ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಬೆಳಗಾವಿಯ ಸೊಸೆ ಕರ್ನಲ್ ಸೋಫೀಯಾ!

ಕರ್ನಲ್ ಸೋಫೀಯಾ ಖುರೇಷಿ ಅವರ ಪತಿ, ಕರ್ನಲ್ ತಾಜುದ್ದೀನ್ ಖುರೇಷಿ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದ ನಿವಾಸಿ. ಇವರು ಸಹ ಭಾರತೀಯ ಸೇನೆಯ ಮೆಕ್ಯಾನೈಸ್ಡ್ ಇನ್‌ಫೆಂಟ್ರಿಯಲ್ಲಿ ಕರ್ನಲ್ ಆಗಿ, ಪ್ರಸ್ತುತ ಜಾನ್ಸಿಯಲ್ಲಿ ಸೇವೆಯಲ್ಲಿದ್ದಾರೆ.

Written by - Manjunath Naragund | Last Updated : May 8, 2025, 10:57 AM IST
  • 2015ರಲ್ಲಿ ಪ್ರೇಮ ವಿವಾಹದ ಮೂಲಕ ಒಂದಾದ ಈ ದಂಪತಿಗಳು
  • ಭಾರತೀಯ ಸೇನೆಯಲ್ಲಿ ಒಟ್ಟಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ
  • ಕರ್ನಲ್ ಸೋಫೀಯಾ ಖುರೇಷಿ, ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಭಾರತದ ಮೊದಲ ಮಹಿಳಾ ಅಧಿಕಾರಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಬೆಳಗಾವಿಯ ಸೊಸೆ ಕರ್ನಲ್ ಸೋಫೀಯಾ!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22, 2025ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರನ್ನು ಕೊಂದ ಪಾಕಿಸ್ತಾನ ಬೆಂಬಲಿತ ಉಗ್ರರ ವಿರುದ್ಧ ಭಾರತೀಯ ಸೇನೆಯು ನಡೆಸಿದ 'ಆಪರೇಷನ್ ಸಿಂದೂರ್' ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಕಾರ್ಯಾಚರಣೆಯನ್ನು ಜಗತ್ತಿಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಮಹಿಳೆ ಬೇರೆ ಯಾರೂ ಅಲ್ಲ, ಕರ್ನಲ್ ಸೋಫೀಯಾ ಖುರೇಷಿ, ನಮ್ಮ ಬೆಳಗಾವಿಯ ಹೆಮ್ಮೆಯ ಸೊಸೆ, ಈಗ ಭಾರತದ ಹೆಮ್ಮೆಯಾಗಿದ್ದಾರೆ.

Add Zee News as a Preferred Source

ಗುಜರಾತ್‌ನ ವಡೋದರಾದಲ್ಲಿ ಜನಿಸಿದ ಕರ್ನಲ್ ಸೋಫೀಯಾ ಖುರೇಷಿ, ಭಾರತೀಯ ಸೇನೆಯಲ್ಲಿ ಒಬ್ಬ ಪ್ರತಿಷ್ಠಿತ ಅಧಿಕಾರಿಯಾಗಿದ್ದಾರೆ. 1999ರಲ್ಲಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯ ಮೂಲಕ ಸೇನೆಗೆ ಸೇರಿದ ಅವರು, ಬಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಅವರ ತಂದೆ ತಾಜುದ್ದೀನ್ ಖುರೇಷಿ ಭಾರತೀಯ ಸೇನೆಯಲ್ಲಿ ಧಾರ್ಮಿಕ ಶಿಕ್ಷಕರಾಗಿದ್ದರೆ, ಅವರ ಅಜ್ಜ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಸದ್ಯ ಜಮ್ಮುವಿನಲ್ಲಿ ಕರ್ನಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸೋಫೀಯಾ, ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ವಿವರಗಳನ್ನು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಹಿಂದಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜೊತೆಗೆ ಇಂಗ್ಲಿಷ್‌ನಲ್ಲಿ ವಿವರಣೆ ನೀಡಿದರು.

ಬೆಳಗಾವಿಯ ಸೊಸೆ: ಪತಿ ತಾಜುದ್ದೀನ್ ಖುರೇಷಿಯೊಂದಿಗೆ ಪ್ರೇಮ ವಿವಾಹ

ಕರ್ನಲ್ ಸೋಫೀಯಾ ಅವರ ಪತಿ, ಕರ್ನಲ್ ತಾಜುದ್ದೀನ್ ಖುರೇಷಿ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದವರು. ಇವರೂ ಸಹ ಭಾರತೀಯ ಸೇನೆಯ ಮೆಕ್ಯಾನೈಸ್ಡ್ ಇನ್‌ಫೆಂಟ್ರಿಯಲ್ಲಿ ಕರ್ನಲ್ ಆಗಿ ಸದ್ಯ ಜಾನ್ಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2015ರಲ್ಲಿ ಪ್ರೇಮ ವಿವಾಹವಾದ ಈ ದಂಪತಿಗಳು, ಭಾರತೀಯ ಸೇನೆಯಲ್ಲಿ ಒಟ್ಟಿಗೆ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವುದು ಎಲ್ಲರಿಗೂ ಸ್ಫೂರ್ತಿಯಾಗಿದೆ.ಕರ್ನಲ್ ಸೋಫೀಯಾ ಖುರೇಷಿ, ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿಯಾಗಿ ಈಗಾಗಲೇ ಇತಿಹಾಸ ಸೃಷ್ಟಿಸಿದ್ದಾರೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಯಶಸ್ಸಿನ ಮೂಲಕ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ ಅವರು, ವಡೋದರಾದಿಂದ ಬೆಳಗಾವಿಯವರೆಗೆ, ರಾಷ್ಟ್ರದಾದ್ಯಂತ ಹೆಮ್ಮೆಯ ಸಂಕೇತವಾಗಿದ್ದಾರೆ.Image

ಆಪರೇಷನ್ ಸಿಂದೂರ್: ಭಯೋತ್ಪಾದಕರಿಗೆ ತಕ್ಕ ಉತ್ತರ

ಮೇ 7, 2025ರ ರಾತ್ರಿ ಭಾರತೀಯ ಸೇನೆ, ವಾಯುಪಡೆ, ಮತ್ತು ನೌಕಾಪಡೆಯ ಸಂಯೋಜಿತ ಕಾರ್ಯಾಚರಣೆಯಡಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಭಯೋತ್ಪಾದಕ ಕೇಂದ್ರಗಳ ಮೇಲೆ 24 ನಿಖರ ಕ್ಷಿಪಣಿ ದಾಳಿಗಳನ್ನು ನಡೆಸಲಾಯಿತು. ಈ ಗುರಿಗಳಲ್ಲಿ ಜೈಷ್-ಎ-ಮೊಹಮ್ಮದ್‌ನ ಬಹವಾಲ್‌ಪುರ ಕೇಂದ್ರ, ಲಷ್ಕರ್-ಎ-ತೊಯ್ಬಾದ ಮುರಿದ್ಕೆ ಬೇಸ್, ಮತ್ತು ಮುಜಫ್ಫರಾಬಾದ್‌ನ ಸವಾಯಿ ನಾಲಾ ಕ್ಯಾಂಪ್ ಸೇರಿವೆ. ಈ ದಾಳಿಗಳು 2008ರ ಮುಂಬೈ ದಾಳಿ, 2016ರ ಪಠಾಣ್‌ಕೋಟ್ ದಾಳಿ, ಮತ್ತು ಇತ್ತೀಚಿನ ಪಹಲ್ಗಾಮ್ ದಾಳಿಗಳಿಗೆ ಸಂಬಂಧಿಸಿದ ಉಗ್ರರ ತಾಣಗಳನ್ನು ಗುರಿಯಾಗಿಸಿದವು. ಕಾರ್ಯಾಚರಣೆಯಲ್ಲಿ 80ಕ್ಕೂ ಹೆಚ್ಚು ಉಗ್ರರು ಹತರಾದರೆ, ಜೈಷ್ ಮುಖ್ಯಸ್ಥ ಮಸೂದ್ ಅಜರ್‌ನ ಕುಟುಂಬದ 10 ಸದಸ್ಯರು ಸೇರಿದಂತೆ ಹಲವು ಪ್ರಮುಖ ಉಗ್ರರು ನಾಶವಾದರು.

ಪಹಲ್ಗಾಮ್ ದಾಳಿಯ ದುರಂತ ಮತ್ತು ಪ್ರತೀಕಾರ

ಪಹಲ್ಗಾಮ್‌ನ ಬೈಸಾರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಒಬ್ಬ ಕಾಶ್ಮೀರಿ ಕುದುರೆ ಸವಾರನೊಬ್ಬ ಹತ್ಯೆಯಾಗಿದ್ದನು. ಈ ದಾಳಿಯು ಕಾಶ್ಮೀರದ ಪ್ರವಾಸೋದ್ಯಮವನ್ನು ಗುರಿಯಾಗಿಸಿ, ಸಾಮುದಾಯಿಕ ಒಡಕು ಸೃಷ್ಟಿಸುವ ಉದ್ದೇಶ ಹೊಂದಿತ್ತು ಎಂದು ವಿದೇಶ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ. ಆದರೆ, ಭಾರತದ ಜನತೆ ಮತ್ತು ಸರ್ಕಾರದ ಏಕತೆಯಿಂದ ಈ ಯೋಜನೆ ವಿಫಲವಾಯಿತು. ಆಪರೇಷನ್ ಸಿಂದೂರ್ ಮೂಲಕ ಭಾರತವು ಭಯೋತ್ಪಾದಕರಿಗೆ ತಕ್ಕ ಉತ್ತರವನ್ನು ನೀಡಿದೆ, ಜೊತೆಗೆ ದೇಶದ ಗಡಿಗಳಲ್ಲಿ ಉನ್ನತ ಮಟ್ಟದ ಎಚ್ಚರಿಕೆಯನ್ನು ಘೋಷಿಸಿದೆ.

ಕರ್ನಲ್ ಸೋಫೀಯಾ ಖುರೇಷಿ ಮತ್ತು ತಾಜುದ್ದೀನ್ ಖುರೇಷಿಯವರ ಸೇವೆ, ಭಾರತೀಯ ಸೇನೆಯ ಶಕ್ತಿ ಮತ್ತು ಏಕತೆಯನ್ನು ಪ್ರತಿಬಿಂಬಿಸುತ್ತದೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಯಶಸ್ಸಿನೊಂದಿಗೆ, ಭಾರತವು ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Trending News