ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ, ಏನು ಬೇಕಾದರೂ ಆಗಬಹುದು: ಯಡಿಯೂರಪ್ಪಗೆ ಸಿಎಂ ಎಚ್ಚರಿಕೆ

ನಮ್ಮ ಕುಟುಂಬದ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿರಲಿ. ನಾನೂ ಅಧಿಕಾರದಲ್ಲಿದ್ದೇನೆ, ನಮ್ಮದೇ ಸರ್ಕಾರ, ಒಂದು ದಿನದಲ್ಲಿ ಏನು ಬೇಕಾದರೂ ಮಾಡಬಹುದು ಎಂದು ಎಚ್ಚರಿಕೆ ನೀಡಿದರು.

Last Updated : Sep 20, 2018, 01:17 PM IST
ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ, ಏನು ಬೇಕಾದರೂ ಆಗಬಹುದು: ಯಡಿಯೂರಪ್ಪಗೆ ಸಿಎಂ ಎಚ್ಚರಿಕೆ title=

ಬೆಂಗಳೂರು: ಸಾರ್ವಜನಿಕವಾಗಿ ಮಾತನಾಡುವ ನಾಲಿಗೆ ಹಿಡಿತದಲ್ಲಿರಲಿ, ಗಾಜಿನ ಮನೆಯಲ್ಲಿ ಕುಳಿತಿದ್ದೀರಿ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ, ಒಂದೇ ದಿನದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯಡಿಯೂರಪ್ಪಗೆ ಎಚ್ಚರಿಕೆ ನೀಡಿದ್ದಾರೆ. 

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ನನಗಿಂತಲೂ ಹಿರಿಯರು, ಪದ ಬಳಕೆಯ ಮೇಲೆ ಅವರು ಹಿಡಿತ ಸಾಧಿಸಬೇಕು. ಅಪ್ಪ ಮಕ್ಕಳು ಜೈಲಿಗೆ ಅಟ್ಟುವುದೇ ತಮ್ಮ ಉದ್ದೇಶ ಎಂದು ಈ ಹಿಂದೆ ಹೇಳಿದ್ದರು. ಆದರೆ ಹೋಗಿ ಬಂದವರು ಯಾರು ಎಂಬುದನ್ನು ತಿಳಿದುಕೊಳ್ಳಬೇಕು. ನಮ್ಮ ಕುಟುಂಬವನ್ನು ಜೈಲಿಗೆ ಅಟ್ಟುವ ಕುರಿತು ಬಿಎಸ್ ವೈ ಮಾತನಾಡುತ್ತಿದ್ದಾರೆ. ಅದರೆ ಅವರು ಗಾಜಿನ ಮನೆಯಲ್ಲಿ ಕುಳಿತಿದ್ದೇನೆ ಎಂಬುದನ್ನು ಮರೆಯಬಾರದು. ನಮ್ಮ ಕುಟುಂಬದ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿರಲಿ. ನಾನೂ ಅಧಿಕಾರದಲ್ಲಿದ್ದೇನೆ, ನಮ್ಮದೇ ಸರ್ಕಾರ, ಒಂದು ದಿನದಲ್ಲಿ ಏನು ಬೇಕಾದರೂ ಮಾಡಬಹುದು ಎಂದು ಎಚ್ಚರಿಕೆ ನೀಡಿದರು.

ಮುಂದುವರೆದು, ರಾಜ್ಯದಲ್ಲಿ ಅಪ್ಪ-ಮಕ್ಕಳು ಲೂಟಿ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಆದರೆ ಹೈಕೋರ್ಟ್'ನಲ್ಲಿ ಶಿವರಾಂ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆ ನಡೆಯುತ್ತಿದೆ. ನಾನು ಈ ವರೆಗೂ ಸಮಾಧಾನದಿಂದ ಇದ್ದೇನೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಹೀಗೇ ಯಡಿಯೂರಪ್ಪ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ ನಮಗೂ ಹೇಳಲು ಸಾಕಷ್ಟಿದೆ ಎಂಬುದನ್ನು ನಾವು ತೋರಿಸಿಕೊಡುತ್ತೇವೆ ಎಂದು ಸಿಎಂ ಕುಮಾರಸ್ವಾಮಿ ಕಿಡಿ ಕಾರಿದರು.
 

Trending News