ಪರೀಕ್ಷೆಯಲ್ಲಿ ಚೀಟಿಂಗ್ ತಡೆಯಲು ಈ ಕಾಲೇಜಿನಲ್ಲಿ ಮಾಡಿದ್ದೇನು...!

ಖಾಸಗಿ ಕಾಲೇಜೊಂದರಲ್ಲಿ ಚೀಟಿಂಗ್ ತಡೆಯಲು ವಿದ್ಯಾರ್ಥಿಗಳಿಗೆ ರಟ್ಟಿನ ಬಾಕ್ಸ್ ಹಾಕಿಸಿ ಪರೀಕ್ಷೆ ಬರೆಸಲಾಗಿದೆ.

Updated: Oct 19, 2019 , 10:15 AM IST
ಪರೀಕ್ಷೆಯಲ್ಲಿ ಚೀಟಿಂಗ್ ತಡೆಯಲು ಈ ಕಾಲೇಜಿನಲ್ಲಿ ಮಾಡಿದ್ದೇನು...!

ಬೆಂಗಳೂರು: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಚೀಟಿಂಗ್ ಮಾಡುವುದನ್ನು ತಪ್ಪಿಸಲು ಹಲವು ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ರಾಜ್ಯದ ಖಾಸಗಿ ಕಾಲೇಜೊಂದರಲ್ಲಿ ಚೀಟಿಂಗ್ ತಡೆಯಲು ವಿದ್ಯಾರ್ಥಿಗಳಿಗೆ ರಟ್ಟಿನ ಬಾಕ್ಸ್ ಹಾಕಿಸಿ ಪರೀಕ್ಷೆ ಬರೆಸಲಾಗಿದೆ. ಹೌದು, ಅಕ್ಟೋಬರ್ 16 ರಂದು ಹಾವೇರಿ ಜಿಲ್ಲೆಯ ಭಗತ್ ಪೂರ್ವ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಇಂತಹ ವಿಲಕ್ಷಣ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ರಟ್ಟಿನ ಬಾಕ್ಸ್ ಧರಿಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ತೋರಿಸುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿವೆ. ಅಂತಹ ತಂತ್ರವನ್ನು ಜಾರಿಗೆ ತಂದಿದ್ದಕ್ಕಾಗಿ ಕಾಲೇಜು ತೀವ್ರ  ಸಮಸ್ಯೆ ಎದುರಿಸುತ್ತಿದೆ.

ಕಾಲೇಜು ಆಡಳಿತದ ಸದಸ್ಯರೊಬ್ಬರು ರಟ್ಟಿನ ಬಾಕ್ಸ್ ಧರಿಸಿದ ವಿದ್ಯಾರ್ಥಿಗಳ ಚಿತ್ರಗಳನ್ನು ಪೋಸ್ಟ್ ಮಾಡಿ, "ಹಾವೇರಿಯ ಭಗತ್ ಪಿಯು ಕಾಲೇಜು. ಇದು ಇಂದು ನಮ್ಮ ಕಾಲೇಜು ಮಧ್ಯಂತರ ಪರೀಕ್ಷೆಯಾಗಿದೆ" ಎಂದು ಬರೆದಾಗ ಈ ವಿಷಯ ಬೆಳಕಿಗೆ ಬಂದಿದೆ.

ಈ ವಿಷಯವನ್ನು ಶಿಕ್ಷಣ ಇಲಾಖೆಯು ಕೈಗೆತ್ತಿಕೊಂಡಿದ್ದು, ಕಾಲೇಜಿಗೆ ಈ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ನೀಡಲಾಗಿದೆ.