)
ಬೆಂಗಳೂರು : ಸಿಲಿಕಾನ್ ಸಿಟಿ ಎಂದ್ರೆ ಎಂದರೆ ಟ್ರಾಫಿಕ್, ಟ್ರಾಫಿಕ್ ಎಂದರೆ ಸಿಲಿಕಾನ್ ಸಿಟಿ. ಟ್ರಾಫಿಕ್ ಸಮಸ್ಯೆಯನ್ನು ಯಾವ ಸರ್ಕಾರಗಳು ಸರಿಪಡಿಸಲು ಆಗಿಲ್ಲ. ಅದರ ಬದಲಾಗಿ ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚಳವಾಗ್ತಿದೆ. ಇದರ ಜೊತೆಗೆ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಸಂಖ್ಯೆನೂ ಹೆಚ್ಚಾಗಿದೆ.
ಒಂದೆಡೆ ಟ್ರಾಫಿಕ್ ಕಿರಿಕಿರಿ, ಇವೆಲ್ಲದರ ನಡುವೆ ಕೆಲಸಕ್ಕೆ ಅಥವಾ ಇನ್ಯಾವುದೇ ತುರ್ತು ಸಂದರ್ಭದಲ್ಲಿ ನಗರದಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಇನ್ನೂ ಟ್ರಾಫಿಕ್ ಫೈನ್ ಆದ್ರೂ ಜನ ಕಟ್ಟಲಿ ಎಂಬ ಉದ್ದೇಶಕ್ಕೆ ರಾಜ್ಯ ಸರ್ಕಾರ ಮತ್ತು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ದಂಡ ಪಾವತಿಸಲು ಶೇಕಡಾ 50% ರ ರಿಯಾಯಿತಿ ಕೊಟ್ಟಿದ್ರು. ವಾಹನದ ಮೇಲಿನ ದಂಡದಲ್ಲಿ ಅರ್ಧ ಹಣವನ್ನು ಕಟ್ಟಿದರೆ ಸಾಕು, ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳಿಂದ ಪಾರಾಗಬಹುದು. ಇದರಿಂದ ಕೋಟಿ- ಕೋಟಿ ದಂಡ ಸಹ ವಸೂಲಿ ಆಗಿದೆ. ಆದ್ರೆ ಸಿಎಂ ಸರ್ಕಾರಿ ಕಾರಿನ (CM Siddaramaiah car) ಮೇಲೆ ದಂಡ ಇರೋದು ಪತ್ತೆಯಾಗಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಫೈನ್ ಕಟ್ಟಲಿ ಅಂತಾ ಆಗ್ರಹಿಸಿದ್ದಾರೆ.
ಹೌದು.. ಸಿಎಂ ಸಿದ್ದರಾಮಯ್ಯ ಬಳಸುವ ಗೌರ್ನಮೆಂಟ್ ಕಾರಿನ ಮೇಲೆ 7 ಟ್ರಾಫಿಕ್ ವಾಯ್ಲೇಷನ್ ಕೇಸ್ ಗಳ ದಾಖಲೆ ಸಮೇತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬರೋಬ್ಬರಿ 2000 ರೂಪಾಯಿ ಟ್ರಾಫಿಕ್ ಫೈನ್ ಸಿಎಂ ಕಾರಿನ ಮೇಲಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಕಾರಿನ ಫೋಟೋ ಹಾಕಿ ಫೈನ್ ಕಟ್ಟುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. KA 05 GA 2023 ಕಾರಿನ ಮೇಲೆ ಬರೋಬ್ಬರಿ 7 ಟ್ರಾಫಿಕ್ ವಾಯ್ಲೇಷನ್ ಕೇಸ್ ಇದ್ದು, ಸದ್ಯ ಟ್ರಾಫಿಕ್ ಫೈನ್ 50% ಡಿಸ್ಕೌಂಟ್ ಇದೆ ಫೈನ್ ಕಟ್ಕೊಳಿ ಸಿಎಂ ಅಂತಾ ಸಾರ್ವಜನಿಕರು ಹೇಳಿದ್ದಾರೆ.
Karnataka CM traffic violations : ಈ ಕಾರಿನ ಮೇಲೆ ಸೀಟ್ ಬೆಲ್ಟ್ ಹಾಗೂ ಓವರ್ ಸ್ಪೀಡ್ ಫೈನ್ ಕೇಸ್ ದಾಖಲಾಗಿದೆ. ಹೀಗಾಗಿ ಸಿದ್ದರಾಮಯ್ಯನವರೇ ನೀವು ಮೊದಲು ಫೈನ್ ಕಟ್ಟಿ. ನಂತರ ಜನಸಾಮಾನ್ಯರು ಕಟ್ತಾರೆ ಅಂತಾ ಜನ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಯಾವಾಗ ಸರ್ಕಾರ ಫೈನ್ ಕಟ್ಟಲು 50% ಆಫರ್ ನೀಡಿತ್ತೋ, ಇದನ್ನು ಸಾಕಷ್ಟು ವಾಹನ ಸವಾರರು ಪಾಲಿಸುತ್ತಿದ್ದಾರೆ. ದಂಡವನ್ನು ಕಟ್ಟಿ ನಿರಾಳವಾಗಿದ್ದಾರೆ. ಆದರೆ, ಈ ನಿಯಮ ಎಲ್ಲಾರಿಗೂ ಒಂದೇ ಅಲ್ವಾ. ಸಿಎಂಗೂ ಒಂದೇ, ಜನಸಾಮಾನ್ಯರಿಗೂ ಒಂದು ಆಗಬಾರದು. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದ್ದು, ಸಿಎಂ ತಮ್ಮ ಸಿಬ್ಬಂದಿಗೆ ಹೇಳಿ ಫೈನ್ ಕಟ್ಟಿಸ್ತಾರ ಅಂತಾ ಕಾದು ನೋಡಬೇಕಿದೆ.