದ ಚುನಾವಣಾ ಸಮಾವೇಶದಲ್ಲಿ ಮಾತನಾಡುತ್ತಾ  "ಮೋದಿಯವರು ಕಳ್ಳರಾಗಿರುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಹೀಗಾಗಿಯೇ ನಾನು ಹಾಗೂ ಈ ದೇಶದ ಜನರು ಚೌಕೀದಾರ್ ಚೋರ್ ಹೈ ಎಂದು ಧೈರ್ಯವಾಗಿ ಹೇಳುತ್ತೇವೆ ಎಂದರು.

"ಚೌಕೀದಾರನ ವೇಷ ಹಾಕಿಕೊಂಡಿರುವ ಮೋದಿಯವರು ದೇಶದ ಕೀಲಿ ಕೈ ಅನ್ನು ಕಳ್ಳರ ಕೈಗೆ ನೀಡಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಬಂದ ನಂತರ ಕಳ್ಳರ ಕೈಯಲ್ಲಿ ಇರುವ ಬೀಗದ ಕೈಯನ್ನು ಕಸಿದು ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವಂತಹ ಯುವಕರಿಗೆ ನೀಡುತ್ತೇವೆ" ಎಂದು  ಭರವಸೆ ನೀಡಿದರು.  

ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ "ಮೋದಿಯವರು ತಮ್ಮನ್ನ ತಾವು ದೇಶಭಕ್ತ ಎಂದು ಹೇಳುತ್ತಾ ಸುಳ್ಳು ಹೇಳಿಕೊಳ್ಳುತ್ತಿದ್ದಾರೆ. ಬಹುಶಃ ನನಗೆ ತಿಳಿದಂತೆ ಯಾವ ದೇಶ ಭಕ್ತರೂ ಸಹ ದೇಶದ ವಿಷಯದಲ್ಲಿ ಸುಳ್ಳು ಹೇಳುವುದಿಲ್ಲ.ಈ ದೇಶವು ಪ್ರೀತಿಗೆ ಮತ್ತು ಸಾಮರಸ್ಯಕ್ಕೆ ಹೆಸರಾಗಿದೆ.ಹೀಗಾಗಿ ಇಲ್ಲಿ ಕೋಮು ದ್ವೇಷಕ್ಕೆ, ಸುಳ್ಳು ಹಬ್ಬಿಸುವುದಕ್ಕೆ ಅವಕಾಶವಿಲ್ಲ ಎಂಬುದನ್ನು ಮೋದಿಯವರು ಅರ್ಥ ಮಾಡಿಕೊಳ್ಳಲಿ ಎಂದರು. 

"ಕರ್ನಾಟಕ ರಾಜ್ಯವು ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಹೇಳಿ ಮಾಡಿಸಿದ ಕ್ಷೇತ್ರವಾಗಿದೆ.ಆದರೆ ಅಭಿವೃದ್ಧಿಯ ದೃಷ್ಟಿಯಲ್ಲಿ ಇಂತಹ ಸ್ಥಳವನ್ನು ಸೂಕ್ತವಾಗಿ ಬಳಸಿಕೊಳ್ಳಲು ವಿಫಲವಾಗಿರುವ ಮೋದಿ ಸರ್ಕಾರವು ಜಿಎಸ್ ಟಿ ಹಾಗೂ ನೋಟ್ ಬ್ಯಾನ್ ಮೂಲಕ ದೇಶದ ಉದ್ಯಮ ಕ್ಷೇತ್ರದ ಬೆಳವಣಿಗೆಯನ್ನು ಹಾಳು ಮಾಡಿದ್ದಾರೆ" ಎಂದು  ರಾಹುಲ್ ಕಿಡಿ ಕಾರಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷವು ನೂತನ ವಾಗಿ ತನ್ನ  ಪ್ರನಾಳಿಕೆಯಲ್ಲಿ ಘೋಷಿಸಿರುವ ನ್ಯಾಯ ಯೋಜನೆ ಬಗ್ಗೆ ಮಾತನಾಡುತ್ತಾ" ನ್ಯಾಯ್ ಯೋಜನೆಯನ್ನು ಘೋಷಿಸಿದಾಗ ಮೋದಿಯವರ ಮುಖದಲ್ಲಿ ದುಃಖವು ಆವರಿಸಿತ್ತು.ಆದರೆ ಶ್ರೀಮಂತರಿಗೆ ಹಣವನ್ನು ನೀಡುವಾಗ ಇವರಿಗೆ ಬಡವರ ನೆನಪಾಗುವುದಿಲ್ಲ, ಬದಲಿಗೆ ಶ್ರೀಮಂತರಿಗೆ ಸಂತೋಷದಿಂದಲೇ ಇವರು ಹಣ ನೀಡುತ್ತಾರೆ. ಮೋದಿಯವರೇ ಅನಿಲ್ ಅಂಬಾನಿಯನ್ನು ಅಪ್ಪಿಕೊಳ್ಳುತ್ತೀರ,ರೈತರನ್ನು ಅಪ್ಪಿಕೊಳ್ಳಲು ನಿರಾಕರಿಸುತ್ತೀರ. ನೀರವ್ ಮೋದಿ ಜೊತೆ ಫೋಟೋ ತೆಗೆದುಕೊಳ್ಳುತ್ತೀರಾ, ಬಡವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಹಿಂಜರಿಯುತ್ತೀರ. ಇದಕ್ಕೆ ಕಾರಣವೇನೆಂದು ಹೇಳುತ್ತೀರಾ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

Trending News