ರಾಜ್ಯ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ವಿರುದ್ಧ ಎಸಿಬಿಗೆ ದೂರು

ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಎಸಿಬಿಯಲ್ಲಿ ದೂರು ದಾಖಲಾಗಿದೆ.

Updated: Jun 12, 2018 , 05:27 PM IST
ರಾಜ್ಯ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು: ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ದೂರು ದಾಖಲಾಗಿದೆ.

ಉದ್ಯೋಗ ಮತ್ತು ತರಬೇತಿ ಇಲಾಖೆಯ ಮಾಜಿ ನೌಕರರಾದ ಶಂಕರ್ ದೇವೇಗೌಡ ಅವರು ಕೆ.ರತ್ನಪ್ರಭಾ ಅವರ ವಿರುದ್ಧ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಎಸಿಬಿಗೆ ದೂರು ಸಲ್ಲಿಸಿದ್ದಾರೆ. 

ಕರ್ನಾಟಕದ ಸರ್ಕಾರದ ಬಡ್ತಿ ಮೀಸಲು ಕಾಯ್ದೆ 2002 ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. 2017ರ ಫೆ.9ರಂದು ನೀಡಿದ್ದ ಆದೇಶದಿಂದಾಗಿ 45 ಇಲಾಖೆಗಳಲ್ಲಿ ಒಟ್ಟು 3,799 ಸಿಬ್ಬಂದಿ ಹಿಂಬಡ್ತಿ ಪಡೆಯಲಿದ್ದರು. ಆದರೆ, ಉದ್ಯೋಗ ಮತ್ತು ತರಬೇತಿ ಇಲಾಖೆಯ 62 ಜನರಿಗೆ ಹಿಂಬಡ್ತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ ಸಹ ಕೋರ್ಟ್ ನ ಆದೇಶ ಜಾರಿಗೊಳಿಸದಂತೆ ಇಲಾಖೆಯ ಕಾರ್ಯದರ್ಶಿಗಳ ಮೇಲೆ ರತ್ನಪ್ರಭಾ ಅವರು ಒತ್ತಡ ಹೇರಿದ್ದಾರೆ ಎಂದು ಶಂಕರ್ ದೇವೇಗೌಡ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.