ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮೈಬಣ್ಣವನ್ನು ಅವಹೇಳನ ಮಾಡುವ ಮೂಲಕ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಅವರ ಪಕ್ಷದ ಮನುವಾದದಲ್ಲಿನ ವರ್ಣಾಶ್ರಮ ಬಗೆಗಿನ ಪ್ರೀತಿ ಹಾಗೂ ದಮನಿತರ ವಿರುದ್ಧದ ಮನಸ್ಥಿತಿ ತೆರೆದಿಟ್ಟಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.


COMMERCIAL BREAK
SCROLL TO CONTINUE READING

‘ಬಿಜೆಪಿಯವರು ವರ್ಣಾಶ್ರಮ ಪದ್ಧತಿಯನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತಿದೆ, ಅ ಪ್ರಯತ್ನವೇ ಆರಗ ಅವರ ಬಾಯಲ್ಲಿ ಈಗ ಹೊರಬಂದಿದೆ. ಇದೇ ಆರಗ ಜ್ಞಾನೇಂದ್ರ ಹಿಂದೆ ತುಳುನಾಡಿನ ನೆಲಮೂಲ ಸಂಸ್ಕೃತಿಯ ದೈವಗಳನ್ನು ಅವಮಾನಿಸಿದ್ದರು, ಈಗ ಒಂದೇ ಮಾತಿನಲ್ಲಿ ಉತ್ತರ ಕರ್ನಾಟಕದ ಜನರನ್ನು, ದಲಿತ ಸಮುದಾಯವನ್ನು, ಕಪ್ಪು ವರ್ಣದ ಜನರನ್ನು ಮತ್ತು ದೇಶದ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರನ್ನು ಅವಮಾನಿಸಿದ್ದಾರೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.


ʼಶಕ್ತಿʼಯ ವ್ಯಯದ ಮೊತ್ತ ಬಿಡುಗಡೆ ಮಾಡಿದ ಸರ್ಕಾರ : ಯಾವ ಸಾರಿಗೆ ನಿಗಮಕ್ಕೆ ಎಷ್ಟು..?


‘ಬಿಜೆಪಿಗೆ ಸಭ್ಯ ರಾಜಕಾರಣ ಮಾಡುವುದು ತಿಳಿದೇ ಇಲ್ಲವೇ? ಬಿಜೆಪಿಗೆ ಉತ್ತರ ಕರ್ನಾಟಕದ ಜನರ ಬಗ್ಗೆ, ದಲಿತರ ಬಗ್ಗೆ, ಕಪ್ಪುವರ್ಣದವರ ಬಗ್ಗೆ ನಿಜಕ್ಕೂ ಗೌರವ ಇದ್ದಿದ್ದೇ ಆದರೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರನ್ನು, ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಹಾಗೂ ಉತ್ತರ ಕರ್ನಾಟಕದ ಜನತೆಯನ್ನು ಅತ್ಯಂತ ಕೀಳು ಅಭಿರುಚಿಯ ಮಾತುಗಳಿಂದ ಅವಮಾನಿಸಿದ ಆರಗ ಜ್ಞಾನೇಂದ್ರ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕು. ಅವರ ಹೇಳಿಕೆಗೆ ಬಿಜೆಪಿ ಪಕ್ಷ ಕ್ಷಮೆ ಕೇಳಬೇಕು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.


ವರ್ಕೌಟ್‌ ಮಾಡಿ ಸುಸ್ತಾದ ಶಿಲ್ಪಾ ಶೆಟ್ಟಿ, ವಿಡಿಯೋ ನೋಡಿ


ಮಲ್ಲಿಕಾರ್ಜುನ್ ಖರ್ಗೆಯವರ ಹಾಗೂ ದಲಿತರ ಕ್ಷಮೆ ಕೇಳಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.