close

News WrapGet Handpicked Stories from our editors directly to your mailbox

ರಾಜಕೀಯ ಹೈಡ್ರಾಮಕ್ಕೆ ಅಂತ್ಯ ಹಾಡಲು ಮುಂದಾದ ಸಿಎಂ: ವಿಶ್ವಾಸ ಮತಯಾಚನೆಗೆ ಹೆಚ್‌ಡಿಕೆ ನಿರ್ಧಾರ!

ನನಗೆ ವಿಶ್ವಾಸಮತ ಯಾಚನೆಗೆ ಸಮಯ ಕೊಡಿ- ಸಭಾಪತಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನವಿ

Yashaswini V Yashaswini V | Updated: Jul 12, 2019 , 01:42 PM IST
ರಾಜಕೀಯ ಹೈಡ್ರಾಮಕ್ಕೆ ಅಂತ್ಯ ಹಾಡಲು ಮುಂದಾದ ಸಿಎಂ: ವಿಶ್ವಾಸ ಮತಯಾಚನೆಗೆ ಹೆಚ್‌ಡಿಕೆ ನಿರ್ಧಾರ!
Pic Courtesy: ANI

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಮಂಗಳವಾರದವರೆಗೆ ಯಥಾಸ್ಥಿತಿ ಮುಂದುವರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ. ಏತನ್ಮಧ್ಯೆ, ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ರಾಜ್ಯ ರಾಜಕೀಯ ಹೈಡ್ರಾಮಕ್ಕೆ ಅಂತ್ಯ ಹಾಡಲು ಮುಂದಾಗಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ನನಗೆ ವಿಶ್ವಾಸಮತ ಯಾಚನೆಗೆ ಸಮಯ ಕೊಡಿ ಎಂದು ಸಭಾಪತಿ ಕೆ. ಆರ್. ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ವಿಶ್ವಾಸ ಮತಯಾಚನೆಗೆ ಸಮಯ ಕೋರಿ ಪ್ರತಿ ಪಕ್ಷ ಬಿಜೆಪಿಗೆ ಶಾಕ್ ನೀಡಲು ಮುಂದಾಗಿರುವ ಹೆಚ್‌ಡಿಕೆ, ಸದನದ ಬೆಂಬಲವಿದ್ದರೆ ಮಾತ್ರ ನಾನು ಇಲ್ಲಿ ಇರಬಹುದು. ಹಾಗಾಗಿ ವಿಶ್ವಾಸ ಮತಯಾಚನೆ ತಮಗೆ ಅನಿವಾರ್ಯವಾಗಿದ್ದು. ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಮಾಡಿ ಎಂದು ಸ್ಪೀಕರ್ ಅವರನ್ನು ಕೋರಿದ್ದಾರೆ.

ಸ್ವಯಂ ಪ್ರೇರಣೆಯಿಂದ ನಾನು ವಿಶ್ವಾಸಮತ ಮಂಡಿಸಲು ನಿರ್ಧರಿಸಿದ್ದೇನೆ. ಇಂದು ಅನಿವಾರ್ಯವಾಗಿ ನಾನು ಈ ಮಾತು ಹೇಳುತ್ತಿದ್ದೇನೆ. ಹಲವು ಶಾಸಕರ ನಿರ್ಧಾರದಿಂದ ಎಲ್ಲರಿಗೂ ಗೊಂದಲ ಉಂಟಾಗಿದೆ. ನಾನೇನು ಶಾಶ್ವತವಾಗಿ ಈ ಅಧಿಕಾರದಲ್ಲಿ ಕೂರಬೇಕೆಂದು ಈ ಸ್ಥಾನಕ್ಕೆ ಬಂದಿಲ್ಲ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಹೇಳಿದರು.