ಪೊಲಿಟಿಕಲ್ ರಿಸರ್ಚ್ ಇಂಟರ್ನ್ಶಿಪ್ ಮೂಲಕ ಸಂಘಟನೆಗೆ ಮುಂದಾದ ಕಾಂಗ್ರೆಸ್

   

Last Updated : Aug 4, 2018, 02:33 PM IST
ಪೊಲಿಟಿಕಲ್ ರಿಸರ್ಚ್ ಇಂಟರ್ನ್ಶಿಪ್ ಮೂಲಕ ಸಂಘಟನೆಗೆ ಮುಂದಾದ ಕಾಂಗ್ರೆಸ್

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೇಸ್ ಪಕ್ಷ ನೂತನ  ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಮುಂದಾಗಿದೆ.

ಇತ್ತೀಚಿಗೆ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿರುವ  ದಿನೇಶ್ ಗುಂಡುರಾವ್ ಈಗ ಪೊಲಿಟಿಕಲ್ ರಿಸರ್ಚ್ ಇಂಟರ್ನ್ಶಿಪ್ ಕಾರ್ಯಕ್ರಮದ ಮೂಲಕ ಯುವಕರತ್ತ ಕಾಂಗ್ರೇಸ್ ಪಕ್ಷವನ್ನು ಕೊಂಡೊಯ್ಯುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ದಿನೇಶ್ ಗುಂಡುರಾವ್ ಅವರು ರಾಜಕೀಯ ನೆಲೆಗಟ್ಟು  ಮತ್ತು ರಾಜಕೀಯ ಸಂಶೋಧನೆಗಳ ಮೂಲಕ  ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದಲ್ಲದೆ ಪಕ್ಷಕ್ಕೆ ಸೇವೆ ಸಲ್ಲಿಸುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಯುವಕರನ್ನು ತಲುಪುವುದು ಕಾಂಗ್ರೇಸ್ ಪಕ್ಷಕ್ಕೆ ಅವಶ್ಯಕವಾಗಿರುವುದರಿಂದ ಈಗ ನೂತನ ಅಧ್ಯಕ್ಷರು ಈ ವಿಭಿನ್ನ ಕಾರ್ಯಕ್ರಮದ ಮೂಲಕ  ರಾಜ್ಯದಲ್ಲ್ಲಿ ಕಾಂಗ್ರೇಸ್ ಪಕ್ಷದ ಸಂಘಟನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. 

  

More Stories

Trending News