ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ. ಸಾಧನಾ ಸಮಾವೇಶಕ್ಕೆ ಹರಿದುಬಂದ ಜನಸಾಗರ. 2578 ಕೋಟಿಗಳ ಅನುದಾನ ನೀಡುತ್ತಾ ವಿಪಕ್ಷಗಳಿಗೆ ಸಿಎಂ ಗುದ್ದು. ಭಾಷಣದಲ್ಲಿ ಡಿಕೆಶಿ ಹೆಸರು ಪ್ರಸ್ತಾಪಿಸದಕ್ಕೆ ಸ್ವಪಕ್ಷಿಯರ ವಿರುದ್ಧ ಗರಂ ಆದ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಡಿಸಿಎಂ ಡಿಕೆಶಿ ಎದುರೇ ಸಿದ್ದುಗೆ ಜನಗಳ ಜೈಕಾರ. ಮೋದಿ ಟೀಕಿಸುತ್ತಾ ಎಲ್ಲರ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಎಂದ ಖರ್ಗೆ. ಮೈಸೂರು ಸಮಾವೇಶದ ಕಂಪ್ಲೀಟ್ ಡಿಟೆಲ್ಸ್ ಇಲ್ಲಿದೆ.

ಮೈಸೂರು : ಸದಾ ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಕೊಡುಗೆ ಏನು, ಸ್ವಂತ ಜಿಲ್ಲೆಗೆ ಏನು ಮಾಡಿಲ್ಲ ಎಂದು ಟೀಕಿಸುತ್ತಿದ್ದ ವಿಪಕ್ಷಗಳಿಗೆ ಇಂದು ಸಿಎಂ ಸಿದ್ದರಾಮಯ್ಯ 2578 ಕೋಟಿ ರೂಪಾಯಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ. ಅಲ್ಲದೆ ಇತ್ತೀಚಿಗೆ ಸಿಎಂ ಬದಲಾವಣೆ ಅನ್ನುತ್ತಿದ್ದ ಸ್ವಪಕ್ಷದ ನಾಯಕರಿಗೆ ವಿಪಕ್ಷದ ನಾಯಕರಿಗೂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನದ ಮೂಲಕ ನನ್ನನ್ನು ಬದಲಾವಣೆ ಮಾಡೋದು ಅಷ್ಟು ಸುಲಭವಲ್ಲ ಎಂಬ ಸಂದೇಶ ರವಾನೆ ಮಾಡಿದ್ದಾರೆ.
ಮೈಸೂರಿನ ಮಹಾರಾಜ ಗ್ರೌಂಡ್ ನಲ್ಲಿ ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನೆ ಹಾಗೂ ಮೈಸೂರಿಗೆ ಸಾವಿರಾರು ರೂಪಾಯಿಗಳ ಅನುದಾನದ ಅಭಿವೃದ್ಧಿಗೆ ಕಾರ್ಯಕ್ರಮಕ್ಕೆ ಸಿಎಂ ಚಾಲನೆ ನೀಡಿದ್ರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಡಿಸಿಎಂ ಡಿಕೆ, ಗೃಹ ಸಚಿವ ಪರಮೇಶ್ವರ್, ಸಚಿವರಾದ ವೆಂಕಟೇಶ್, ರಹೀಂ ಖಾನ್, ಮುನಿಯಪ್ಪ ಸೇರಿ ಕಾಂಗ್ರೆಸ್ ಎಂಪಿಗಳು ಶಾಸಕರು ಎಂ.ಎಲ್.ಸಿ ಗಳು ಉಪಸ್ಥಿತರಿದ್ದರು. ವೇದಿಕೆಯ ಮಧ್ಯಭಾಗದಿಂದ ಜನರತ್ತ ಕೈಬಿಸುತ್ತಾ ಸಿದ್ದರಾಮಯ್ಯ ಮಲ್ಲಿಕಾರ್ಜುನ್ ಖರ್ಗೆ ಡಿಕೆಶಿ ಎಂಟ್ರಿ ತೆಗೆದುಕೊಂಡರು. ಈ ವೇಳೆ ನೆರೆದಿದ್ದ ಜನರು ಸಿದ್ದರಾಮಯ್ಯ ಭಾವಚಿತ್ರ ಹಿಡಿದು ಜೈಕಾರ ಹಾಕುತ್ತಾ ಹೂಮಳೆ ಸುರಿಸಿದ್ರು
ಇನ್ನೂ ಕಾರ್ಯಕ್ರಮದ ಮೊದಲ ಭಾಗದಲ್ಲೇ ಸ್ವಾಗತ ಭಾಷಣ ಮಾಡುತ್ತಿದ್ದ ಸಚಿವ ಮಹದೇವಪ್ಪ ಡಿಸಿಎಂ ಡಿಕೆ ಶಿವಕುಮಾರ್ ಹೆಸರನ್ನು ಮರೆತರೂ ಈ ವೇಳೆ ಡಿಕೆ ಗರಂ ಆಗಿದ್ದು ಕೂಡ ಕಂಡು ಬಂತು, ತಕ್ಷಣ ಮಹದೇವಪ್ಪ ಪಿಎ ನೆನಪಿಸಿದ ಬಳಿಕ ಕೊನೆಯಲ್ಲಿ ಡಿಕೆಶಿ ಹೆಸರು ಹೇಳಿದ ಪ್ರಸಂಗ ನಡೆಯಿತು. ಇನ್ನು ಅಬ್ಬರದ ಭಾಷಣ ಮಾಡಿದ ಮಲ್ಲಿಕಾರ್ಜುನ್ ಖರ್ಗೆ ಮೋದಿಯನ್ನು ಅಹಂಕಾರಿ ಎಂದು ಟೀಕಿಸುತ್ತಾ, ಬಿಜೆಪಿ ಏನು ಕೆಲ್ಸ ಮಾಡಲ್ಲ ಕೇವಲ ಮಾತನಾಡುತ್ತಾರೆ. ನಮ್ಮದು ಕೆಲಸ ಮಾಡುವ ಪಕ್ಷ ಅಂತ ಹೇಳಿದ್ರು. ಅಲ್ಲದೆ ವೇದಿಕೆ ಮೇಲಿದ್ದ ಎಲ್ಲರಿಗೂ ಒಗ್ಗಟ್ಟಿನ ಪಾಠ ಮಾಡಿ ಎಲ್ಲರ ನಾಯಕತ್ವದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದ್ರು
ಮಲ್ಲಿಕಾರ್ಜುನ್ ಖರ್ಗೆ, ಸಿಎಂ, ಭಾಷಣಕ್ಕೂ ಮುನ್ನ ಡಿಕೆಶಿ ಕಾರ್ಯಕ್ರಮದಿಂದ ಡಿಕೆಶಿ ನಿರ್ಗಮನ ಜನರಲ್ಲಿ ಗೊಂದಲ ಮೂಡುವಂತೆ ಮಾಡಿತು. ಬಳಿಕ ಭಾಷಣ ಮಾಡಲು ಬಂದ ಸಿದ್ದರಾಮಯ್ಯ ಡಿಕೆ ಹೆಸರನ್ನು ಹೇಳದೆ ಭಾಷಣ ಮಾಡಿದ್ರು.ಈ ವೇಳೆ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ್ ಸಿಎಂ ಬಳಿ ಡಿಕೆಶಿ ಹೆಸರನ್ನು ಮುಖ್ಯವಾದ ಪ್ರಸ್ತಾಪಿಸಿಲ್ಲ ಎಂದ್ರು. ಈ ವೇಳೆ ಸಿಎಂ ಸಿಡಿಮಿಡಿಗೊಂಡು ವೇದಿಕೆ ಮೇಲಿದ್ದವರ ಹೆಸರನ್ನು ಹೇಳ್ತೀನಿ ಇಲ್ಲದವರ ಹೆಸರು ಯಾಕೆ ಎಂದ್ರು. ಬಳಿಕ ಡಿಕೆಶಿ ಹೆಸರು ಹೇಳಿ ಕೆಲಸ ಇರೋ ಕಾರಣದಿಂದ ಬೆಂಗಳೂರಿಗೆ ಹೊಗಿದ್ದಾರೆ ಎಂದ್ರು. ಬಿಜೆಪಿ ಜೆಡಿಎಸ್ ನಾಯಕರಿಗೆ ಮಾತಿನಲ್ಲಿ ಚಾಟಿ ಬೀಸಿದ ಸಿಎಂ ನಾನು ಏನೆಲ್ಲಾ ಅಭಿವೃದ್ದಿ ಮಾಡಿದ್ದೀನಿ ಬನ್ನಿ ಚರ್ಚೆ ಮಾಡೋಣ ಅಂತ ಸವಾಲು ಹಾಕಿದ್ರು. ಅಲ್ಲದೆ ಇದು ನನ್ನ ಶಕ್ತಿ ಪ್ರದರ್ಶನ ಅಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಶಕ್ತಿ ಪ್ರದರ್ಶನ. ಮತ್ಸರ ಇರ್ಬೇಕು ಆದ್ರೆ ಇಷ್ಟರ ಮಟ್ಟಿಗೆ ಇರಬಾರದು ಎಂದು ಸ್ವಪಕ್ಷದ ನಾಯಕರ ಜೊತೆಗೆ ವಿಪಕ್ಷಗಳ ನಾಯಕರಿಗೂ ಸಂದೇಶ ರವಾನೆ ಮಾಡಿದ್ರು
ಇದನ್ನೂ ಓದಿ:ಮೈಸೂರಿನಲ್ಲಿ ಕಾಂಗ್ರೆಸ್ ಬೃಹತ್ ಸಾಧನಾ ಸಮಾವೇಶ
ಒಟ್ಟಾರೆಯಾಗಿ ಸಾಧನಾ ಸಮಾವೇಶದ ಜೊತೆ ಜೊತೆಗೆ ಸಿಎಂ ಸಿದ್ದರಾಮಯ್ಯ ಮಲ್ಲಿಕಾರ್ಜುನ್ ಖರ್ಗೆ ಮುಂದೆಯೇ ತವರಲ್ಲಿ ಶಕ್ತಿ ಪ್ರದರ್ಶನ ಮಾಡಿ ಹೈ ಕಮಾಂಡ್ ಹಾಗೂ ಬದಲಾವಣೆ ಮಾತುಗಳನ್ನು ಆಡುತ್ತಿದ್ದವರಿಗೆ ನನ್ನ ಬದಲಾವಣೆ ಅಷ್ಟು ಸುಲಭವಲ್ಲ ಅಂತ ಮೆಸೇಜ್ ಕೊಟ್ಟಿದ್ದಾರೆ.