ಆಯೋಗದ ತೀರ್ಪಿನ ಪ್ರಕಾರ, ಎದುರುದಾರ ಎಚ್.ಎ.ಇ.ಎಪ್.ಸಿ ಏರಗೊ ವಿಮಾ ಕಂಪನಿಯು ಒಂದು ತಿಂಗಳ ಒಳಗೆ ಈ ಕೆಳಗಿನ ಪರಿಹಾರವನ್ನು ದೂರುದಾರರಿಗೆ ನೀಡಬೇಕೆಂದು ನಿರ್ದೇಶಿಸಲಾಗಿದೆ

ಧಾರವಾಡ: ದಾವಣಗೇರೆ ಜಿಲ್ಲೆಯ ಚನ್ನಗಿರಿಯ ಹೊಸಕೇರಿ ನಿವಾಸಿ ಹನುಮಂತ ಅನ್ನುವವರು ದಿ:10/01/2022 ರಂದು ತನ್ನ ದ್ವ್ವಿ-ಚಕ್ರ ವಾಹನದಲ್ಲಿ ಹೋಗುವಾಗ ಅಪಘಾತಕ್ಕೀಡಾಗಿ ಮೃತ ಪಟ್ಟಿದ್ದರು. ಆ ವಾಹನಕ್ಕೆ ಮೃತ ಹೆಚ್.ಡಿ.ಎಫ್ ಸಿ. ಏರಗೋ ಕಂಪನಿಯಿಂದ ವಿಮೆ ಮಾಡಿಸಿದ್ದರು. ಅದರಲ್ಲಿ ವಾಹನದ ಮಾಲೀಕ, ಸವಾರನಿಗೆ ರೂ.15 ಲಕ್ಷ ಮೊತ್ತದ ಪಿ.ಎ.ಕವರೇಜ್ ಸೇರಿತ್ತು. ತನ್ನ ಗಂಡ ಅಪಘಾತದಲ್ಲಿ ಮೃತಪಟ್ಟ ನಂತರ ಆತನ ಹೆಂಡತಿ ರೋಜಾ ವಿಮೆ ಪರಿಹಾರ ಕೊಡುವಂತೆ ದಾಖಲೆಗಳ ಸಮೇತ ವಿಮಾ ಕಂಪನಿಗೆ ಕ್ಲೇಮ ಅರ್ಜಿ ಸಲ್ಲಿಸಿದ್ದರು.
ದೂರುದಾರಳ ಕ್ಲೇಮನ್ನು ಎದುರುದಾರ ವಿಮಾ ಕಂಪನಿಯವರು ತಿರಸ್ಕರಿಸಿದರು. ಅಂತಹ ವಿಮಾ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೋರಿ ದೂರುದಾರಳು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ.27/08/2024 ರಂದು ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ, ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರು ದಾರಳು ಮೃತ ಹನುಮಂತಪ್ಪನ ಹೆಂಡತಿ ಇದ್ದಾಳೆ. ಮೃತತನ್ನ ದ್ವಿ ಚಕ್ರ ವಾಹನಕ್ಕೆ ಪ್ರೀಮಿಯಮ್ ಕಟ್ಟಿ ಎದುರುದಾರ ವಿಮಾ ಕಂಪನಿಯಿಂದ ವಿಮೆ ಪಡೆದಿದ್ದಾನೆ. ಆ ವಿಮೆ ಅಪಘಾತ ಮತ್ತು ಮೃತನ ಸಾವಿನ ಕಾಲಕ್ಕೆ ಚಾಲ್ತಿಯಿರುತ್ತದೆ. ವಿಮೆಯಲ್ಲಿ ಮೃತ ಮಾಲೀಕ, ಸವಾರನ ರಕ್ಷಣೆಗಾಗಿ ರೂ.15 ಲಕ್ಷ ಮೊತ್ತಕ್ಕೆ ಪಿ.ಎ.ಕವರೇಜ್ ಆಗಿರುತ್ತದೆ. ವಸ್ತು ಸ್ಥಿತಿ ಹೀಗಿರುವಾಗ ಮೃತ ಅಪಘಾತದಲ್ಲಿ ಸಾವನ್ನಪ್ಪಿದ ಕಾರಣಕ್ಕಾಗಿ ನಾಮಿನಿಯಾಗಿರುವ ದೂರುದಾರಳಿಗೆ ರೂ.15 ಲಕ್ಷ ಪರಿಹಾರ ಕೊಡುವುದು ಎದುರುದಾರ ವಿಮಾ ಕಂಪನಿಯವರ ಕರ್ತವ್ಯವಾಗಿದೆ. ಆದರೆ ಅವರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಪರಿಣಾಮವಾಗಿ ಎದುರುದಾರ ವಿಮಾ ಕಂಪನಿಯವರು ದೂರುದಾರಳಿಗೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಎದುರುದಾರ ಎಚ್.ಎಇ.ಎಪ್.ಸಿ ಏರಗೊ ವಿಮಾ ಕಂಪನಿಯವರು ದೂರುದಾರಳಿಗೆ ರೂ. 15 ಲಕ್ಷ ಪರಿಹಾರ ಮತ್ತು ಅದರ ಮೇಲೆ ದೂರು ದಾಖಲಿಸಿದಾಗಿನಿಂದ ಶೇ10 ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಆಯೋಗ ನಿರ್ದೇಶಿಸಿದೆ. ದೂರುದಾರಳಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.50,000 ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000 ಕೊಡುವಂತೆ ಎದುರುದಾರ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.